ಆ್ಯಪ್ನಗರ

ಅಮೆರಿಕದ ಸೈನಿಕರನ್ನು 'ಭಯೋತ್ಪಾದಕರು' ಎಂದ ಇರಾನ್ ಮಾಧ್ಯಮ

ಇರಾಕ್‌ನಲ್ಲಿರು ಅಮೆರಿಕದ ಸೇನಾನೆಲೆಗಳಲ್ಲಿ ಇದ್ದ ಸೈನಿಕರನ್ನು ಇರಾನ್‌ ಸರಕಾರಿ ಟಿವಿ 'ಭಯೋತ್ಪಾದಕರು' ಎಂದು ಹೇಳಿದೆ. ಇರಾಕ್‌ನಲ್ಲಿರುವ ಸೇನಾ ನೆಲೆಗಳ ಮೇಲೆ ಮಂಗಳವಾರ ಇರಾನ್‌ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 80 ಅಮೆರಿಕದ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇರಾನ್ ಸರಕಾರಿ ಟಿವಿ ವಾಹಿನಿ ವರದಿ ಮಾಡಿದೆ.

Vijaya Karnataka Web 8 Jan 2020, 12:01 pm
ಬಾಗ್ದಾದ್‌: ಇರಾಕ್‌ನಲ್ಲಿರು ಅಮೆರಿಕದ ಸೇನಾನೆಲೆಗಳಲ್ಲಿ ಇದ್ದ ಸೈನಿಕರನ್ನು ಇರಾನ್‌ ಸರಕಾರಿ ಟಿವಿ 'ಭಯೋತ್ಪಾದಕರು' ಎಂದು ಹೇಳಿದೆ. ಇರಾಕ್‌ನಲ್ಲಿರುವ ಸೇನಾ ನೆಲೆಗಳ ಮೇಲೆ ಮಂಗಳವಾರ ಇರಾನ್‌ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 80 ಅಮೆರಿಕದ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇರಾನ್ ಸರಕಾರಿ ಟಿವಿ ವಾಹಿನಿ ವರದಿ ಮಾಡಿದೆ.
Vijaya Karnataka Web missile isreal
ಸಾಂದರ್ಭಿಕ ಚಿತ್ರ


ಒಂದು ವೇಳೆ ಅಮೆರಿಕ ಪ್ರತೀಕಾರ ತೀರಿಸಿಕೊಳ್ಳಲು ಬಂದರೆ, 100 ಸ್ಥಳಗಳಿಗೆ ಗುರಿ ಇಡಲು ತಯಾರಿ ನಡೆಸಲಾಗಿದೆ ಎಂದು ಇರಾನ್‌ ಮಾಧ್ಯಮ ವರದಿ ಮಾಡಿವೆ.

ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್: ಮನೆಮಾಡಿದ ಯುದ್ಧಭೀತಿ

ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ 10: 30 ಕ್ಕೆ ಇರಾಕ್‌ನಲ್ಲಿದ್ದ ಅಮೆರಿಕ ಸೇನಾನೆಲೆಗಳ ಮೇಲೆ ಸುಮಾರು 15 ಖಂಡಾಂತರ ಕ್ಷಿಪಣಿಗಳನ್ನು ಸಿಡಿಸಿದೆ. ಈ ದಾಳಿಯಲ್ಲಿ ಅಮೆರಿಕದ ಯುದ್ಧಾಸ್ತ್ರಗಳು, ಸೇನಾ ಹೆಲಿಕಾಪ್ಟರ್‌ಗಳು ಹಾನಿಗೊಳಗಾಗಿವೆ. ಕನಿಷ್ಠ 80 ಸೈನಿಕರು ಮಡಿದಿರಬಹುದು ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ