ಆ್ಯಪ್ನಗರ

ಪ್ರೇಮಿಗಳ ದಿನದಂದು ಸಮುದ್ರದಾಳದಲ್ಲಿ 17 ಜೋಡಿಗಳ ವಿವಾಹ (ವೀಡಿಯೋ ನೋಡಿ)

ಮದುವೆಯನ್ನು ಬಹಳ ವಿಶೇಷವಾಗಿ ಆಗಬೇಕು ಎಂದು ಹಾತೊರೆಯುವವರಿಗೆ ಥೈಲೆಂಡ್‌ ಕೈಬೀಸಿ ಕರೆಯುತ್ತಿದೆ. ಅಲ್ಲಿನ ಸರಕಾರವೇ ಸಮುದ್ರದ ಆಳದಲ್ಲಿ ಥೈಲೆಂಡ್‌ ಸಂಪ್ರದಾಯದಂತೆ ವಿವಾಹ ನಡೆಸಿಕೊಡುತ್ತಿದೆ.

Vijaya Karnataka Web 14 Feb 2019, 1:57 pm
ಥೈಲೆಂಡ್‌: ನವ ಜೀವನಕ್ಕೆ ಕಾಲಿಡುವ ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ಮದುವೆಯ ಕನಸಿರುತ್ತದೆ. ಆಕಾಶದಿಂದ ಕೆಳಗೆ ಹಾರುತ್ತ, ಹಿಮದ ರಾಶಿಯ ನಡುವೆ, ಜಲಪಾತದ ತುತ್ತತುದಿಯಲ್ಲಿ ಹೀಗೆ ನಾನಾ ರೀತಿಯ ಕ್ರೇಜ್‌ಗೆ ಇಂದಿನ ಯುವ ಜನಾಂಗ ಹಾತೊರೆಯುತ್ತಿದೆ. ಇವುಗಳ ನಡುವೆ ಪ್ರಸಕ್ತ ವರ್ಷದಿಂದ ಪ್ರೇಮಿಗಳ ದಿನದ ಅಂಗವಾಗಿ ಥೈಲೆಂಡ್‌ನಲ್ಲಿ ಸಮುದ್ರದೊಳಗಿನ ವಿವಾಹ ಮಹೋತ್ಸವ ಟ್ರೆಂಡಿಂಗ್‌ ಆಗುತ್ತಿದೆ.
Vijaya Karnataka Web Under water marriage


ಥೈಲೆಂಡ್‌ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಲ್ಲಿನ ಸರಕಾರ ಸಮುದ್ರದೊಳಗಿನ ಮದುವೆಗೆ ಪ್ರಶಸ್ತ್ಯ ನೀಡಿದ್ದು, ವಿಶೇಷ ಮುತುವರ್ಜಿ ವಹಿಸಿದೆ. ಪ್ರಸಕ್ತ ಪ್ರೇಮಿಗಳ ದಿನದ ಪ್ರಯುಕ್ತ 17 ಜೋಡಿಗಳು ಸಮುದ್ರದಾಳದಲ್ಲಿ ಮದುವೆಯಾಗುವ ಮೂಲಕ ನೂತನ ಸಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ನೀರಿನ ಆಳದಲ್ಲಿ ವಿಹರಿಸಲು ಸಕಲ ಸಿದ್ಧತೆಗಳೊಂದಿಗೆ ಸಮುದ್ರಕ್ಕೆ ಧುಮುಕುವ ಜೋಡಿಗೆ, ಆಳದಲ್ಲಿ ನಿರ್ಮಿಸಿದ ವಿಶೇಷ ಮಂಟಪದಲ್ಲಿ ಥೈಲೆಂಡ್‌ ಸಂಪ್ರದಾಯದಂತೆ ವಿವಾಹ ಮಾಡಿಸಲಾಗುತ್ತದೆ. ಸಮುದ್ರದ ಮಧ್ಯೆಯೇ ಮದುವೆಯಾದ ನವ ಜೋಡಿಗೆ ಶುಭ ಹಾರೈಸಿ, ದಾಖಲಾತಿಗೆ ಸಹಿ ಮಾಡಿಸಿಕೊಳ್ಳಲಾಗುತ್ತದೆ. ನೋಂದಾವಣಿ ಪತ್ರದೊಂದಿಗೆ ಸಮುದ್ರದಿಂದ ಮೇಲೆ ಬರುವ ಜೋಡಿಗಳು ನವ ಜೀವನಕ್ಕೆ ಕಾಲಿಡುತ್ತಾರೆ.

ಈ ವಿಸ್ಮಯ ಅನುಭವದ ಮದುವೆ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ. ಮದುವೆಯಾದರೆ ಹೀಗೆ ಆಗಬೇಕು ಎಂದು ಪ್ರೇಮಿಗಳು ಗುಸುಗುಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ