ಆ್ಯಪ್ನಗರ

ಯುದ್ಧೋನ್ಮಾದ ಖಂಡಿಸಿ ನೇಪಾಳದಲ್ಲಿ ಚೀನಾ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ!

ಭಾರತ-ಚೀನಾ ಗಡಿ ಘರ್ಷಣೆ ವಿರೋಧಿಸಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಹೋರಾಟಗಾರರು ಹಾಗೂ ಮಾನವ ಹಕ್ಕು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಯುದ್ಧೋನ್ಮಾದ ಕೈಬಿಟ್ಟು ಶಾಂತಿ ಮಾತುಕತೆ ನಡೆಸುವಂತೆ ಚೀನಾವನ್ನು ಆಗ್ರಹಿಸಿದ್ದಾರೆ.

Vijaya Karnataka Web 18 Jun 2020, 3:16 pm
ಕಠ್ಮಂಡು: ಭಾರತ-ನೇಪಾಳದ ನಡುವೆ ಗಡಿ ತಕರಾರು ಉದ್ಭವವಾಗಿದೆ. ಆದರೆ ಸಾವಿರಾರು ವರ್ಷಗಳ ಈ ಅನೋನ್ಯ ಸಂಬಂಧವನ್ನು ಗಡಿ ರೇಖೆಗಳು ಹಾಳು ಮಾಡಲು ಸಾಧ್ಯವಿಲ್ಲ.
Vijaya Karnataka Web Nepal Protest
ನೇಪಾಳದಲ್ಲಿ ಪ್ರತಿಭಟನೆ


ಇದಕ್ಕೆ ಪುಷ್ಠಿ ಎಂಬಂತೆ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಭೀಷಣ ಘರ್ಷಣೆ ವಿರೋಧಿಸಿ, ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪ್ರತಿಭಟನೆ ನಡೆದಿದೆ.

ನೇಪಾಳದ ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಕಾರ್ಯಕರ್ತರು ರಾಜಧಾನಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮುಂದೆ ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಗಡಿಯಲ್ಲಿ ಸೇನೆ ಸರ್ವ ಸನ್ನದ್ಧ: ನೀವು ತಿಳಿದಿರಬೇಕಾದ 10 ಪ್ರಮುಖ ಅಂಶಗಳು!


'ಯುದ್ಧ ಒಂದು ಅಪರಾಧ' ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರರು, ಯುದ್ಧೋನ್ಮಾದವನ್ನು ಬಿಡುವಂತೆ ಚೀನಾವನ್ನು ಒತ್ತಾಯಿಸಿದರು.

ಗಡಿ ಘರ್ಷಣೆಗೆ ಚೀನಿ ಸೈನಿಕರ ಆಕ್ರಮಣಕಾರಿ ವರ್ತನೆಯೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಯುದ್ಧೋನ್ಮಾದದ ನೀತಿ ಕೈಬಿಟ್ಟು ಶಾಂತಿ ಮಾತುಕತೆಗೆ ಒತ್ತು ನೀಡಬೇಕೆಂದಯ ಚೀನಾವನ್ನು ಒತ್ತಾಯಿಸಿದರು.

3 ಭಾರತೀಯ ಭೂಪ್ರದೇಶ ಒಳಗೊಂಡ ವಿವಾದಿತ ನಕ್ಷೆಗೆ ನೇಪಾಳ ಸಂಸತ್ತಿನ ಅನುಮೋದನೆ!

ಇಂದು(ಗುರುವಾರ) ನೇಪಾಳ ಸಂಸತ್ತು ಹೊ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ಅನುಮೋದಿಸಿದ್ದು, ಇದರಲ್ಲಿ ಭಾರತದ ಮೂರರು ಭೂ ಪ್ರದೇಶಗಳನ್ನು ಸೇರಿಸಿದೆ. ಆದರೆ ನೇಪಾಳದ ರಸ್ತೆಗಳಲ್ಲಿ ಭಾರತದ ಪರ ಜನ ಧ್ವನಿ ಎತ್ತಿರುವುದು ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ