ಆ್ಯಪ್ನಗರ

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಅರೆಸ್ಟ್ ವಾರಂಟ್..!

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಅಕ್ರಮ ಭೂ ಹಂಚಿಕೆ ಆರೋಪದಡಿ ನವಾಜ್ ಷರೀಫ್ ಸೇರಿದಂತೆ ಮೂವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದ್ದು ಷರೀಫ್‌ ಬಂಧನ ಭೀತಿ ಎದುರಾಗಿದೆ.

Agencies 27 Jun 2020, 4:33 pm
ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು ಬಂಧಿಸಲು ವಾರಂಟ್ ಹೊರಡಿಸಲಾಗಿದೆ. ಅಕ್ರಮ ಭೂ ಹಂಚಿಕೆ ಆರೋಪದಡಿ ನವಾಜ್ ಷರೀಫ್ ಸೇರಿದಂತೆ ಮೂವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದ್ದು, ಷರೀಫ್‌ಗೆ ಆತಂಕ ತಂದೊಡ್ಡಿದೆ.
Vijaya Karnataka Web Navaz sharif


ಚೀನಾದಲ್ಲಿ ಮಾನವ ಹಕ್ಕುಗಳ ದಮನ: ವಿಶ್ವಸಂಸ್ಥೆ ಕಳವಳ

ವಯೋಸಹಜ ಅನಾರೋಗ್ಯ ಹಿನ್ನೆಲೆ ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ 70 ವರ್ಷದ ನವಾಜ್ ಷರೀಫ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗಿನ ಯಾವುದೇ ಸಮನ್ಸ್‌ಗಳಿಗೆ ಉತ್ತರಿಸಿಲ್ಲ. ಹೀಗಾಗಿ ಅವರನ್ನು ಘೋಷಿತ ಅಪರಾಧಿಯನ್ನಾಗಿ ಅನೌನ್ಸ್ ಮಾಡಬೇಕು ಅಂತಾ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವನ್ನು ಪಾಕಿಸ್ತಾನದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ಮನವಿ ಮಾಡಿದೆ.

ಅಸ್ಸಾಂ ರಾಜ್ಯಕ್ಕೆ ನೀರು ನಿಲ್ಲಿಸಿಲ್ಲ: ಭೂತಾನ್ ಸ್ಪಷ್ಟನೆ ‌

ನವಾಜ್ ಷರೀಪ್ ಸೇರಿದಂತೆ ಮತ್ತೆ ನಾಲ್ವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿದ್ದು, ಆ ಜಿಯೋ ಮೀಡಿಯಾ ಗ್ರೂಪ್ ಮಾಲೀಕ ಮೀರ್ ಶಕಿಲೂರ್ ರೆಹಮಾನ್ ಮತ್ತು ಲಾಹೋರ್ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಹುಮಯೂನ್ ಫೈಜ್ ರಸೂಲ್ ಮತ್ತು ಮಾಜಿ ನಿರ್ದೇಶಕ ಮಿಯಾನ್ ಬಶೀರ್.

ಪಂಜಾಬ್‌ನ ಮುಖ್ಯಮಂತ್ರಿ (1986) ಆಗಿದ್ದ ವೇಳೆ ನವಾಜ್ ಷರೀಫ್ ಅವರು ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮೀರ್ ಶಕಿಲೂರ್ ರೆಹಮಾನ್ ಅವರಿಗೆ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತದ ದಾಳಿಯ ಭಯ ಶುರು?: ಪಿಒಕೆ ಸಚಿವರಿಗೆ ಪಾಕ್ ಸೇನಾ ಮುಖ್ಯಸ್ಥ ಬರೆದ ಪತ್ರದಲ್ಲೇನಿದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ