ಆ್ಯಪ್ನಗರ

ಕಲಹ: ಪಾಕ್‌ ದರ್ಗಾದಲ್ಲಿ 20 ಸಾವು

ಮಾನಸಿಕ ರೋಗಿಗಳ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 2 Apr 2017, 2:34 pm
ಲಾಹೋರ್‌: ಮಾನಸಿಕ ರೋಗಿಗಳ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ಪಾಕಿಸ್ತಾನ ದರ್ಗಾವೊಂದರಲ್ಲಿ ನಡೆದಿದೆ.
Vijaya Karnataka Web 20 people killed by mentally ill custodian of dargah in pakistan
ಕಲಹ: ಪಾಕ್‌ ದರ್ಗಾದಲ್ಲಿ 20 ಸಾವು


ಲಾಹೋರ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ, ಸರ್ಗೊಧಾ ಜಿಲ್ಲೆಯ ಮುಹಮ್ಮದ್ ಅಲಿ ಗುಜ್ಜಾರ್ ಗ್ರಾಮದಲ್ಲಿರುವ ದರ್ಗಾದಲ್ಲಿ ಶನಿವಾರ ತಡರಾತ್ರಿ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಲಯಿಕತ್ ಅಲಿ ಛಾತಾ ಹೇಳಿದ್ದಾರೆ.

ದರ್ಗಾಗೆ ಭೇಟಿ ನೀಡಿದವರಿಗೆ ಮೊದಲಿಗೆ ಮೇಲ್ವಿಚಾರಕರು ಔಷಧಿಗಳನ್ನು ನೀಡಿದ್ದಾರೆ. ಬಳಿಕ ವಿವಸ್ತ್ರಗೊಳಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಅಬ್ದುಲ್‌ ವಹೀದ್‌ ಎಂಬಾತ ಪ್ರಕರಣ ರೂವಾರಿಯಾಗಿದ್ದು, ಈತನೂ ಮಾನಸಿಕ ಅಸ್ವಸ್ಥನಾಗಿದ್ದಾನೆ.

ದರ್ಗಾದ ಮೇಲ್ವಿಚಾರಕರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಛಾತ ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಬಿಲಾಲ್ ಇಫ್ತಿಖಾರ್ 'ಘಟನೆ ಕುರಿತು ಗಾಯಾಳು ಹೇಳಿಕೆ ನೀಡಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಮೇಲ್ವಿಚಾರಕರು ಮಾರಕಾಸ್ತ್ರಗಳಿಂದ ರೋಗಿಗಳ ಮೇಲೆ ದಾಳಿ ಮಾಡಿದರು ಎಂದಿದ್ದಾನೆ. ಈ ಕುರಿತು ತನಿಖೆ ನಡೆಸಲಾಗುವುದು' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ