ಆ್ಯಪ್ನಗರ

65ರ ಹರೆಯದಲ್ಲಿ ಎರಡನೇ ಮದುವೆಗೆ ಸಜ್ಜಾದ ಹಿರಿಯ ವಕೀಲ ಹರೀಶ್‌ ಸಾಳ್ವೆ!

ಮಾಜಿ ಸಾಲಿಸಿಟರ್‌ ಜನರಲ್‌, ಕುಲಭೂಷಣ್‌ ಜಾಧವ್‌ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಎರಡನೇ ಮದುವೆಯ ಸಿದ್ಧತೆಯಲ್ಲಿದ್ದಾರೆ.

Vijaya Karnataka Web 26 Oct 2020, 11:17 pm
ಹೊಸದಿಲ್ಲಿ: ಮಾಜಿ ಸಾಲಿಸಿಟರ್‌ ಜನರಲ್‌, ಕುಲಭೂಷಣ್‌ ಜಾಧವ್‌ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಎರಡನೇ ಮದುವೆಯ ಸಿದ್ಧತೆಯಲ್ಲಿದ್ದಾರೆ.
Vijaya Karnataka Web Harish Salve


ಲಂಡನ್‌ ಮೂಲದ ಕಲಾವಿದೆ ಕ್ಯಾರೊಲೀನ್‌ ಬ್ರೊಸ್ಸಾರ್ಡ್‌ ಅವರನ್ನು ಮುಂದಿನ ವಾರ ಚರ್ಚ್ವೊಂದರಲ್ಲಿಅವರು ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.

65 ವರ್ಷ ಸಾಳ್ವೆ ಅವರು ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿದ್ದರು. ಸದ್ಯ ಸಾಳ್ವೆ ಅವರ ಕೈಹಿಡಿಯುತ್ತಿರುವ ಕಲಾವಿದೆ ಕ್ಯಾರೊಲೀನ್‌ಗೆ 18 ವರ್ಷದ ಪುತ್ರಿಯಿದ್ದಾಳೆ. ಕೊರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.

ಕುಲಭೂಷಣ್‌ ಜಾದವ್‌ ಪರ ಭಾರತೀಯ ವಕೀಲರ ನೇಮಕಕ್ಕೆ ಅವಕಾಶವಿಲ್ಲ: ಪಾಕ್‌ ಸರಕಾರ

ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ 65 ವರ್ಷದ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ನ ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದರು. ಸಾಳ್ವೆ ಅವರು ಉತ್ತರ ಲಂಡನ್ ನಲ್ಲಿ ನೆಲೆಸಿದ್ದು, ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ.

ಬ್ರಿಟನ್ನಲ್ಲಿ ಜನಿಸಿದ ಕ್ಯಾರೋಲಿನ್ ಅವರಿಗೆ 18 ವರ್ಷದ ಮಗಳಿದ್ದಾಳೆ. ಕಲೆಯ ಜತೆಗೆ ತಮ್ಮಿಬ್ಬರಿಗೂ ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಒಂದೇ ರೀತಿಯ ಅಭಿರುಚಿ ಇದೆ ಎಂದೂ ಸಾಳ್ವೆ ತಿಳಿಸಿದ್ದಾರೆ. ಲಂಡನ್ ನಲ್ಲಿ 15 ಜನರು ಮಾತ್ರವೇ ಸೇರಲು ಅವಕಾಶ ಇರುವುದರಿಂದ ಈ ಮದುವೆ ಅತ್ಯಂತ ಸರಳವಾಗಿ ನಡೆಯಲಿದೆ.

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ: ಮರು ಪರಿಶೀಲನೆ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಒಪ್ಪಿಗೆ!

ಸಾಳ್ವೆ ಅವರು ಕಳೆದ ಜೂನ್ ತಿಂಗಳಲ್ಲೇ ಮೊದಲ ಪತ್ನಿ ಮೀನಾಕ್ಷಿ ಸಾಳ್ವೆ ಅವರಿಗೆ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳು 37 ವರ್ಷದ ಸಾಕ್ಷಿ, ಎರಡನೇ ಮಗಳು 33 ವರ್ಷದ ಸಾನಿಯಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ