ಆ್ಯಪ್ನಗರ

ಮುಂಬಯಿ ದಾಳಿ ರೂವಾರಿ ಸಯೀದ್‌ಗೆ ಗೃಹ ಬಂಧನ

ವಿಶ್ವದ ವಿವಿಧ ರಾಷ್ಟ್ರಗಳಿಂದ ಒತ್ತಡಕ್ಕೊಳಗಾದ ಪಾಕಿಸ್ತಾನ ಮುಂಬಯಿ ದಾಳಿ ಸಂಚುಕೋರ ಜಮಾಉತ್ ಉದ್ವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರೆ ನಾಲ್ವರನ್ನು ಸೋಮವಾರ ರಾತ್ರಿ ಬಂಧಿಸಿ, ಗೃಹ ಬಂಧನದಲ್ಲಿರಿಸಿದೆ.

ಏಜೆನ್ಸೀಸ್ 31 Jan 2017, 11:47 am
ಇಸ್ಲಾಮಾಬಾದ್: ವಿಶ್ವದ ವಿವಿಧ ರಾಷ್ಟ್ರಗಳಿಂದ ಒತ್ತಡಕ್ಕೊಳಗಾದ ಪಾಕಿಸ್ತಾನ ಮುಂಬಯಿ ದಾಳಿ ಸಂಚುಕೋರ ಜಮಾತ್‌ ಉದ್‌ ದಾವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರೆ ನಾಲ್ವರನ್ನು ಸೋಮವಾರ ರಾತ್ರಿ ಬಂಧಿಸಿ, ಗೃಹ ಬಂಧನದಲ್ಲಿರಿಸಿದೆ.
Vijaya Karnataka Web 11 plotter hafiz saeed 4 others put under house arrest in lahore
ಮುಂಬಯಿ ದಾಳಿ ರೂವಾರಿ ಸಯೀದ್‌ಗೆ ಗೃಹ ಬಂಧನ


ಈ ಅಚ್ಚರಿಯ ಬೆಳವಣಿಗೆಯಲ್ಲಿ ಲಷ್ಕರ್ ಏ ತೋಯ್ಬಾದ ಸಹ ಸಂಸ್ಥಾಪಕ ಸಯೀದ್ ಮನೆಯನ್ನು ಕಾರಾಗೃಹವೆಂದು ಘೋಷಿಸಿದ್ದು, ಆತನನ್ನು ಗೃಹ ಬಂಧನದಲ್ಲಿರಿಸಲಾಗುವುದೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಯೀದ್‌ನನ್ನು ಬಂಧಿಸುವಂತೆ ಪಂಜಾಬ್ ಪ್ರಾಂತ್ಯದ ಆಂತರಿಕ ಸಚಿವ ಭಾನುವಾರ ಆದೇಶಿಸಿದ್ದರು. ಲಹೋರಿನ ಮಸ್ಜೀದ್-ಏ-ಖಾದ್ಸೀಯಾ ಚೌಬುರ್ಜಿಯಲ್ಲಿದ್ದಾಗ ಸಯೀದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

'ಜೆಯುಡಿ ಮುಖ್ಯ ಕಚೇರಿಯಲ್ಲಿ ಸಯೀದ್‌ನಲ್ಲಿ ಬಂಧಿಸುವ ವೇಳೆ ಬಿಗಿ ಭದ್ರತೆ ಇತ್ತು,' ಎಂದು ಸಂಘಟನೆಯ ಪದಾಧಿಕಾರಿ ಅಹ್ಮದ್ ನದೀಮ್ ಹೇಳಿದ್ದಾರೆ.

2010-11ರಿಂದಲೂ ಜೆಯುಡಿ ಮೇಲೆ ವಿಶ್ವಸಂಸ್ಥೆ ಕಣ್ಣಿಟ್ಟಿದ್ದು, ಈ ಸಂಘಟನೆ ಹಾಗೂ ಇದರ ಮುಖ್ಯಸ್ಥನ ಮೇಲೆ ನಿರ್ಬಂಧ ವಿಧಿಸುವ ಬಗ್ಗೆ ಭಾರತ ಸೇರಿ ಇತರೆ ರಾಷ್ಟ್ರಗಳು ಆಗ್ರಹಿಸುತ್ತಿದ್ದವು. ಸದಾ ಸಯೀದ್‌ನನ್ನು ರಕ್ಷಿಸುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ಉಗ್ರನನ್ನು ಬಂಧಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ