ಆ್ಯಪ್ನಗರ

ಇಬ್ಬರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌ ಪ್ರಶಸ್ತಿ

ಇಮ್ಯಾನ್ಯುಯೆಲ್‌ ಶಪೊಂಟಿಯೆ ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್‌ಬ್ಲ್ಯಂಕ್‌ ಯೂನಿಟ್‌ ಫಾರ್‌ ದ ಸೈನ್‌ ಆಫ್‌ ಪ್ಯಾಥೋಜೆನ್ಸ್ ವಿಭಾಗದ ನಿರ್ದೇಶಕಿಯಾಗಿದ್ದಾರೆ. ಜೆನ್ನಿಫರ್ ಡೌಡ್ನ ಅವರು ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿವಿಯಲ್ಲಿ ಪ್ರೊಫೆಸರ್‌ ಆಗಿದ್ದಾರೆ.

Vijaya Karnataka Web 7 Oct 2020, 10:46 pm
ಸ್ಟಾಕ್‌ ಹೋಮ್‌: ಪ್ರಸಕ್ತ ಸಾಲಿನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದ್ದು, ಇಮ್ಯಾನ್ಯುಯೆಲ್‌ ಶಹಪೊಂಟಿಯೆ ಮತ್ತು ಜೆನ್ನಿಫಿರ್‌ ಎ ಡೌಡ್ನ ಅವರನ್ನು
Vijaya Karnataka Web ನೊಬೆಲ್‌
ನೊಬೆಲ್‌


ಜೆನೋಮ್‌ ಎಡಿಟಿಂಗ್‌ ವಿಧಾನದ ಅಭಿವೃದ್ಧಿಗಾಗಿ ಇಮ್ಯಾನ್ಯುಯೆಲ್‌ ಶಪೊಂಟಿಯೆ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಇಮ್ಯಾನ್ಯುಯೆಲ್‌ ಶಪೊಂಟಿಯೆ ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್‌ಬ್ಲ್ಯಂಕ್‌ ಯೂನಿಟ್‌ ಫಾರ್‌ ದ ಸೈನ್‌ ಆಫ್‌ ಪ್ಯಾಥೋಜೆನ್ಸ್ ವಿಭಾಗದ ನಿರ್ದೇಶಕಿಯಾಗಿದ್ದಾರೆ.

ಜೆನ್ನಿಫರ್ ಡೌಡ್ನ ಅವರು ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿವಿಯಲ್ಲಿ ಪ್ರೊಫೆಸರ್‌ ಆಗಿದ್ದಾರೆ.

ಜೀವ ವಿಜ್ಞಾನಗಳಲ್ಲಿಅತ್ಯಂತ ಸೂಕ್ಷ್ಮ ಎನಿಸಿದ ವಂಶವಾಹಿಯ ಧಾತುವನ್ನು ತಿದ್ದುಪಡಿ ಮಾಡಬಲ್ಲವಿಧಾನಕ್ಕೆ ಜೀನೋಮ್‌ ಎಡಿಟಿಂಗ್‌ (ಜೀನ್‌ ಎಡಿಟಿಂಗ್‌ ಅಂತಲೂ ಕರೆಯುವುದುಂಟು) ಎಂದು ಹೇಳಲಾಗುತ್ತದೆ. ಪ್ರಾಣಿಗಳ, ಸಸ್ಯಗಳ ಮತ್ತು ಸೂಕ್ಷ್ಮ ಜೀವಿಗಳ ಡಿಎನ್‌ಎ (ವಂಶವಾಹಿ) ವನ್ನೇ ಬದಲಿಸಬಲ್ಲಜೈವಿಕ ತಂತ್ರಜ್ಞಾನ ಇದಾಗಿದೆ. ಈ ಇಬ್ಬರೂ ಮಹಿಳಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಜೀನ್‌ ಎಡಿಟಿಂಗ್‌ ವಿಧಾನಕ್ಕೆ 'ಸಿಆರ್‌ಐಎಸ್‌ಪಿಆರ್‌-ಸಿಎಎಸ್‌ 9' ಎಂದು ಕರೆಯಲಾಗುತ್ತಿದ್ದು ಇದು ಅನುವಂಶಿಕವಾಗಿ ಬರುವ ಕ್ಯಾನ್ಸರ್‌ನಂತಹ ಅನೇಕ ಕಾಯಿಲೆಗಳನ್ನು ಗುಣಪಡಿಸುವಲ್ಲಿವರದಾನವಾಗಲಿದೆ. ಅಲ್ಲದೇ ಬೆಳೆಗಳಿಗೆ ತಾಗುವ ರೋಗಗಳ ನಿವಾರಣೆಗೂ ಪೂರಕವಾಗಲಿದೆ.

ಎಮಾನ್ಯುಯೆಲ್‌ ಅವರು ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್‌ ಬ್ಯಾಂಕ್‌ ಯೂನಿಟ್‌ ಫಾರ್‌ ದಿ ಸೈನ್ಸ್‌ ಆಫ್‌ ಪ್ಯಾಥೊಜೆನ್ಸ್‌ ವಿಭಾಗದ ನಿರ್ದೇಶಕಿ. ಜೆನ್ನಿಫರ್‌ ಡೌಡ್ನ ಅಮೆರಿಕದ ಬಕ್ರ್ಲಿಯ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿಪ್ರೊಫೆಸರ್‌ ಆಗಿದ್ದಾರೆ.

ಎಮ್ಯಾನುಯೆಲ್‌ ಚಾರ್ಪೆಂಟಿಯರ್‌ ಅವರು ಬ್ಯಾಕ್ಟಿರಿಯಾರಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದ ವೇಳೆ ಹೊಸ ಕಣವೊಂದು ಪತ್ತೆಯಾಗಿತ್ತು. ವೈರಸ್‌ನ ಡಿಎನ್‌ಎಯ ಕೆಲವು ಭಾಗಗಳನ್ನು ಕತ್ತರಿಸಿಹಾಕಿ ಅದನ್ನು ನಿಷ್ೊ್ರಯೋಜಕವನ್ನಾಗಿ ಮಾಡುತ್ತಿತ್ತು ಈ ಬ್ಯಾಕ್ಟಿರಿಯಾದ ಕಣ. ಇದರ ಮೇಲೆ ಸಂಶೋಧನೆ ನಡೆಸಿ 2011ರಲ್ಲಿಅವರು ಪ್ರಬಂಧ ಮಂಡಿಸಿದ್ದರು. ನಂತರ ಜೆನ್ನಿಫರ್‌ ಎ.ಡೌಡ್ನ ಅವರ ಜತೆಗೂಡಿ ಜೀನ್‌ ಎಡಿಟಿಂಗ್‌ ವಿಧಾನ ರೂಪಿಸಿದ್ದರು. ವಿಭಾಗವೊಂದರ ನೊಬೆಲ್‌ ಪ್ರಶಸ್ತಿ ಜಂಟಿಯಾಗಿ ಮಹಿಳಾ ತಂಡದ ಪಾಲಾಗಿದ್ದು ಇದೇ ಮೊದಲು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ