ಆ್ಯಪ್ನಗರ

2 ವರ್ಷದಲ್ಲಿ 11 ಮಂದಿ ಮದುವೆಯಾಗಿ ಪರಾರಿಯಾದ ಬೆಡಗಿ

ಒಂದರ ನಂತರ ಒಂದರಂತೆ ಹನ್ನೊಂದು ಮಂದಿ ಪುರುಷರನ್ನು ಮದುವೆಯಾದ ಮಹಿಳೆಯೊಬ್ಬರು ಎಲ್ಲರಿಂದಲೂ ಹಣ ಪಡೆದು ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ...

Vijaya Karnataka 10 Sep 2017, 8:55 pm

ಬ್ಯಾಂಕಾಕ್‌: ಒಂದರ ನಂತರ ಒಂದರಂತೆ ಹನ್ನೊಂದು ಮಂದಿ ಪುರುಷರನ್ನು ಮದುವೆಯಾದ ಮಹಿಳೆಯೊಬ್ಬರು ಎಲ್ಲರಿಂದಲೂ ಹಣ ಪಡೆದು ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಥಾಯ್ಲೆಂಡ್‌ನ ಸಂಪ್ರದಾಯದಂತೆ ಮದುವೆಯಾಗುವ ವೇಳೆ ವರನ ಕಡೆಯವರು ವಧುವಿಗೆ ವಧುದಕ್ಷಿಣಿ ರೂಪದಲ್ಲಿ ಹಣ ನೀಡುವ ಪದ್ಧತಿ ಚಾಲ್ತಿಯಲ್ಲಿದೆ.

ಒಮ್ಮೆ ಈಕೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಎಚ್ಚರಿಕೆ ಸಂದೇಶವೊಂದು ಪ್ರಕಟಗೊಂಡ ಬಳಿಕ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂದೇಶವನ್ನು ನೋಡಿದ ಬಳಿಕ ಮೋಸ ಹೋದವರೆಲ್ಲರೂ ಪೊಲೀಸರಿಗೆ ದೂರು ನೀಡಿದ್ದಾರೆ.

ಈಕೆ ತನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ, ಹಾಗಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ತನ್ನ ವಂಚನೆ ದಂಧೆಗೆ ಸಮರ್ಥನೆ ನೀಡಿದ್ದಾಳೆ. ಜತೆಗೆ ಆಗಸ್ಟ್‌ ತಿಂಗಳಿನಲ್ಲಿ ನಾಲ್ಕು ಮಂದಿಯನ್ನು ಮದುವೆಯಾಗಿದ್ದಾಳೆ. ಇದುವರೆಗೆ 11 ಮಂದಿಯನ್ನು ಮದುವೆಯಾಗಿ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗಲು ಆಕೆ ಫೇಸ್‌ಬುಕ್‌ನಲ್ಲಿ ವರರನ್ನು ಹುಡುಕುತ್ತಿದ್ದಳು. ಅವರೊಂದಿಗೆ ಸ್ನೇಹ ಬೆಳೆಸಿ, ಪರಸ್ಪರ ಭೇಟಿಯಾಗಿ, ದೈಹಿಕ ಸಂಪರ್ಕ ಸಹ ಬೆಳೆಸುತ್ತಿದ್ದಳು. ನಂತರ ಹಣ ಪಡೆದು ಪರಾರಿಯಾಗುತ್ತಿದ್ದಳು. ಹೀಗೆ ಮದುವೆಯಾಗಲು ಮುಂದಾಗುತ್ತಿದ್ದ ಪ್ರತಿಯೊಬ್ಬ ಪುರುಷನಿಂದ 6,000 ದಿಂದ 30,000 ಡಾಲರ್‌ನಷ್ಟು ಹಣ ಪಡೆದು ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka Web 11 marriages in 2 years
2 ವರ್ಷದಲ್ಲಿ 11 ಮಂದಿ ಮದುವೆಯಾಗಿ ಪರಾರಿಯಾದ ಬೆಡಗಿ


11 Marriages in 2 Years

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ