ಆ್ಯಪ್ನಗರ

ನೊಬೆಲ್‌ ವೇದಿಕೆಯಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಅಭಿಜಿತ್‌-ಈಸ್ಟರ್‌ ದಂಪತಿ

ಅಭಿಜಿತ್‌ ಬ್ಯಾನರ್ಜಿ ಚಿನ್ನದ ಜರಿಯಂಚಿನ ಧೋತಿ ಉಟ್ಟು ಕುರ್ತಾ ತೊಟ್ಟಿದ್ದರು. ಅದರ ಮೇಲೆ ಕಪ್ಪು ಕೋಟ್‌ ಧರಿಸಿದ್ದರು. ಅವರ ಪತ್ನಿ ಈಸ್ಟರ್‌ ಡುಫ್ಲೋ ಹಸಿರು ಸೀರೆ ಉಟ್ಟು, ಕೆಂಪು ಬಿಂದಿ ತೊಟ್ಟು ಪಕ್ಕಾ ಬೆಂಗಾಲಿ ಸೊಸೆಯಂತೆ ಪತಿಯೊಂದಿಗೆ ತೆರಳಿ ಸ್ಟಾಕ್‌ಹೋಮ್‌ನ ಕಾನ್ಸರ್ಟ್‌ ಹಾಲ್‌ನಲ್ಲಿ ನೊಬೆಲ್‌ ಪ್ರಶಸ್ತಿ ಸ್ವೀಕರಿಸಿದರು.

Vijaya Karnataka 11 Dec 2019, 2:43 pm
ಸ್ಟಾಕ್‌ಹೋಮ್‌: ಭಾರತೀಯ ಸಂಜಾತ ಅಭಿಜಿತ್‌ ಬ್ಯಾನರ್ಜಿ ಮತ್ತು ಅವರ ಪತ್ನಿ ಈಸ್ಟರ್‌ ಡುಫ್ಲೋ ಬುಧವಾರ 2019ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಸ್ವೀಕರಿಸಿದರು. ತಮ್ಮ ಒಡನಾಡಿ ಮೈಖಲ್‌ ಕ್ರೆಮರ್‌ ಜೊತೆ ಪ್ರಶಸ್ತಿ ಸ್ವೀಕರಿಸುವ ವೇಳೆ ಬ್ಯಾನರ್ಜಿ ದಂಪತಿ ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದರು.
Vijaya Karnataka Web Abhijith Banarjee


ಕೊಲ್ಕತ್ತಾ ಮೂಲದ 58 ವರ್ಷ ವಯಸ್ಸಿನ ಅಭಿಜಿತ್‌ ಬ್ಯಾನರ್ಜಿ ಚಿನ್ನದ ಜರಿಯಂಚಿನ ಧೋತಿ ಉಟ್ಟು ಕುರ್ತಾ ತೊಟ್ಟಿದ್ದರು. ಅದರ ಮೇಲೆ ಕಪ್ಪು ಕೋಟ್‌ ಧರಿಸಿದ್ದರು. ಅವರ ಪತ್ನಿ ಫ್ರಾನ್ಸ್‌ ಮೂಲದ ಅಮೆರಿಕಾ ನಿವಾಸಿ ಈಸ್ಟರ್‌ ಡುಫ್ಲೋ ಹಸಿರು ಸೀರೆ ಉಟ್ಟಿದ್ದರು. ಕೆಂಪು ಬಿಂದಿ ತೊಟ್ಟು ಪಕ್ಕಾ ಬೆಂಗಾಲಿ ಸೊಸೆಯಂತೆ ಪತಿ ಅಭಿಜಿತ್‌ ಬ್ಯಾನರ್ಜಿ ಜೊತೆ ತೆರಳಿ ಸ್ಟಾಕ್‌ಹೋಮ್‌ನ ಕಾನ್ಸರ್ಟ್‌ ಹಾಲ್‌ನಲ್ಲಿ ನೊಬೆಲ್‌ ಪ್ರಶಸ್ತಿ ಸ್ವೀಕರಿಸಿದರು.


ಇವರಿಬ್ಬರು ಮೈಖಲ್‌ ಕ್ರೆಮರ್‌ ಜೊತೆ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋವನ್ನು ನೊಬೆಲ್‌ ಪಾರಿತೋಷಕ ಸಮಿತಿ ಶೇರ್‌ ಮಾಡಿದೆ. ಈ ವಿಡಿಯೋ ನೋಡಿ ಸಾಂಪ್ರದಾಯಿಕ ದಿರಿಸಿನಲ್ಲಿರುವ ಅಭಿಜಿತ್‌ ಬ್ಯಾನರ್ಜಿ ಮತ್ತು ಈಸ್ಟರ್‌ ಡುಫ್ಲೋ ಅವರಿಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕೊಲ್ಕೊತ್ತಾದಲ್ಲಿ ಹುಟ್ಟಿ ಹೊಸದಿಲ್ಲಿಯ ಜೆಎನ್‌ಯುನಿಂದ 1983ರಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಅಭಿಜಿತ್‌ ಬ್ಯಾನರ್ಜಿ ಮುಂದೆ ಹಾರ್ವರ್ಡ್‌ ವಿವಿಯಿಂದ 1988ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.

ಬ್ಯಾನರ್ಜಿ ಮತ್ತು ಅವರ ಪತ್ನಿ 46 ವರ್ಷದ ಡಾ. ಈಸ್ಟರ್‌ ಡುಫ್ಲೋ ಇಬ್ಬರೂ ಅಮೆರಿಕಾದ ಮೆಸಾಚುಸೆಟ್ಸ್‌ ಇನ್ಸ್‌ಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರಿಗೆ ಕಳೆದ ಅಕ್ಟೋಬರ್‌ನಲ್ಲಿ ಪ್ರಶಸ್ತಿ ಘೋಷಣೆಯಾಗಿತ್ತು. ಡುಫ್ಲೋ ನೊಬೆಲ್‌ ಇತಿಹಾಸದಲ್ಲಿ ಈ ಪ್ರಶಸ್ತಿ ಗೆದ್ದ ಕೇವಲ ಎರಡನೇ ಮಹಿಳೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ