ಆ್ಯಪ್ನಗರ

ಸಾಗರದಲ್ಲಿ ಇಳಿದ ವಿಮಾನ, ಈಜಿ ದಡ ಸೇರಿದ ಪ್ರಯಾಣಿಕರು

47 ಜನರಿದ್ದ ವಿಮಾನವೊಂದು ದಕ್ಷಿಣ ಪೆಸಿಫಿಕ್‌ ಸಾಗರದ ದ್ವೀಪ ರಾಷ್ಟ್ರವಾದ ಮೈಕ್ರೊನೇಷ್ಯಾದ ಛುಕ್‌ ಎಂಬಲ್ಲಿ ರನ್‌ವೇನಿಂದ ಹೊರನುಗ್ಗಿ ಸಮುದ್ರಕ್ಕೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.

Vijaya Karnataka 29 Sep 2018, 9:26 am
ಮಜುರೊ (ಮಾರ್ಷಲ್‌ ದ್ವೀಪ): 47 ಜನರಿದ್ದ ವಿಮಾನವೊಂದು ದಕ್ಷಿಣ ಪೆಸಿಫಿಕ್‌ ಸಾಗರದ ದ್ವೀಪ ರಾಷ್ಟ್ರವಾದ ಮೈಕ್ರೊನೇಷ್ಯಾದ ಛುಕ್‌ ಎಂಬಲ್ಲಿ ರನ್‌ವೇನಿಂದ ಹೊರನುಗ್ಗಿ ಸಮುದ್ರಕ್ಕೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web flight


ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಹಲವರು ಈಜಿ ದಡ ಸೇರಿದ್ದಾರೆ. ಸಣ್ಣ ಬೋಟುಗಳ ಸಹಾಯದಿಂದ ಇತರರನ್ನು ರಕ್ಷಿಸಲಾಗಿದೆ.

ಅಪಘಾತಕ್ಕೀಡಾದ ಬೋಯಿಂಗ್‌ 737 ವಿಮಾನ ಪಪುವಾ ನ್ಯೂಗಿನಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ 'ಏರ್‌ ನ್ಯೂಗಿನಿ'ಗೆ ಸೇರಿದ್ದಾಗಿದೆ. ವಿಮಾನದಲ್ಲಿ 36 ಪ್ರಯಾಣಿಕರು ಹಾಗೂ 11 ಮಂದಿ ಸಿಬ್ಬಂದಿಯಿದ್ದರು. ವೆನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ನಿಯಂತ್ರಣ ಸಿಗದೆ ವಿಮಾನ ರನ್‌ವೇ ದಾಟಿ ಆಚೆ ಚಲಿಸಿದೆ.ಘಟನೆಗೆ ಕಾರಣವೇನೆಂದು ತನಿಖೆ ನಡೆಸುವುದಾಗಿ ಸಂಸ್ಥೆ ಹೇಳಿದೆ. ಭಾರಿ ಮಳೆಯಿಂದಾಗಿ ರನ್‌ವೇ ಅಂದಾಜಿಸುವಲ್ಲಿ ಪೈಲಟ್‌ಗಳು ವಿಫಲವಾಗಿದ್ದೇ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಮಾನ ನೀರಿನೊಳಗೆ ಅರ್ಧ ಮುಳುಗುವವರೆಗೂ ಅವಘಡ ಸಂಭವಿಸಿರುವುದು ಗೊತ್ತೇ ಆಗಿರಲಿಲ್ಲ ಎಂದು ಕೆಲವು ಪ್ರಯಾಣಿಕರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ