ಆ್ಯಪ್ನಗರ

ಟ್ರಂಪ್‌ ಭೇಟಿಯಾಗಿ ದೂರು ನೀಡಿದ್ದ ಪ್ರಿಯಾಗೆ ಪ್ರಧಾನಿ ಹಸೀನಾ ನೆರವು

ಟ್ರಂಪ್‌ ಅವರನ್ನು ಭೇಟಿಯಾದ ಪ್ರಿಯಾ ಸಹಾ ವಿರುದ್ಧ ಶೀಘ್ರವೇ ದೇಶದ್ರೋಹದ ಆರೋಪ ಹೊರಿಸಿ ವಿಚಾರಣೆಗೆ ಗುರಿಪಡಿಸಲು ಅನುಮತಿ ಕೋರಿದ್ದ ಅಧಿಕಾರಿಗಳಿಗೆ ಪ್ರಧಾನಿ ಹಸೀನಾ ಸಮ್ಮತಿ ನೀಡಿಲ್ಲ. ಜತೆಗೆ ಸ್ವಲ್ಪ ಸಮಯ ಕಾದು ಪ್ರಿಯಾ ಜತೆಗೆ ಚರ್ಚೆ ನಡೆಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಪ್ರಿಯಾ ನಿಟ್ಟುಸಿರು ಬಿಡುವಂತಾಗಿದೆ.

PTI 22 Jul 2019, 5:00 am
ಢಾಕಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರ ಹಠಾತ್‌ ವಲಸೆ ಕುರಿತು ವಿವರಿಸಿದ್ದರಿಂದ ದೇಶದ್ರೋಹದ ಆರೋಪಕ್ಕೆ ಗುರಿಯಾಗಿದ್ದ ಬಾಂಗ್ಲಾದೇಶದ ಹಿಂದೂ ಮಹಿಳೆಗೆ ಪ್ರಧಾನಿ ಶೇಖ್‌ ಹಸೀನಾ ನೆರವಿನ ಹಸ್ತ ಚಾಚಿದ್ದಾರೆ.
Vijaya Karnataka Web haseena


ಟ್ರಂಪ್‌ ಅವರನ್ನು ಭೇಟಿಯಾದ ಪ್ರಿಯಾ ಸಹಾ ವಿರುದ್ಧ ಶೀಘ್ರವೇ ದೇಶದ್ರೋಹದ ಆರೋಪ ಹೊರಿಸಿ ವಿಚಾರಣೆಗೆ ಗುರಿಪಡಿಸಲು ಅನುಮತಿ ಕೋರಿದ್ದ ಅಧಿಕಾರಿಗಳಿಗೆ ಪ್ರಧಾನಿ ಹಸೀನಾ ಸಮ್ಮತಿ ನೀಡಿಲ್ಲ. ಜತೆಗೆ ಸ್ವಲ್ಪ ಸಮಯ ಕಾದು ಪ್ರಿಯಾ ಜತೆಗೆ ಚರ್ಚೆ ನಡೆಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಪ್ರಿಯಾ ನಿಟ್ಟುಸಿರು ಬಿಡುವಂತಾಗಿದೆ.

ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್‌ ಯೂನಿಟಿ ಕೌನ್ಸಿಲ್‌ನ ಸಂಘಟನಾ ಕಾರ್ಯದರ್ಶಿಯಾಗಿರುವ ಪ್ರಿಯಾ ಸಹಾ ಜುಲೈ 19ರಂದು ಶ್ವೇತಭವನದಲ್ಲಿ ಟ್ರಂಪ್‌ ಅವರನ್ನು ಭೇಟಿ ಮಾಡಿದ್ದರು. ಅಲ್ಪಸಂಖ್ಯಾತರ ಸಮುದಾಯಗಳ 3.7 ಲಕ್ಷ ಮಂದಿ ಬಾಂಗ್ಲಾದಿಂದ ಹಠಾತ್‌ ಕಣ್ಮರೆಯಾಗಿದ್ದಾರೆ ಎಂದು ಟ್ರಂಪ್‌ಗೆ ದೂರು ನೀಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಕೂಡಲೇ ಪ್ರತಿಕ್ರಿಯೆ ನೀಡಿದ್ದ ಬಾಂಗ್ಲಾದೇಶ ಸಾರಿಗೆ ಸಚಿವ ಹಾಗೂ ಆಡಳಿತಾರೂಢ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಒಬಾಯ್ದುಲ್‌ ಕ್ವಾದರ್‌, '' ಪ್ರಿಯಾ ಸುಳ್ಳು ಆರೋಪ ಮಾಡಿದ್ದಾರೆ. ಅವರು ದುರುದ್ದೇಶ ಹೊಂದಿದ್ದಾರೆ. ನಮ್ಮ ದೇಶದ ಘನತೆ ಕುಗ್ಗಿಸಿದ್ದಾರೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ಹೂಡಲಾಗುವುದು'' ಎಂದು ಕಿಡಿಕಾರಿದ್ದರು.
ಆದರೆ ಪ್ರಧಾನಿ ಹಸೀನಾ ಅವರು ಒಬಾಯ್ದುಲ್‌ಗೆ ಕರೆ ಮಾಡಿ, ಪ್ರಿಯಾ ಅವರಿಂದ ವಿವರಣೆ ಪಡೆಯದೆಯೇ ಯಾವುದೇ ಕ್ರಮ ಜರುಗಿಸದಂತೆ ಖಡಕ್‌ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ