ಆ್ಯಪ್ನಗರ

ಈ ಕ್ಷುದ್ರ ಗ್ರಹದ ಮೇಲೆ ಸದಾ ಕಾಲ ಯುದ್ಧದ ಸನ್ನಿವೇಶ..! ಏಟಿನ ಮೇಲೆ ಏಟು ತಿನ್ನೋದೇ ಕೆಲಸ..!

ಸಣ್ಣ-ಪುಟ್ಟ ಕ್ಷುದ್ರ ಗ್ರಹಗಳ ದಾಳಿಗೆ ಸದಾ ತುತ್ತಾಗುತ್ತಲೇ ಇದೆ ಪಲ್ಲಾಸ್. ಹೀಗಾಗಿ ಈ ಕ್ಷುದ್ರಗ್ರಹ ಸದಾ ಕಾಲ ಯುದ್ಧದ ಸನ್ನಿವೇಶದಲ್ಲಿ ಇದ್ದಂತೆ ಕಂಡು ಬರುತ್ತೆ. ಸಣ್ಣ ಪುಟ್ಟ ಕಲ್ಲು-ಬಂಡೆಗಳ ದಾಳಿಯಿಂದಾಗಿ ಪಲ್ಲಾಸ್ ತುಂಬಾ ಹಳ್ಳ-ಕೊಳ್ಳಗಳೇ ಇವೆ.

Vijaya Karnataka Web 14 Feb 2020, 12:57 pm
ಅದೊಂದು ಕ್ಷುದ್ರಗ್ರಹ.. ಹೆಸರು ಪಲ್ಲಾಸ್..! 512 ಕಿಲೋ ಮೀಟರ್ ಸುತ್ತಳತೆ ಹೊಂದಿರುವ ಈ ಕ್ಷುದ್ರಗ್ರಹ, ಮಂಗಳ ಹಾಗೂ ಗುರು ಗ್ರಹದ ನಡುವೆ ಸುತ್ತುತ್ತಿದೆ. ಮಂಗಳ ಹಾಗೂ ಗುರು ಗ್ರಹದ ನಡುವೆ ಕ್ಷುದ್ರಗ್ರಹಗಳ ಅತಿ ದೊಡ್ಡ ಸಮೂಹವೇ ಇದೆ. ಈ ಪೈಕಿ ಮೂರನೇ ಅತಿ ದೊಡ್ಡ ಕ್ಷುದ್ರ ಗ್ರಹ ಅನ್ನೋ ಹೆಗ್ಗಳಿಕೆ ಪಲ್ಲಾಸ್‌ಗೆ ಇದೆ..! 1802ರಲ್ಲಿ ಈ ಕ್ಷುದ್ರಗ್ರಹವನ್ನು ಕಂಡು ಹಿಡಿದ ಜರ್ಮನಿಯ ಖಗೋಳ ಶಾಸ್ತ್ರಜ್ಞ, ಇದನ್ನು ಭೂಮಿಯ ರೀತಿಯ ಗ್ರಹವೆಂದೇ ಭಾವಿಸಿಬಿಟ್ಟಿದ್ದ.
Vijaya Karnataka Web astroid
ಈ ಕ್ಷುದ್ರ ಗ್ರಹದ ಮೇಲೆ ಸದಾ ಕಾಲ ಯುದ್ಧದ ಸನ್ನಿವೇಶ..! ಏಟಿನ ಮೇಲೆ ಏಟು ತಿನ್ನೋದೇ ಕೆಲಸ..!


ಪಲ್ಲಾಸ್‌ ಕ್ಷುದ್ರಗ್ರಹ, ಎಲ್ಲಾ ಕ್ಷುದ್ರಗ್ರಹಗಳಂತೆಯೇ ವಿಚಿತ್ರ ರೀತಿಯ ಕಕ್ಷೆಯನ್ನು ಹೊಂದಿದೆ. ಮಂಗಳ ಹಾಗೂ ಗುರು ಗ್ರಹದ ನಡುವಿನ ಕ್ಷುದ್ರ ಗ್ರಹ ಪಟ್ಟಿಯಿಂದ ಆಚೆಗೂ ಒಮ್ಮೆಮ್ಮೆ ಬಂದು ಬಿಡುತ್ತೆ. ಕೆಲವೊಮ್ಮೆ ಭೂಮಿಯ ಕಕ್ಷೆಯ ಬಳಿಗೂ ಬಂದ ಉದಾಹರಣೆಗಳಿವೆ.

ಇದೀಗ ಪಲ್ಲಾಸ್ ಕ್ಷುದ್ರಗ್ರಹದ ಅತ್ಯಂತ ಸ್ಪಷ್ಟ ಚಿತ್ರವೊಂದು ವಿಜ್ಞಾನಿಗಳಿಗೆ ಲಭ್ಯವಾಗಿದೆ. ಚಂದ್ರನನ್ನೂ ಮೀರಿಸುವಷ್ಟು ಕುಳಿಗಳು ಪಲ್ಲಾಸ್ ಕ್ಷುದ್ರಗ್ರಹದ ಮೇಲಿವೆ ಎಂದು ತಿಳಿದುಬಂದಿದೆ. ಸದ್ಯ ಲಭ್ಯವಾಗಿರುವ ಫೋಟೋಗಳನ್ನು ನೋಡಿದರೆ, ಪಲ್ಲಾಸ್ ಕ್ಷುದ್ರಗ್ರಹ ಗಾಲ್ಫ್‌ ಆಟದಲ್ಲಿ ಬಳಸುವ ಬಾಲ್‌ನ ರೀತಿ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಾಗೆ ನೋಡಿದ್ರೆ ಕ್ಷುದ್ರಗ್ರಹ ಸಮೂಹದಲ್ಲಿ ಇಷ್ಟೊಂದು ಹಳ್ಳ-ಕೊಳ್ಳಗಳಿಂದ ಕೂಡಿರುವುದು ಪಲ್ಲಾಸ್ ಕ್ಷುದ್ರಗ್ರಹ ಮಾತ್ರ..!

ಗಂಟೆಗೆ 57,240 ಕಿ.ಮೀ. ವೇಗದಲ್ಲಿ ಭೂಮಿಯತ್ತ ಬರುತ್ತಿದೆ ಬೃಹತ್‌ ಹೆಬ್ಬಂಡೆಯಂತ ಕ್ಷುದ್ರಗ್ರಹ!

ಸಣ್ಣ-ಪುಟ್ಟ ಕ್ಷುದ್ರ ಗ್ರಹಗಳ ದಾಳಿಗೆ ಸದಾ ತುತ್ತಾಗುತ್ತಲೇ ಇದೆ ಪಲ್ಲಾಸ್. ಹೀಗಾಗಿ ಈ ಕ್ಷುದ್ರಗ್ರಹ ಸದಾ ಕಾಲ ಯುದ್ಧದ ಸನ್ನಿವೇಶದಲ್ಲಿ ಇದ್ದಂತೆ ಕಂಡು ಬರುತ್ತೆ. ಸಣ್ಣ ಪುಟ್ಟ ಕಲ್ಲು-ಬಂಡೆಗಳ ದಾಳಿಯಿಂದಾಗಿ ಪಲ್ಲಾಸ್ ತುಂಬಾ ಹಳ್ಳ-ಕೊಳ್ಳಗಳೇ ಇವೆ.

ಭೂಮಿಯತ್ತ ಧಾವಿಸಿ ಬರುತ್ತಿವೆ ‘ಅಪಶಕುನ’ದ ಅವಳಿ ಕ್ಷುದ್ರಗ್ರಹ!

ಐರೋಪ್ಯ ವೀಕ್ಷಣಾಲಯ ಪಲ್ಲಾಸ್‌ನ ಚಲನವಲನಗಳ ಮೇಲೆ ನಿಗಾ ಇಟ್ಟಿದೆ. ಚಿಲಿ ದೇಶದಲ್ಲಿ ಇರುವ ಟೆಲಿಸ್ಕೋಪ್‌ಗಳ ಸಹಾಯದಿಂದ ಪಲ್ಲಾಸ್‌ನ ಛಾಯಾಚಿತ್ರಗಳನ್ನು ತೆಗೆಯಲಾಗುತ್ತಿದೆ. ಪಲ್ಲಾಸ್‌ ಕ್ಷುದ್ರ ಗ್ರಹದ ಮೇಲೆ 30 ಕಿ.ಮೀ ಸುತ್ತಳತೆಯ 36ಕ್ಕೂ ಅಧಿಕ ಗುಂಡಿಗಳಿವೆ ಎಂದು ತಿಳಿದುಬಂದಿದೆ. ಪಲ್ಲಾಸ್ ಕ್ಷುದ್ರಗ್ರಹದ ದಕ್ಷಿಣ ಧೃವ ಪ್ರದೇಶದಲ್ಲಿ ಹೊಳೆಯುವ ಚುಕ್ಕಿಯಂಥಾ ಪ್ರದೇಶವಿದ್ದು, ಇಲ್ಲಿ ಉಪ್ಪಿನ ಸಂಗ್ರಹ ಇರಬಹುದು ಎಂದು ಅಂದಾಜಿಸಲಾಗಿದೆ.

ಭೂಮಿಗೆ ಅತಿ ಸಮೀಪದಲ್ಲೇ ಹಾದುಹೋಗಲಿರುವ ಕ್ಷುದ್ರಗ್ರಹ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ