ಆ್ಯಪ್ನಗರ

ಬಾಗ್ದಾದ್ ಸ್ಫೋಟ: 82 ಮಂದಿ ಸಾವು

ಶನಿವಾರ ಮಧ್ಯ ರಾತ್ರಿ ನಗರದ ಎರಡು ಕಡೆ ಸಂಭವಿಸಿದ ಸ್ಫೋಟದಿಂದ ಕನಿಷ್ಠ 82 ಮಂದಿ ಮೃತರಾಗಿದ್ದು, 200 ಮಂದಿ ಗಾಯಗೊಂಡಿದ್ದಾರೆ.

ಏಜೆನ್ಸೀಸ್ 3 Jul 2016, 7:58 pm
ಬಾಗ್ದಾದ್‌: ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಎರಡು ಬಾಂಬ್‌ ಸ್ಫೋಟಗಳಲ್ಲಿ 84 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕರಾಡ್‌ನ ಬಾಗ್ದಾದನ ಜನನಿಬಿಡ ಕೇಂದ್ರವಾದ ಕರಾಡ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟಿಸಿ 79 ಮಂದಿ ಪ್ರಾಣ ಕಳೆದುಕೊಂಡಿದ್ದು, 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಂಜಾನ್‌ ಹಬ್ಬದ ಸಂಭ್ರಮದಲ್ಲಿರುವ ಜನ ಇಲ್ಲಿನ ಜನನಿಬಿಡ ಮಾರುಕಟ್ಟೆಗೆ ಸಾಮಗ್ರಿ ಖರೀದಿಗೆ ಬಂದಿದ್ದರಿಂದ ತುಂಬಾ ಜನಜಂಗುಳಿಯಿಂದ ಕೂಡಿತ್ತು.

ಸ್ಫೋಟದ ತೀವ್ರತೆಗೆ ಕಟ್ಟಡಗಳು ನಾಶವಾಗಿದ್ದು, ಕಟ್ಟಡದಲ್ಲಿ ಮಕ್ಕಳು ಸಿಲುಕಿ ಮೃತಪಟ್ಟಿವೆ. ಬಟ್ಟೆ ಮತ್ತು ಸೆಲ್‌ಫೋನ್‌ ಶಾಪ್‌ ಬಳಿ ಈ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾನೆ. ದಾಳಿ ನಡೆದ ಒಂದು ಗಂಟೆಯೊಳಗೆ ಇರಾಕ್‌ ಪ್ರಧಾನಿ ಹೈದರ್‌- ಅಲ್‌ - ಅಬಾದಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು. ದಾಳಿಯಿಂದ ಜನ ಸಿಟ್ಟಿಗೆದ್ದಿದ್ದು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐಸಿಸ್‌ ಸ್ಫೋಟದ ಹೊಣೆ ಹೊತ್ತಿದ್ದು, ಶಿಯಾ ಮುಸ್ಲಿಂರನ್ನು ಟಾರ್ಗೆಟ್‌ ಮಾಡಿದ್ದೇವೆ ಎಂದು ಆನ್‌ಲೈನ್‌ ಪೋಸ್ಟ್‌ ಮಾಡಿ ಘೋಷಿಸಿದೆ.

2ನೇ ದಾಳಿ:

Vijaya Karnataka Web at least 82 killed in overnight baghdad bombings police and medics say
ಬಾಗ್ದಾದ್ ಸ್ಫೋಟ: 82 ಮಂದಿ ಸಾವು


ಪೂರ್ವ ಬಾಗ್ದಾದ್‌ನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. 16 ಜನ ಗಾಯಗೊಂಡಿದ್ದಾರೆ.

ಫಲ್ಲುಜಾ ನಗರವನ್ನು ಇರಾಕ್‌ ಸರಕಾರ ಪಡೆಗಳು ಮರು ವಶಪಡಿಸಿಕೊಂಡ ವಾರದ ಬಳಿಕ ಈ ಭಯಾನಕ ದಾಳಿ ನಡೆದಿದ್ದು, ಐಸಿಸ್‌ ಪ್ರತೀಕಾರದ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಇರಾಕ್‌: 6 ತಿಂಗಳಲ್ಲಿ 400 ಹೆಚ್ಚು ಬಲಿ

2016 ಜೂನ್‌ 9: 30 ಸಾವು

2016 ಮೇ 17: ನಾಲ್ಕು ಬಾಂಬ್‌ ಸ್ಫೋಟಕ್ಕೆ 69 ಬಲಿ

2016 ಮೇ 11: ಕಾರ್‌ ಬಾಂಬ್‌ ಸ್ಫೋಟಕ್ಕೆ 93 ಮಂದಿ ಮೃತ್ಯು

2016 ಮೇ 1: 2 ಕಾರ್‌ ಬಾಂಬ್‌ ಗೆ 33 ಬಲಿ

2016 ಮಾ. 26: ಆತ್ಮಾಹುತಿ ದಾಳಿಗೆ 32 ಜನ ಪ್ರಾಣಾಂತ್ಯ

2016 ಫೆ. 28: ಅವಳಿ ಆತ್ಮಾಹುತಿ ದಾಳಿಗೆ 70 ಜನರು ಹತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ