ಆ್ಯಪ್ನಗರ

ದೇಶದ ಸೇನೆಯನ್ನು ಟೀಕಿಸಿದ ಪಾಕ್ ಯುವತಿ

ಪಾಕಿಸ್ತಾನದ ಪ್ರಮುಖ ರಾಜಕಾರಣಿಯ ಮಗಳೊಬ್ಬಳು ತನ್ನದೇ ದೇಶದ ಸೈನ್ಯಕ್ಕೆ ಕ್ಯಾಕರಿಸಿ ಉಗಿದು ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ ಮಾಡಿದ್ದಾರೆ.

Vijaya Karnataka Web 1 Dec 2017, 1:16 pm
ಹೊಸದಿಲ್ಲಿ: ಪಾಕಿಸ್ತಾನದ ಪ್ರಮುಖ ರಾಜಕಾರಣಿಯ ಮಗಳೊಬ್ಬಳು ತನ್ನದೇ ದೇಶದ ಸೈನ್ಯಕ್ಕೆ ಉಗಿದು ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಅಪ್‌ಲೋಡ್ ವಿಡಿಯೋ ಜತೆಗೆ, ಆಕೆಯ ಟ್ವಿಟರ್ ಖಾತೆಯೂ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಕಣ್ಮರೆಯಾಗಿದೆ, ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
Vijaya Karnataka Web  pak politicians daughter slams pak army
ದೇಶದ ಸೇನೆಯನ್ನು ಟೀಕಿಸಿದ ಪಾಕ್ ಯುವತಿ


ತೆಹ್ರಿಕ್-ಇ.ಇನ್ಸಾಫ್ ಪಕ್ಷದ ಮುಖಂಡ ಇಮಾನ್ ಮಜರಿ ಪುತ್ರಿ ಶಿರಿನ್ ಮಜರಿ ಅವರು ಪೈಜಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪಾಕ್ ಸೇನೆಯ ಕಾರ್ಯಚರಣೆ ಹಾಗೂ ಪಾತ್ರದ ಬಗ್ಗೆ ಕಟುವಾಗಿ ಟೀಕಿಸಿರುವ ವೀಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೋ ಪಾಕ್ ದೇಶಾದ್ಯಂತ ಜನರು ವೀಕ್ಷಿಸಿದ್ದಾರೆ.


ದೈವನಿಂದನೆ ಆರೋಪದಲ್ಲಿ ಪಾಕಿಸ್ತಾನದ ಕಾನೂನು ಸಚಿವ ಝಾಹಿದ್‌ ಹಮೀದ್‌ ರಾಜೀನಾಮೆಗೆ ಆಗ್ರಹಿಸಿ ಇಸ್ಲಾಮಿಕ್ ಮೂಲಭೂತವಾದಿಗಳು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ ನಡುವಿನ ಫೈಜಬಾದ್‌ ಗೇಟ್‌ವೇಯಲ್ಲಿ, ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದರು. ಈ ವೇಳೆ ಭದ್ರತಾ ಪಡೆ ಹಾಗೂ ಪ್ರತಿಭಟನೆಕಾರರ ನಡುವೆ ಸಂಘರ್ಷ ನಡೆದು, ಘಟನೆಯಲ್ಲಿ 6 ಜನ ಬಲಿಯಾಗಿ, ನೂರಾರು ಮಂದಿ ಗಾಯಗೊಂಡಿದ್ದರು.

ಪ್ರತಿಭಟನೆ ವೇಳೆ ಪಾಕ್ ಸೇನೆ ನಡೆಸಿರುವ ಕಾರ್ಯಚರಣೆ ಅಮಾನವೀಯವಾಗಿದ್ದು, ಎಂದು ಆರೋಪಿಸಿದ ಶಿರಿನ್ ಪಾಕ್ ಸೇನೆಯನ್ನು ಕಟುವಾಗಿ ಟೀಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ