ಆ್ಯಪ್ನಗರ

ಆಘ್ಘನ್ ಬಾಲಕನ ಕತ್ತಿಗೆ ಚಾಕು ಇಟ್ಟನಾ ಆಸಿಸ್ ಸೈನಿಕ?: ಚೀನಾ ಪ್ರತಿಪಾದನೆಗೆ ಮಾರಿಸನ್ ಕಿಡಿ!

ಆಸ್ಟ್ರೇಲಿಯಾದ ಸೈನಿಕನೋರ್ವ ಅಘ್ಘಾನಿಸ್ತಾನದ ಬಾಲಕನೋರ್ವನ ಕುತ್ತಿಗೆಗೆ ರಕ್ತಸಿಕ್ತ ಚಾಕು ಇಟ್ಟ ಫೋಟೋವನ್ನು ಚೀನಾ ಬಿಡುಗಡೆ ಮಾಡಿದ್ದು, ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್ ಕೆರಳಿ ಕೆಂಡಾಮಂಡಲರಾಗಿದ್ದಾರೆ.

Vijaya Karnataka Web 30 Nov 2020, 8:12 pm
ಸಿಡ್ನಿ: ಆಸ್ಟ್ರೇಲಿಯಾದ ಸೈನಿಕನೋರ್ವ ಅಘ್ಘಾನಿಸ್ತಾನದ ಬಾಲಕನೋರ್ವನ ಕುತ್ತಿಗೆಗೆ ರಕ್ತಸಿಕ್ತ ಚಾಕು ಇಟ್ಟ ಫೋಟೋವನ್ನು ಚೀನಾ ಬಿಡುಗಡೆ ಮಾಡಿದ್ದು, ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್ ಕೆರಳಿ ಕೆಂಡಾಮಂಡಲರಾಗಿದ್ದಾರೆ.
Vijaya Karnataka Web Scott Morrison
ಸಂಗ್ರಹ ಚಿತ್ರ


ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಫೋಟೋ ನಕಲಿ ಎಂದು ಸ್ಕಾಟ್ ಮಾರಿಸನ್ ಸ್ಪಷ್ಟಪಡಿಸಿದ್ದಾರೆ.

ಆಸಿಸ್ ಸೈನಿಕರ ವೃತ್ತಿಪರತೆ ಹಾಗೂ ಮಾನವೀಯತೆ ಮೇಲೆ ಚೀನಾ ಬೊಟ್ಟು ಮಾಡಿದ್ದು, ನಮ್ಮ ಯಾವುದೇ ಸೈನಿಕ ಇಂತಹ ಹೀನ ಕೃತ್ಯ ಎಸಗಲು ಸಾಧ್ಯವೇ ಇಲ್ಲ ಎಂದು ಸ್ಕಾಟ್ ಮಾರಿಸನ್ ಗುಡುಗಿದ್ದಾರೆ.

ಮಲಬಾರ್‌ ಗುಂಪಿಗೆ ಸೇರಿದ ಆಸ್ಟ್ರೇಲಿಯಾ: ಜಾಗತಿಕ ಸಾಮರಿಕ ನಕ್ಷೆಯಿಂದ ಚೀನಾ ಆಗಲಿದೆ ಮಾಯ?

ಚೀನಾ ತನ್ನ ಕೀಳು ಕೃತ್ಯಕ್ಕೆ ನಾಚಿಕೆಪಡಬೇಕು. ಸುಳ್ಳು ಫೋಟೋ ಸೃಷ್ಟಿಸಿರುವ ಚೀನಾ ಜಾಗತಿಕವಾಗಿ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಂಡಿದೆ ಎಂದು ಸ್ಕಾಟ್ ಮಾರಿಸನ್ ಹರಿಹಾಯ್ದಿದ್ದಾರೆ.

ಇದೇ ವೇಳೆ ಜಾವೋ ಲಿಜಿಯಾನ್ ಶೇರ್ ಮಾಡಿರುವ ಫೋಟೋವನ್ನು ಈ ಕೂಡಲೇ ತೆಗೆದು ಹಾಕುವಂತೆ, ಸ್ಕಾಟ್ ಮಾರಿಸನ್ ಟ್ವಿಟ್ಟರ್‌ಗೆ ಮನವಿ ಮಾಡಿದ್ದಾರೆ.

ಆಸ್ಟ್ರೇಲಿಯಾದ ಸೈನಿಕನೆಂದು ಹೇಳಲಾದ ವ್ಯಕ್ತಿಯೋರ್ವ, ಅಫ್ಘಾನಿಸ್ತಾನದ ಪುಟ್ಟ ಬಾಲಕನ ಕತ್ತಿಗೆ ಚಾಕು ಇಟ್ಟು ಸಂಭ್ರಮಿಸುತ್ತಿದ್ದ ಫೋಟೋ ಹಂಚಿಕೊಂಡಿದ್ದ ಜಾವೋ ಲಿಜಿಯಾನ್, ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾ ಎಸಗುತ್ತಿರುವ ಭೀಭಿತ್ಸ ಕೃತ್ಯಗಳಿಗೆ ಇದು ಸಾಕ್ಷಿ ಎಂದು ಟ್ವೀಟ್ ಮಾಡಿದ್ದರು.

ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾ: ಚೀನಾ ಪ್ರತಿಕ್ರಿಯೆ ಏನು?

ಚೀನಾ ಪ್ರತ್ಯುತ್ತರ:
ತಾನು ಸುಳ್ಳು ಫೋಟೋ ಹಂಚಿಕೊಂಡಿರುವುದಾಗಿ ಆರೋಪಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಚೀನಾ ತಿರುಗೇಟು ನೀಡಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನೌಕಾಸೇನೆಗೆ ಎದುರಾದ ಆಸ್ಟ್ರೇಲಿಯಾ ಯುದ್ಧ ಹಡಗು!

ಮುಗ್ಧ ಅಫ್ಘಾನಿಸ್ತಾನದ ನಾಗರಿಕರನ್ನು ಹತ್ಯೆ ಮಾಡುವ ಆಸ್ಟ್ರೇಲಿಯಾ ಸೈನಿಕರ ಕುಕೃತ್ಯ ಕಂಡು ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್ ನಾಚಿಕೆಪಡಬೇಕೆ ಹೊರತು ನಾವಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ತಿರುಗೇಟು ನಿಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ