ಆ್ಯಪ್ನಗರ

ಟೆರರಿಸ್ಟ್‌ ಹಣೆಪಟ್ಟಿಗೆ ಸಿಖ್‌ ಬಾಲೆಯ ದಿಟ್ಟ ಉತ್ತರ

ಪಾಕಿಸ್ತಾನ ಪೋಷಿತ ಉಗ್ರರ ದಾಳಿಯ ಆತಂಕದಲ್ಲಿರುವ ಬ್ರಿಟನ್‌ನಲ್ಲಿ ಭಾರತೀಯರನ್ನು ಕೂಡ ಅಲ್ಲಿನ ಸ್ಥಳೀಯರು ಉಗ್ರರೆಂದು ಕರೆದು ಅವಮಾನಿಸುವ ವರ್ಣಬೇಧ ಪ್ರಕರಣಗಳು ಹೆಚ್ಚಾಗುತ್ತಿವೆ...

Vijaya Karnataka 11 Aug 2019, 8:17 am
ಲಂಡನ್‌: ಪಾಕಿಸ್ತಾನ ಪೋಷಿತ ಉಗ್ರರ ದಾಳಿಯ ಆತಂಕದಲ್ಲಿರುವ ಬ್ರಿಟನ್‌ನಲ್ಲಿ ಭಾರತೀಯರನ್ನು ಕೂಡ ಅಲ್ಲಿನ ಸ್ಥಳೀಯರು ಉಗ್ರರೆಂದು ಕರೆದು ಅವಮಾನಿಸುವ ವರ್ಣಬೇಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ 10 ವರ್ಷದ ಬಾಲಕಿ ಮುನ್ಸಿಮರ್‌ ಕೌರ್‌ ಮೈದಾನವೊಂದರಲ್ಲಿ ಆಟವಾಡುತ್ತಿದ್ದಾಗ ಸುತ್ತಲಿದ್ದ ಬ್ರಿಟನ್‌ನ ಮಕ್ಕಳು ಆಕೆಯೊಂದಿಗೆ ಆಟವಾಡಲು ನಿರಾಕರಿಸಿದರು. ಜತೆಗೆ 'ನಾವು ಉಗ್ರರೊಂದಿಗೆ ಆಟವಾಡುವುದಿಲ್ಲ' ಎಂದು ಬಾಲಕಿಗೆ ತಿಳಿಸಿ ತೆರಳಿದ್ದಾರೆ.
Vijaya Karnataka Web Kaur


ಇದರಿಂದ ಮನನೊಂದ ಬಾಲಕಿ ಮುನ್ಸಿಮರ್‌ ತನ್ನ ತಂದೆಯ ಟ್ವಿಟರ್‌ ಖಾತೆಯಲ್ಲಿ ವಿಡಿಯೊವೊಂದನ್ನು ಹರಿಬಿಟ್ಟಿದ್ದು ತನಗಾದ ಅವಮಾನವನ್ನು ವಿವರಿಸಿದ್ದಾಳೆ.


ಸಿಖ್ಖರು ಸ್ವಾಭಾವಿಕವಾಗಿ ಇತರರ ಬಗ್ಗೆ ಕಾಳಜಿ ವಹಿಸುವ ಉತ್ತಮ ಗುಣಹೊಂದಿದ್ದಾರೆ. ಆದರೆ ಅವರ ಬಗ್ಗೆ ವಿಶಾಲವಾದ ಜ್ಞಾನ ಹರಡಬೇಕಿದೆ. ಹಲವರಿಗೆ ಸಿಖ್ಖರ ಬಗ್ಗೆ ಸರಿಯಾಗಿ ತಿಳಿದೇ ಇಲ್ಲ.

ಈ ವರ್ಣಬೇಧ ನೀತಿಗೆ ತಲೆಬಾಗುವ ಬದಲು ತಲೆಎತ್ತಿ ನಾವು ನಮ್ಮ ಬಗ್ಗೆ ವಿದೇಶಿಯರಿಗೆ ಅರ್ಥ ಮಾಡಿಸಬೇಕಿದೆ ಎಂದು ಮುನ್ಸಿಮರ್‌ ವಿಡಿಯೊದಲ್ಲಿ ತನ್ನಂತೆ ಯಾತನೆ ಅನುಭವಿಸುತ್ತಿರುವ ಮಕ್ಕಳಿಗೆ ಕಿವಿಮಾತು ಹೇಳಿದ್ದಾಳೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಬಾಲಕಿಯ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ