ಆ್ಯಪ್ನಗರ

ವಾರದಲ್ಲಿ 5 ದಿನ ಪ್ರಧಾನಿ, 1 ದಿನ ವೈದ್ಯ, ಮತ್ತೊಂದು ದಿನ ಮನೆಯ ಸದಸ್ಯ!

ಆದರೆ ಭೂತನ್‌ನ ಪ್ರಧಾನಿಯ ಕಾರ್ಯವೈಖರಿ ಇಂತಹ ರಾಜಕಾರಣಿಗಳನ್ನು ನಾಚಿಸುವಂತಿದೆ. ವೃತ್ತಿ ಜೀವನವನ್ನು ಮರೆಯದೆ ಸೇವೆ ಒದಗಿಸುವ ಸ್ಪೂರ್ತಿ ನೀಡುವಂತಿದೆ.

Agencies 10 May 2019, 2:17 pm
ಥಿಂಪು: ನಟರು/ಕ್ರೀಡಾ ತಾರೆಯರು ತಮ್ಮ ಕ್ಷೇತ್ರದಲ್ಲಿ ಬೇಡಿಕೆ ಕುಸಿಯುತ್ತಿದೆ ಎಂದು ಅರಿವಾಗುತ್ತಿದ್ದಂತೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸುದ್ದಿಯಲ್ಲಿರಲು ಬಯಸುವ ರಾಜಕಾರಣಿಗಳು ಭಾರತದಲ್ಲಿ ಹೆಚ್ಚಾಗುತ್ತಿದ್ದಾರೆ. ಹೆಚ್ಚಿನ ರಾಜಕಾರಣಿಗಳು ಮಂತ್ರಿ ಸೇರಿದಂತೆ ಯಾವುದೇ ಉನ್ನತ ಹುದ್ದೆ ಸಿಕ್ಕುತ್ತಿದ್ದಂತೆ ವೃತ್ತಿಯನ್ನೇ ಮರೆತು ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರೆ.
Vijaya Karnataka Web lotay tshering


ಆದರೆ ಭೂತನ್‌ನ ಪ್ರಧಾನಿಯ ಕಾರ್ಯವೈಖರಿ ಇಂತಹ ರಾಜಕಾರಣಿಗಳನ್ನು ನಾಚಿಸುವಂತಿದೆ. ವೃತ್ತಿ ಜೀವನವನ್ನು ಮರೆಯದೆ ಸೇವೆ ಒದಗಿಸುವ ಸ್ಪೂರ್ತಿ ನೀಡುವಂತಿದೆ.

ಭೂತಾನ್‌ ಪ್ರಧಾನಿ ಲೋತೆ ಶೇರಿಂಗ್‌ ಮೂಲತಃ ವೈದ್ಯರು. 50 ವರ್ಷದ ಶೇರಿಂಗ್‌ ಕಳೆದ ವರ್ಷ ನವಂಬರ್‌ 7ರಂದು ಪ್ರಧಾನಿಯಾದರು. ಆದರೆ ದೇಶದ ಇನ್ನತ ಹುದ್ದೆ ಸಿಕ್ಕಿತೆಂದು ಅವರು ತಮ್ಮ ವೈದ್ಯ ವೃತ್ತಿಯನ್ನು ಮರೆತಿಲ್ಲ.

ಪ್ರಧಾನಿ ಶೇರಿಂಗ್‌ ವಾರದ 5 ದಿನ ರಾಷ್ಟ್ರದ ಆಡಳಿತದ ಬಗ್ಗೆ ಚಿತ್ತ ಹರಿಸಿದರೆ, ಶನಿವಾರವನ್ನು ರೋಗಿಗಳ ಸೇವೆಗೆ ಮೀಸಲಿಡುತ್ತಾರೆ. ಹಾಗೆ ಭಾನುವಾರವನ್ನು ಕುಟುಂಬ ಸದಸ್ಯರ ಜತೆ ಕಳೆಯುತ್ತಾರೆ. ಜಿಗ್ಮೆ ಡೋರ್ಜಿ ವಾಂಗ್ಚುಕ್‌ ನ್ಯಾಷನಲ್‌ ರೆಫರಲ್‌ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶೇರಿಂಗ್‌ ಪ್ರಮುಖ ಸರ್ಜರಿಗಳನ್ನು ಮಾಡುತ್ತಾರೆ.

ವಾರಂತ್ಯದಲ್ಲಿ ಜನರು ಗಲ್ಫ್‌ ಆಡುತ್ತಾರೆ. ಆರ್ಚರಿ ಮೊರೆ ಹೋಗುತ್ತಾರೆ. ಆದರೆ ನನಗೆ ಸರ್ಜರಿ ಮಾಡುವುದೇ ಇಷ್ಟ. ವಾರಾಂತ್ಯವನ್ನು ನಾನು ಹೀಗೆ ಕಳೆಯುತ್ತೇನೆ ಎನ್ನುತ್ತಾರೆ ಪ್ರಧಾನಿ ಶೇರಿಂಗ್‌. ಕಳೆದ ಶನಿವಾರ ವ್ಯಕ್ತಿಯೊಬ್ಬರಿಗೆ ಮೂತ್ರಕೋಶದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಥಿಂಪು ನಗರದಲ್ಲಿ ಸ್ವತಃ ಕಾರು ಚಲಾಯಿಸಿಕೊಂಡು ಹೋಗುವ ಶೇರಿಂಗ್‌ ಬೆಂಗಾವಲು ವಾಹನವನ್ನು ಬಳಸುವುದಿಲ್ಲ. ಭೂತಾನ್‌ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು ದಶಕ ಕಳೆದಿದೆ. 2014ರಲ್ಲಿ ಸ್ವತಂತ್ರ ರಾಷ್ಟ್ರವಾಯಿತು. ಶೇರಿಂಗ್‌ ಅವರು ಬಾಂಗ್ಲಾದೇಶ, ಜಪಾನ್‌, ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿ ವೈದ್ಯ ತರಬೇತಿ ಪಡೆದಿದ್ದಾರೆ. ಶೇರಿಂಗ್‌ ಅವರ ಪ್ರಧಾನಿ ಕಚೇರಿಯ ಸೀಟ್‌ನಲ್ಲಿ ವೈದ್ಯರ ಕೋಟ್‌ ಯಾವಾಗಲೂ ಇರುತ್ತದಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ