ಆ್ಯಪ್ನಗರ

ವರದಕ್ಷಿಣೆಗಾಗಿ ಕಿಡ್ನಿ ಮಾರಲು ಹೊರಟಿದ್ದ ಯುವತಿ

ಪ್ರೀತಿಸಿದ ಯುವಕನನ್ನು ಮದುವೆಯಾಗಬೇಕೆಂದು ಆ ಯುವತಿ ಸಾಕಷ್ಟು ಪರಿತಪಿಸಿದರು. ಹಿರಿಯರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಲು ಬಯಸಿದ್ದಳು. ಆದರೆ ತಂದೆತಾಯಿ ಒಪ್ಪಲಿಲ್ಲ.

ತೆಲುಗು ಸಮಯಂ 18 Oct 2017, 6:24 pm
ಪ್ರೀತಿಸಿದ ಯುವಕನನ್ನು ಮದುವೆಯಾಗಬೇಕೆಂದು ಆ ಯುವತಿ ಸಾಕಷ್ಟು ಪರಿತಪಿಸಿದರು. ಹಿರಿಯರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಲು ಬಯಸಿದ್ದಳು. ಆದರೆ ತಂದೆತಾಯಿ ಒಪ್ಪಲಿಲ್ಲ. ಪ್ರಿಯಕರನೊಂದಿಗೆ ಓಡಿ ಹೋಗಬೇಕು ಎಂದುಕೊಂಡಳು. ಆದರೆ ಅವನು ಮಾತ್ರ ಕೇಳಿದಷ್ಟು ದುಡ್ಡು ಕೊಟ್ಟರೆ ಮಾತ್ರ ಮದುವೆಯಾಗುತ್ತೇನೆ ಎಂದ. ಕೊಡಲು ಆಕೆ ಬಳಿ ಬಿಡಿಗಾಸು ಇಲ್ಲದ ಕಾರಣ ತನ್ನ ಕಿಡ್ನಿಯನ್ನೇ ಮಾರಲು ಸಿದ್ದವಾದಳು. ಈ ಘಟನೆ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಬೆಳಕು ಕಂಡಿದೆ.
Vijaya Karnataka Web woman tries to sell kidney to get married to her boyfriend
ವರದಕ್ಷಿಣೆಗಾಗಿ ಕಿಡ್ನಿ ಮಾರಲು ಹೊರಟಿದ್ದ ಯುವತಿ


ಬಿಹಾರ ಮೂಲದ 21 ವರ್ಷದ ಯುವತಿ ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ ಗಂಡನೊಂದಿಗೆ ಜಗಳ ಮಾಡಿಕೊಂಡು ಕಾರಣ ಆತನಿಂದ ದೂರವಾಗಿದ್ದಳು. ಆ ಬಳಿಕ ಇನ್ನೊಬ್ಬ ಯುವಕನ ಜತೆ ಪ್ರೀತಿಯಲ್ಲಿ ಬಿದ್ದಳು. ಆತನೊಂದಿಗೆ ಮದುವೆಗೆ ಆಕೆಯ ತಂದೆತಾಯಿ ಬಿಲ್ ಕುಲ್ ಒಪ್ಪಲಿಲ್ಲ. ಓಡಿಹೋಗಿ ಮದುವೆಯಾಗೋಣ ಎಂದು ಕೇಳಿದ್ದಕ್ಕೆ, ಪ್ರಿಯಕರ ಒಂದು ಲಕ್ಷ ಎಂಬತ್ತು ಸಾವಿರ ವರದಕ್ಷಿಣೆಯಾಗಿ ಕೊಟ್ಟರೆ ಮದುವೆಯಾಗುತ್ತೇನೆ ಎಂದಿದ್ದಾನೆ.

ದಿಕ್ಕು ತೋಚದ ಸ್ಥಿತಿಯಲ್ಲಿ ಆಕೆ ಒಂದು ಕಠಿಣ ನಿರ್ಧಾರ ತೆಗೆದುಕೊಂಡು ದಿಲ್ಲಿಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಹಣಕ್ಕಾಗಿ ಕಿಡ್ನಿ ದಾನಮಾಡಬೇಕು ಎಂದು ಆ ಯುವತಿ ಅಲ್ಲಿನ ವೈದ್ಯರಿಗೆ ತಿಳಿಸಿದ್ದಾಳೆ. ಆದರೆ ವೈದ್ಯರು ಅನುಮಾನಗೊಂಡು ಸ್ವಲ್ಪ ದಬಾಯಿಸಿ ಕೇಳಿದ್ದಾರೆ. ಆದರೆ ಯುವತಿಯಿಂದ ಸೂಕ್ತ ಉತ್ತರ ಸಿಕ್ಕಿಲ್ಲ.

ಕಡೆಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಮೇಲೆ ಸತ್ಯ ಗೊತ್ತಾಗಿದೆ. ಕಡೆಗೆ ಕೌನ್ಸೆಲಿಂಗ್ ನೀಡಿದ್ದಾರೆ. ಆ ಯುವಕನ ಮೇಲೆ ದೂರು ನೀಡುವಂತೆ ಕೋರಿದ್ದಾರೆ. ಆದರೆ ಆಕೆ ಅದನ್ನು ನಿರಾಕರಿಸಿದ್ದು ಮತ್ತೆ ಬಿಹಾರ್‌ಗೆ ಹೊರಟು ಹೋಗಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ