ಆ್ಯಪ್ನಗರ

ಟ್ರಂಪ್‌ ಪ್ರಮಾಣ ವಚನ ಬಹಿಷ್ಕರಿಸಿದ 18 ನಾಯಕರು

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, 18 ಮಂದಿ ಡೆಮಾಕ್ರೆಟಿಕ್‌ ಸಂಸದರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 15 Jan 2017, 6:32 pm
ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, 18 ಮಂದಿ ಡೆಮಾಕ್ರೆಟಿಕ್‌ ಸಂಸದರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
Vijaya Karnataka Web 18 democratic lawmakers to boycott donald trumps inauguration
ಟ್ರಂಪ್‌ ಪ್ರಮಾಣ ವಚನ ಬಹಿಷ್ಕರಿಸಿದ 18 ನಾಯಕರು


2016ರ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಬಯಲಾದ ಬಳಿಕ, ಖಾಸಗಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದ ಡೆಮಾಕ್ರೆಟಿಕ್‌ ಪಕ್ಷದ ಸಂಸದ, ಹಾಗೂ ಕಾನೂನು ಹೋರಾಟಗಾರ ಜಾನ್‌ ಲೂಯಿಸ್‌, ತಾನು ರಷ್ಯಾ ಬೆಂಬಲಿಸುವ ಟ್ರಂಪ್‌ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಟ್ರಂಪ್‌ ಓರ್ವ "ಕಾನೂನು ಬಾಹಿರ" ಅಧ್ಯಕ್ಷರಂತೆ ಕಾಣುವುದರಿಂದ, 1987ರಲ್ಲಿ ಕಾಂಗ್ರೆಸ್‌ ಸೇರಿದ ಬಳಿಕ ಇದೇ ಮೊದಲ ಬಾರಿಗೆ ತಾನು ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿಕೊಂಡಿದ್ದಾರೆ.

ಲೂಯಿಸ್‌ ಕೇವಲ ಒಬ್ಬ ಮಾತುಗಾರ ಎಂದಿರುವ ಅಧ್ಯಕ್ಷ ಟ್ರಂಪ್‌, ರಷ್ಯಾ ವಿಚಾರದಲ್ಲಿ ತಪ್ಪು ಹುಡುಕುವ ಬದಲು ತಮ್ಮ ಕ್ಷೇತ್ರದಲ್ಲಿ ಜನರೊಂದಿಗೆ ಕೆಲಸಮಾಡಿ ಎಂದು ಲೂಯಿಸ್‌ಗೆ ವ್ಯಂಗ್ಯವಾಡಿದ್ದರು. ಸದ್ಯ ಟ್ರಂಪ್‌ ಅವರ ಮಾತು ಅಮೆರಿಕದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ.

ಡೆಮಾಕ್ರೆಟಿಕ್‌ ಪಕ್ಷದ ನ್ಯೂಯಾರ್ಕ್‌ ಪ್ರತಿನಿಧಿ ವ್ಯೇಟೆ ಕ್ಲರ್ಕ್‌ ಟ್ರಂಪ್‌ ವಿರುದ್ಧ ಕಿಡಿಕಾರಿದ್ದು, ಲೂಯಿಸ್‌ ಅವರನ್ನು ಅವಹೇಳ ಮಾಡಿರುವುದು ಅಮೆರಿಕಾಗೆ ಅವಹೇಳನ ಮಾಡಿದಂತೆ, ಇಂತಹ ವ್ಯಕ್ತಿಯ ಕಾರ್ಯಕ್ರಮವನ್ನು ತಾನು ಬಹಿಷ್ಕರಿಸುವುದಾಗಿ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಡೆಮಾಕ್ರೆಟಿಕ್‌ ಪಕ್ಷದ ಪ್ರತಿನಿಧಿಗಳು ಟ್ರಂಪ್‌ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆಯೊಡ್ಡಿದ್ದು, ಲೂಯಿಸ್‌ ನಿರ್ಧಾರವನ್ನು ತಾನೂ ಬೆಂಬಲಿಸುವುದಾಗಿ ಕ್ಯಾಲಿಫೋರ್ನಿಯಾದ ಸಂಸದ ಮಾರ್ಕ್‌ ಟಕಾನೋ ಹೇಳಿದ್ದಾರೆ.

ನ್ಯೂಯಾರ್ಕ್ ಪ್ರತಿನಿಧಿ, ಜೋಸ್ ಸೆರಾನೋ, ಕ್ಯಾಲಿಫೋರ್ನಿಯಾದ, ಜೂಡಿ ಚು, ಇಲಿನಾಯ್ಸ್‌ನ ಲೂಯಿಸ್ ಗಟೈರೆಜ್, ಕ್ಯಾಲಿಫೋರ್ನಿಯಾದ ಜೇರ್ಡ್ ಹಫ್ಮನ್, ಮೆಸ್ಸಾಚುಸೆಟ್ಸ್‌ನ ಕ್ಯಾಥರೀನ್ ಕ್ಲಾರ್ಕ್, ಒರೆಗಾನ್‌ನ ಅರ್ಲ್ ಬ್ಲುಮೆನಾರ್ ನ್ಯೂಯಾರ್ಕ್ ಪ್ರತಿನಿಧಿ ಆಡ್ರಿನೊ ಎಸ್ಪೈಲ್ಲಾಟ್‌ ಸೇರಿದಂತೆ 18ಕ್ಕೂ ಅಧಿಕ ಮಂದಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ