ಆ್ಯಪ್ನಗರ

ವಿಮಾನದಲ್ಲಿ ಪ್ರಯಾಣಿಸುವಾಗ ನಿದ್ದೆ ಮಾಡಿದ ಮಹಿಳೆ ಕಥೆ ಏನಾಯ್ತು ಗೊತ್ತೇ?

ಟಿಫನಿ ಆಡಮ್ಸ್‌ ಎಂಬಾಕೆ ಟೊರೊನ್ಟೊಗೆ ಪ್ರಯಾಣ ಬೆಳೆಸಿದ್ದಳು. ಏರ್‌ ಕೆನಡಾದಲ್ಲಿ ಪ್ರಯಾಣ ಮಾಡುತ್ತಾ ಚೆನ್ನಾಗಿ ನಿದ್ದೆ ಮಾಡಿದ್ದಾರೆ. ವಿಮಾನ ಟೊರೊನ್ಟೊ ವಿಮಾನ ನಿಲ್ದಾಣ ತಲುಪಿ ಕೆಲವಾರು ಗಂಟೆಗಳಾದ ಬಳಿಕ ಟಿಫನಿಗೆ ಎಚ್ಚರವಾಗಿದೆ.

Indiatimes 24 Jun 2019, 6:25 pm
ಪ್ರೈವೇಟ್‌ ಪ್ಲೇನ್‌ನಲ್ಲಿ, ಇತರೆ ಪ್ರಯಾಣಿಕರಿಲ್ಲದೆ ಒಂದೊಮ್ಮೆ ಸಂಚಾರ ಮಾಡಬೇಕು ಎಂಬ ಕನಸು ಕೆಲವರು ಕಂಡಿರಬಹುದು.
Vijaya Karnataka Web plane_1561275326_725x725

ಸ್ಕಾಟ್ಲಂಡ್‌ನ ಮಹಿಳೆಯೊಬ್ಬಳ ಈ ಕನಸು ರಾತ್ರೋರಾತ್ರಿ ಈಡೇರಿದೆ. ಆದರೆ ಈ ಅವಕಾಶ ಒಂದು ಬಾರಿಗೆ ಮಾತ್ರ ಸೀಮಿತವಾಗಿ, ವಿಮಾನ ಹಾರಾಟ ಮಾತ್ರ ಮಾಡಿಲ್ಲ! ಅಷ್ಟೇ!

ಏನಿದು ವಿಚಾರ ಅಂತೀರಾ.. ಈ ಮಹಿಳೆ ಏರ್‌ ಕೆನಡಾದಲ್ಲಿ ಒಬ್ಬಂಟಿಯಾಗಿ ಬಿಟ್ಟ ಕಥೆ ಇದು!

ಟಿಫನಿ ಆಡಮ್ಸ್‌ ಎಂಬಾಕೆ ಟೊರೊನ್ಟೊಗೆ ಪ್ರಯಾಣ ಬೆಳೆಸಿದ್ದಳು. ಏರ್‌ ಕೆನಡಾದಲ್ಲಿ ಪ್ರಯಾಣ ಮಾಡುತ್ತಾ ಚೆನ್ನಾಗಿ ನಿದ್ದೆ ಮಾಡಿದ್ದಾರೆ. ವಿಮಾನ ಟೊರೊನ್ಟೊ ವಿಮಾನ ನಿಲ್ದಾಣ ತಲುಪಿ ಕೆಲವಾರು ಗಂಟೆಗಳಾದ ಬಳಿಕ ಟಿಫನಿಗೆ ಎಚ್ಚರವಾಗಿದೆ. ಆ ವೇಳೆಗೆ ಬೋಯಿಂಗ್‌ 737ನಲ್ಲಿ ಟಿಫನಿ ಬಿಟ್ಟು ಬೇರಾರೂ ಇರಲಿಲ್ಲವಂತೆ! ಜತೆಗೆ ವಿಮಾನದಲ್ಲಿ ಕತ್ತಲು. ಬಾಗಿಲುಗಳು ಲಾಕ್‌ ಮಾಡಲಾಗಿತ್ತಂತೆ!

ತಮ್ಮ ನೈಟ್‌ಮೇರ್‌ ಅನುಭವವನ್ನು ಆಕೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಈ ಸ್ಟೋರಿ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಬಿಟ್ಟಿದೆ.
"ನಾನು ಮಧ್ಯರಾತ್ರಿ ಎಚ್ಚರಗೊಂಡೆ. ವಿಮಾನ ಲ್ಯಾಂಡ್‌ ಆದ ಕೆಲವಾರು ಗಂಟೆಗಳ ಬಳಿಕ ಎಚ್ಚರವಾದಾಗ ಸುತ್ತಲೂ ಕಗ್ಗತ್ತಲು. ಮೈ ನಡುಗಿಸುವ ಚಳಿ. ಕತ್ತಲೆಂದರೆ ಭಯವುಳ್ಳವರು ಈ ಅನುಭವವನ್ನು ಇನ್ನೂ ಚೆನ್ನಾಗಿ ವಿವರಿಸಲು, ಕಲ್ಪಿಸಲು ಸಾಧ್ಯ. ಒಂದೊಮ್ಮೆ ಅನಿಸಿದ್ದು, ಏನೋ ನನಗೆ ಕೆಟ್ಟ ಕನಸು ಬೀಳುತ್ತಿದೆ ಎಂದು! ಇದು ಹೇಗಾಯಿತು ಎಂದು ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೇನೆ! ಎಂದು ಆಕೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ!

ಅಷ್ಟೇ ಅಲ್ಲ... ವಿಮಾನ ಸಂಪೂರ್ಣವಾಗಿ ಆಫ್‌ ಆಗಿದ್ದರಿಂದ ಲೈಟ್‌ ಯಾವುದೂ ಕೆಲಸ ಮಾಡುತ್ತಿರಲಿಲ್ಲ. ತಮ್ಮ ಫೋನ್‌ ಸಹ ಚಾರ್ಜ್‌ ಮಾಡಲೂ ಆಗುತ್ತಿಲ್ಲ ಎಂದು ತಿಳಿದ ತಕ್ಷಣ ಟಿಫನಿ ಒಮ್ಮೆ ಗಾಬರಿಗೊಳಗಾಗಿದ್ದಾರೆ. ಅಷ್ಟೆ ಅಲ್ಲ ಸಂಪೂರ್ಣವಾಗಿ ಲಾಕ್‌ ಆಗಿದ್ದರಿಂದ ಪ್ಯಾನಿಕ್‌ ಆಗಿ ಕೂಗಾಡಿದರಂತೆ!


ಹೊರ ಬಂದಿದ್ದೇಗೆ ಗೊತ್ತೇ?
ಅಸಹಾಯಕವಾಗಿ ಕುಳಿತಲ್ಲೇ ಕೂರದೆ, ವಿಮಾನದಿಂದ ಹೊರಬರುವ ದಾರಿ ಕಂಡುಕೊಳ್ಳುವ ಪ್ರಯತ್ನದಲ್ಲಿ ಟಿಫನಿ ಯೋಚಿಸತೊಡಗಿದರು. ವಿಮಾನದಲ್ಲಿ ಕೊಂಚ ಅತ್ತಿಂದಿತ್ತ ಓಡಾಡಿದರು! ಕಾಕ್‌ಪಿಟ್‌ನಲ್ಲಿ ಟಾರ್ಚ್‌ ಇರುವುದನ್ನು ಬಾಗಿಲಿನ ಪಕ್ಕದ ಗ್ಲಾಸ್‌ನಿಂದ ಕಂಡರು. ಕಾಕ್‌ಪಿಟ್‌ ಬಾಗಿಲನ್ನು ಓಪನ್‌ ಮಾಡುವ ಪ್ರಯತ್ನದಲ್ಲಿ ಸಫಲವಾದ ಅವರು, ಟಾರ್ಚ್‌ ಹಿಡಿದು ಎದುರಿನ ಕನ್ನಡಿಯಿಂದ ಏರ್‌ಪೋರ್ಟ್‌ ಭಾಗಕ್ಕೆ ಟಾರ್ಚ್‌ ಉರಿಸುತ್ತಾ ಸನ್ನೆ ಮಾಡಲಾರಂಭಿಸಿದರು!

ಕೆಲ ನಿಮಿಷದಲ್ಲಿ ಕಗ್ಗತ್ತಲಲ್ಲಿ ನಿಂತಿದ್ದ ಖಾಲಿ ವಿಮಾನದಿಂದ ಬೆಳಕು ಕಂಡು, ಏರ್‌ಪೋರ್ಟ್‌ ಸಿಬ್ಬಂದಿಯೊಬ್ಬ ಹತ್ತಿರಕ್ಕೆ ಬಂದಬಿಟ್ಟಿದ್ದಾನೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಟಿಫನಿಯನ್ನು ವಿಮಾನದಿಂದ ಬಂಧಮುಕ್ತ ಗೊಳಿಸಲಾಗಿದೆ!

ನಿದ್ದೆ ಹೋಗಿದ್ದ ಪ್ರಯಾಣಿಕರ ಜತೆಗೆ ಇ ರೀತಿಯ ವರ್ತನೆ ಮಾಡುವುದು ಸರಿಯೇ ಎಂದು ಟಿಫನಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಘಟನೆಯ ಕುರಿತು ಅಧಿಕಾರಿಗಳು ತನಿಖೆಯನ್ನೂ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ