ಆ್ಯಪ್ನಗರ

ಪಾಕ್‌ನಲ್ಲಿ ಅವಳಿ ಸ್ಫೋಟಕ್ಕೆ 18 ಬಲಿ, 100 ಮಂದಿಗೆ ಗಾಯ

ವಾಯುವ್ಯ ಪಾಕಿಸ್ತಾನದಲ್ಲಿನ ಪರಚಿನಾರ್ ನಗರದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 18 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 23 Jun 2017, 9:42 pm
ಇಸ್ಲಾಮಾಬಾದ್: ವಾಯುವ್ಯ ಪಾಕಿಸ್ತಾನದಲ್ಲಿನ ಪರಚಿನಾರ್ ನಗರದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 18 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web 18 killed 100 injured in twin blasts in paks tribal area
ಪಾಕ್‌ನಲ್ಲಿ ಅವಳಿ ಸ್ಫೋಟಕ್ಕೆ 18 ಬಲಿ, 100 ಮಂದಿಗೆ ಗಾಯ


ಇಲ್ಲಿನ ಅಕ್ಬರ್ ಖಾನ್ ಮಾರುಕಟ್ಟೆ ಪ್ರದೇಶದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಮೂರು ನಿಮಿಷಗಳ ಬಳಿಕ ಇನ್ನೊಂದು ಸ್ಫೋಟ ಸಂಭವಿಸಿದೆ. ಈದ್ ಸಂದರ್ಭದಲ್ಲಿ ನೀಡುವ ಇಫ್ತಾರ್ ಕೂಟಕ್ಕೆ ಸರಕುಗಳನ್ನು ಕೊಳ್ಳಲು ಬಂದಂತಹ ಗ್ರಾಹಕರು ಈ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸುಮಾರು 100 ಮಂದಿ ಈ ಅವಳಿ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಅಲ್ಲಿ ಈಗ ಆಕ್ರಂದನ ಮಡುಗಟ್ಟಿದೆ.

ಆಫ್ಗಾನಿಸ್ತಾನಕ್ಕೆ ಹೊಂದಿಕೊಂಡಂತಿರುವ ಪಾಕಿಸ್ತಾನದ ಕುರ್ರಂ ಬುಡಕಟ್ಟು ಜಿಲ್ಲೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ತನಿಖೆ ಮುಂದುವರೆಸಿದ್ದಾರೆ.

At least 18 people were killed and more than 100 others injured on Friday in powerful twin blasts at a crowded market in Parachinar area of Pakistan's Kurram tribal district, bordering Afghanistan.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ