ಆ್ಯಪ್ನಗರ

ಜೋ ಬೈಡನ್‌ ಆಯ್ಕೆಯಾದರೆ ಹೆಚ್ಚು ದೇಶಗಳು ಅಮೆರಿಕದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿವೆ: ತಜ್ಞರು

ಟೀಚಿಂಗ್‌, ರೀಸರ್ಚ್ ಆ್ಯಂಡ್‌ ಇಂಟರ್‌ನ್ಯಾಷನಲ್‌ ಪಾಲಿಸಿ (ಟಿಆರ್‌ಐಪಿ) ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅಮೆರಿಕದ ವಿಶ್ವವಿದ್ಯಾಲಯಗಳ 708 ಮಂದಿ ರಾಜಕೀಯ ತಜ್ಞರು, ವಿದೇಶಾಂಗ ನೀತಿ ನಿರೂಪಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಜೋ ಬೈಡೆನ್‌ ಹೆಚ್ಚು ಸಮರ್ಥರು ಮತ್ತು ತಮ್ಮ ಸಶಕ್ತರು ಎಂದು ಅಭಿಪ್ರಾಯಪಟ್ಟಿದೆ.

Vijaya Karnataka Web 30 Oct 2020, 7:55 am
ವಾಷಿಂಗ್ಟನ್‌: ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ಪಾರ್ಟಿಯ ಜೋ ಬೈಡನ್‌ ಆಯ್ಕೆಯಾದರೆ ಹೆಚ್ಚು ದೇಶಗಳು ಅಮೆರಿಕದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿವೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web Joe Biden


ಟೀಚಿಂಗ್‌, ರೀಸರ್ಚ್ ಆ್ಯಂಡ್‌ ಇಂಟರ್‌ನ್ಯಾಷನಲ್‌ ಪಾಲಿಸಿ (ಟಿಆರ್‌ಐಪಿ) ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅಮೆರಿಕದ ವಿಶ್ವವಿದ್ಯಾಲಯಗಳ 708 ಮಂದಿ ರಾಜಕೀಯ ತಜ್ಞರು, ವಿದೇಶಾಂಗ ನೀತಿ ನಿರೂಪಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಜೋ ಬೈಡೆನ್‌ ಹೆಚ್ಚು ಸಮರ್ಥರು ಮತ್ತು ತಮ್ಮ ಸಶಕ್ತ ವಿದೇಶಾಂಗ ನೀತಿಯಿಂದಲೇ ಬೈಡೆನ್‌ ಮತ್ತಷ್ಟು ದೇಶಗಳ ಜತೆ ಸಖ್ಯ ಬೆಳೆಸಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರ ವಿದೇಶಾಂಗ ನೀತಿಯಲ್ಲಿ ಪ್ರಮುಖ ಬದಲಾವಣೆ ಕಾಣುವ ಕ್ಷೇತ್ರಗಳೆಂದರೆ ಜಾಗತಿಕ ತಾಪಮಾನ ಬದಲಾವಣೆ, ಜಾಗತಿಕ ಆರೋಗ್ಯ ಸೇವೆ ಮತ್ತು ಬಹುರಾಷ್ಟ್ರೀಯ ಸಂಘಟನೆಗಳೊಂದಿಗೆ ಬಾಂಧವ್ಯ ಬಲಪಡಿಸಿಕೊಳ್ಳುವುದಾಗಿದೆ. ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಏನೇ ಆದರೂ ಅಮೆರಿಕದ ಕುರಿತು ಚೀನಾ, ರಷ್ಯಾ ಮತ್ತು ಇರಾನ್‌ ನಿಲುವು ಸ್ವಲ್ಪವೂ ಬದಲಾಗದು ಎಂಬ ಅಭಿಪ್ರಾಯವನ್ನು ಈ ತಜ್ಞರು ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯದ ಭವಿಷ್ಯಕ್ಕೆ ಚೀನಾದಿಂದ ಗಂಭೀರ ಬೆದರಿಕೆ: ಮೈಕ್ ಪಾಂಪಿಯೋ!

ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಭಾರೀ ಕುತೂಹಲ ಸೃಷ್ಟಿಯಾಗಿದೆ. ಜೊ ಬಿಡೆನ್‌ ಹಾಗೂ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಯಾರಿಗೆ ಅಮೆರಿಕನ್ನರು ಮತ ಹಾಕಲಿದ್ದಾರೆ ಹಾಗೂ ಯಾರು ಗೆಲ್ಲಲ್ಲಿದ್ದಾರೆ ಎನ್ನುವುದು ಕುತೂಹಲದ ಜೊತೆಗೆ ಇತಿಹಾ ಸೃಷ್ಟಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ