Please enable javascript.3,91,000 ಯುರೊಗೆ ಹಿಟ್ಲರ್ ಕಲಾಕೃತಿ ಮಾರಾಟ - 3,91,000 ಯುರೊಗೆ ಹಿಟ್ಲರ್ ಕಲಾಕೃತಿ ಮಾರಾಟ - Vijay Karnataka

3,91,000 ಯುರೊಗೆ ಹಿಟ್ಲರ್ ಕಲಾಕೃತಿ ಮಾರಾಟ

ಏಜೆನ್ಸೀಸ್ 22 Jun 2015, 4:19 am
Subscribe

ಜರ್ಮನಿಯ ನಾಜಿ ಮುಖಂಡ ಅಡಾಲ್ಫ್ ಹಿಟ್ಲರ್‌ನ 14 ಜಲವರ್ಣದ ತೈಲ ಚಿತ್ರಗಳೂ ಸೇರಿದಂತೆ ಅನೇಕ ಕಲಾಕೃತಿಗಳು ನ್ಯುರೆನ್‌ಬರ್ಗ್‌ನಲ್ಲಿ ನಡೆದ ಹರಾಜಿನಲ್ಲಿ 3,91,000 ಯುರೊಗಳಿಗೆ ಮಾರಾಟಗೊಂಡಿವೆ.

391000
3,91,000 ಯುರೊಗೆ ಹಿಟ್ಲರ್ ಕಲಾಕೃತಿ ಮಾರಾಟ
ಬರ್ಲಿನ್: ಜರ್ಮನಿಯ ನಾಜಿ ಮುಖಂಡ ಅಡಾಲ್ಫ್ ಹಿಟ್ಲರ್‌ನ 14 ಜಲವರ್ಣದ ತೈಲ ಚಿತ್ರಗಳೂ ಸೇರಿದಂತೆ ಅನೇಕ ಕಲಾಕೃತಿಗಳು ನ್ಯುರೆನ್‌ಬರ್ಗ್‌ನಲ್ಲಿ ನಡೆದ ಹರಾಜಿನಲ್ಲಿ 3,91,000 ಯುರೊಗಳಿಗೆ ಮಾರಾಟಗೊಂಡಿವೆ.

ಕಲಾಕೃತಿಯೊಂದು ಅತಿ ಹೆಚ್ಚಿನ ಮೊತ್ತಕ್ಕೆ( 1,00,000 ಯುರೊ) ಮಾರಾಟಗೊಂಡಿದ್ದು, ಇದು ಚೀನಾದ ಖರೀದಿದಾರನ ಪಾಲಾಗಿದೆ. ವಿಯೆನ್ನಾ ಮತ್ತು ಪ್ರಾಗ್ ಮತ್ತು ನಗ್ನ ಮಹಿಳೆಯ ಕಲಾಕೃತಿ ಸೇರಿದಂತೆ ಜೀವನ ಚಿತ್ರಕ್ಕೆ ಸಂಬಂಧಿಸಿದ ಚಿತ್ರವು 73 ಸಾವಿರ ಯುರೊಗೆ ಮಾರಾಟವಾಗಿದೆ. ಈ ಎಲ್ಲ ಕಲಾಕೃತಿಗಳು 1904-1922 ಅವಧಿಯದ್ದು. ಅಂದರೆ ನಾಜಿಗಳು ಜರ್ಮನಿಯಲ್ಲಿ ಅಧಿಕಾರ ಸ್ಥಾಪಿಸುವುದಕ್ಕಿಂತ ಬಹಳ ಹಿಂದಿನವು. ಈ ಕಲಾಕೃತಿಗಳಲ್ಲಿ ನಾಜಿಯನ್ನು ಸಂಕೇತಿಸುವ ಯಾವುದೇ ವಿವರಗಳಿಲ್ಲ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ