ಆ್ಯಪ್ನಗರ

ಕೆನಡಾ ಇತಿಹಾಸದಲ್ಲೇ ಭೀಕರ ಗುಂಡಿನ ದಾಳಿ, 16 ಮಂದಿ ಬಲಿ

ಕೆನಡಾದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಇದು ತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಎಂದು ಹೇಳಲಾಗಿದೆ. ಒಟ್ಟು 16 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದು, ಶೂಟರ್ ಪೊಲೀಸ್ ವೇಷದಲ್ಲಿ ಈ ದಾಳಿ ನಡೆಸಿದ್ದಾನೆ .

Vijaya Karnataka Web 20 Apr 2020, 9:39 am
ಒಟ್ಟಾವಾ: ಕೆನಡಾದಲ್ಲಿ ಭಾನುವಾರ ಭೀಕರ ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್ ಅಧಿಕಾರಿ ಸೇರಿ 16 ಜನ ಬಲಿಯಾಗಿದ್ದಾರೆ. ಕೆನಡಾದ ನೋವಾ ಸ್ಕೋಟಿಯಾ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ನಡೆಸಿದ ಈ ಗುಂಡಿನ ದಾಳಿ ನಡೆಸಿದ್ದು ಕೆನಡಾದ ಮೂವತ್ತು ವರ್ಷಗಳ ಇತಿಹಾಸದಲ್ಲೇ ಅತೀ ದೊಡ್ಡ ಮಾರಕ ದಾಳಿ ಎನ್ನಲಾಗಿದೆ.
Vijaya Karnataka Web canada


ಪೊಲೀಸ್ ಅಧಿಕಾರಿಯ ವೇಷದಲ್ಲಿದ್ದ ಬಂದೂಕುಧಾರಿ ಈ ದಾಳಿ ನಡೆಸಿ ಬಳಿಕ ಬೆಂಕಿ ಹಚ್ಚಿದ್ದಾನೆ. ಇಲ್ಲಿನ ನೋವಾ ಸ್ಕೋಟಿಯಾ ಪ್ರಾಂತ್ಯದ ಹಾಲಿಫ್ಯಾಕ್ಸ್ ನ ಉತ್ತರಕ್ಕೆ 100 ಕಿಲೋ ಮೀಟರ್ ದೂರದ ಪೋರ್ಟಾಪಿಕ್ ಎಂಬ ಸಣ್ಣ ಗ್ರಾಮೀಣ ಪಟ್ಟಣದಲ್ಲಿ ಒಂದು ಮನೆಯ ಒಳಗೆ ಮತ್ತು ಹೊರಗೆ ಹೆಣಗಳು ಸಿಕ್ಕಿದ್ದು, ಬಂಧೂಕಿದಾರಿ ಬಹುಶಃ ಓರ್ವನನ್ನು ಟಾರ್ಗೆಟ್ ಮಾಡಿದ್ದ ಆದರೆ ಬಳಿಕ ಎಲ್ಲರ ಮೇಲೆ ದಾಳಿ ಮಾಡಿರಬಹುದೆಂದು ಶಂಕಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶೂಟರ್ ನನ್ನು ಶರಣಾಗುವಂತೆ ಮನವಿ ಮಾಡಿಕೊಂಡರೂ ಆತ ಒಪ್ಪಲಿಲ್ಲ ಹೀಗಾಗಿ ಶೂಟರ್ ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.

ಕೆನಡಾದಿಂದ ಹಾರಿ ಬಂದ ಪ್ರಿನ್ಸ್ ಮೇಲೆ ಕೋಪ: ಎಲ್ಲ ಜವಾಬ್ದಾರಿ

ಬಂಧೂಕುಧಾರಿಯನ್ನು ಗೇಬ್ರಿಯಲ್ ವೋರ್ಟ್ಮನ್ (51) ಎಂದು ಪೊಲೀಸರು ಗುರುತಿಸಿದ್ದು, ಈತ ಪೋರ್ಟಾಪಿಕ್ನಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ ಎಂದು ತಿಳಿದುಬಂದಿದೆ. ಮಾತ್ರವಲ್ಲ ತನ್ನ ಬಳಿ ಇದ್ದ ಕಾರನ್ನು ಪೊಲೀಸ್ ಕಾರಿನಂತೆ ಕಾಣುವ ಹಾಗೆ ಬದಲಾವಣೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ