ಆ್ಯಪ್ನಗರ

'ವಿದೇಶಿ ಪಿತೂರಿ' ಪತ್ರ ತನಿಖೆ ಮಾಡದ ನ್ಯಾಯಾಂಗದ ವಿರುದ್ಧ ಇಮ್ರಾನ್ ಖಾನ್ ಬೇಸರ!

ತಮ್ಮ ಸರ್ಕಾರ ಉರುಳಿಸಲು ವಿದೇಶಿ ಪಿತೂರಿ ನಡೆಸಲಾಗಿತ್ತು ಎಂದು ಆರೋಪಿಸುತ್ತಲೇ ಇರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಇದೀಗ ವಿದೇಶಿ ಪಿತೂರಿಗೆ ಸಂಬಂಧಿಸಿದ ಪತ್ರದ ಬಗ್ಗೆ ತನಿಖೆ ಮಾಡದ ನ್ಯಾಯಾಂಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಾಚಿಯ ಬಾಗ್-ಎ-ಜಿನ್ನಾ' ಗ್ರೌಂಡ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ತಮ್ಮ ಸರ್ಕಾರ ಉರುಳಿಸಲು ನಡೆದಿದ್ದ ವಿದೇಶಿ ಪಿತೂರಿ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಕೂಡ ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

Edited byನಿಖಿಲ್\u200c ಕುಲಕರ್ಣಿ | Vijaya Karnataka Web 17 Apr 2022, 10:57 pm

ಹೈಲೈಟ್ಸ್‌:

  • ವಿದೇಶಿ ಪಿತೂರಿಯ ತುತ್ತೂರಿ ಮುಂದುವರೆಸಿರುವ ಇಮ್ರಾನ್ ಖಾನ್.
  • ವಿದೇಶಿ ಪಿತೂರಿ ತನಿಖೆ ಮಾಡದ ನ್ಯಾಯಾಂಗದ ಮೇಲೆ ಇಮ್ರಾನ್ ಬೇಸರ.
  • ನ್ಯಾಯಾಂಗ ಸರ್ಕಾರದ ಒತ್ತಡಕ್ಕೆ ಮಣಿದಿದೆ ಎಂದ ಇಮ್ರಾನ್ ಖಾನ್.
  • ಬಾಗ್-ಎ-ಜಿನ್ನಾ ಗ್ರೌಂಡ್‌ನಲ್ಲಿ ಇಮ್ರಾನ್ ಖಾನ್ ಭಾಷಣ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Imran Khan
ಇಮ್ರಾನ್ ಖಾನ್
ಇಸ್ಲಾಮಾಬಾದ್: ತಮ್ಮ ಸರ್ಕಾರ ಉರುಳಿಸಲು ವಿದೇಶಿ ಪಿತೂರಿ ನಡೆಸಲಾಗಿತ್ತು ಎಂದು ಆರೋಪಿಸುತ್ತಲೇ ಇರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಇದೀಗ ವಿದೇಶಿ ಪಿತೂರಿಗೆ ಸಂಬಂಧಿಸಿದ ಪತ್ರದ ಬಗ್ಗೆ ತನಿಖೆ ಮಾಡದ ನ್ಯಾಯಾಂಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರಾಚಿಯ ಬಾಗ್-ಎ-ಜಿನ್ನಾ' ಗ್ರೌಂಡ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ತಮ್ಮ ಸರ್ಕಾರ ಉರುಳಿಸಲು ನಡೆದಿದ್ದ ವಿದೇಶಿ ಪಿತೂರಿ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಕೂಡ ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ವಿದೇಶಿ ಪಿತೂರಿ ನಡೆದಿರುವ ಬಗ್ಗೆ ಉಲ್ಲೇಖವಿರುವ ಪತ್ರದ ಕುರಿತು ತನಿಖೆ ನಡೆಸಲು ನ್ಯಾಯಾಂಗ ಹಿಂದೇಟು ಹಾಕುತ್ತಿದೆ. ಸರ್ಕಾರದ ಒತ್ತಡ ನ್ಯಾಯಾಂಗದ ಮೇಲಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಅವರ 'ವಿದೇಶಿ ಪಿತೂರಿ'ಯ ತುತ್ತೂರಿ ಊದಲು ತಯಾರಿಲ್ಲ ಎಂದ ಪಾಕ್ ಸೇನೆ!
ವಿದೇಶಿ ಪಿತೂರಿ ಬಗ್ಗೆ ಸಂಸದೀಯ ಸಮಿತಿ ತನಿಖೆ ನಡೆಸುವುದಾಗಿ ಪ್ರಧಾನಿ ಶೆಹಬಾಜ್ ಷರೀಫ್ ಈಗಾಗಲೇ ಘೋಷಿಸಿದ್ದಾರೆ. ಆದರೆ ಈ ಸಮಿತಿಯ ಭಾಗವಾಗದಿರಲು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ನಿರ್ಧರಿಸಿದೆ.

ವಿದೇಶಿ ಪಿತೂರಿಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವ ಇಮ್ರಾನ್ ಖಾನ್, ಪ್ರಸ್ತುತ ಸರ್ಕಾರವೇ ಈ ಪಿತೂರಿಯಲ್ಲಿ ಭಾಗಿಯಾಗಿರುವಾಗ ನಿಷ್ಪಕ್ಷಪಾತ ತನಿಖೆ ನಡೆಯುವ ವಿಶ್ವಾಸವಿಲ್ಲ ಎಂದು ಹೇಳಿದ್ಧಾರೆ. ಇದೇ ಕಾರಣಕ್ಕೆ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಕೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದೀಗ ಪ್ರಕರಣದ ಕುರಿತು ತನಿಖೆ ನಡೆಸಲು ಮುಂದಾಗದ ನ್ಯಾಯಾಂಗವನ್ನೇ ಇಮ್ರಾನ್ ಖಾನ್ ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗ ಸರ್ಕಾರದ ಒತ್ತಡಕ್ಕೆ ಮಣಿದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

"ಅಧಿಕಾರದಲ್ಲಿ ಇದ್ದಾಗ ಅಲ್ಲ, ನಾನು ಈಗ ಬಹಳ ಅಪಾಯಕಾರಿ": ಇಮ್ರಾನ್ ಖಾನ್ ಎಚ್ಚರಿಕೆ
ಒಟ್ಟಿನಲ್ಲಿ ಸೋತರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಇಮ್ರಾನ್ ಖಾನ್ ಪಾಕ್ ರಾಜಕೀಯದಲ್ಲಿ ಅಸ್ತಿತ್ವಕ್ಕಾಗಿ ಹೆಣಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ