ಆ್ಯಪ್ನಗರ

ಬಾಂಗ್ಲಾದೇಶದ ಮಾಜಿ ಪ್ರಾಧಾನಿ ಖಲೀದಾ ಜಿಯಾ ಬಿಡುಗಡೆ

ಭ್ರಷ್ಟಾಚಾರ ಆರೋಪದಡಿ ಜೈಲುವಾಸ ಅನುಭವಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶದ ರಾಷ್ಟ್ರೀಯವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ ಖಲೀದಾ ಜಿಯಾ ಅವರ ವಯಸ್ಸನ್ನು ಪರಿಗಣಿಸಿ ಮಾನವೀಯ ಆಧಾರದ ಮೇಲೆ ಅಲ್ಲಿನ ಸರಕಾರ ಬಿಡುಗಡೆಗೊಳಿಸಿದೆ.

Vijaya Karnataka Web 25 Mar 2020, 8:39 pm
ಢಾಕಾ: ಭ್ರಷ್ಟಾಚಾರ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ 2018ರಿಂದ ಜೈಲುವಾಸ ಅನುಭವಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶದ ರಾಷ್ಟ್ರೀಯವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ ಖಲೀದಾ ಜಿಯಾ ಅವರ ವಯಸ್ಸನ್ನು ಪರಿಗಣಿಸಿ ಮಾನವೀಯ ಆಧಾರದ ಮೇಲೆ ಅಲ್ಲಿನ ಸರಕಾರ ಬಿಡುಗಡೆಗೊಳಿಸಿದೆ.
Vijaya Karnataka Web Khaleda Zia


75 ವರ್ಷದ ಖಲೀದಾ ಜಿಯಾ ಅವರನ್ನು ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ (ಬಿಎಸ್‌ಎಂಎಂಯು) ಬುಧವಾರ ಬಂಧ ಮುಕ್ತಗೊಳಿಸಲಾಯಿತು. ಸಂಜೆ 4.14 ರ ಸುಮಾರಿಗೆ ಖಲೀದಾ ಝಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ಬಿಎಸ್‌ಎಂಎಂಯುನಿಂದ ಹೊರಬಂದರು

ಹಿನ್ನೆಲೆ: ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಅಪರಾಧ ಸಾಬೀತಾದ ಕಾರಣ ಅಲ್ಲಿನ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಇದೀಗ ಶಿಕ್ಷೆ ಅವಧಿ ಪೂರ್ಣಗೊಳ್ಳುವ ಮೊದಲೇ ಮಾನವೀಯತೆಯ ಆದಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾ ಮಾಜಿ ಪ್ರಧಾನಿಗೆ 7 ವರ್ಷ ಜೈಲು

ಪತಿ ಹೆಸರಲ್ಲಿದ್ದ ಜಿಯಾ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಮುಖ್ಯಸ್ಥರಾಗಿರುವ ಜಿಯಾ ಹಾಗೂ ಅವರ ಕಾರ್ಯದರ್ಶಿ ಹ್ಯಾರಿಸ್ ಚೌಧರಿ ಸೇರಿದಂತೆ ಇತರ ಇಬ್ಬರಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು.

ಜಿಯಾ 2018ರ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ. ಅನಾಥಾಶ್ರಮದ ಹಣ ದುರುಪಯೋಗ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯ 5 ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಚುನಾವಣಾ ಹೊಸ್ತಿಲಲ್ಲಿ ಅವರಿಗೆ ಮತ್ತೊಂದು ಶಿಕ್ಷೆಯೂ ಆಗಿತ್ತು. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇತರ ಮೂವರೊಂದಿಗೆ ಸೇರಿ ಅಜ್ಞಾತ ಮೂಲಗಳಿಂದ ಟ್ರಸ್ಟ್ ಹೆಸರಲ್ಲಿ 3,75,000 ಡಾಲರ್ ಸಂಗ್ರಹಿಸಿದ್ದಾರೆ ಎಂಬ ಆರೋಪ ಇವರ ಮೇಲಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ