ಆ್ಯಪ್ನಗರ

ಪಾಕ್‌ನಲ್ಲಿ ಆತ್ಮಾಹುತಿ ದಾಳಿ: 20 ಮಂದಿ ಸಾವು

ಪಾಕಿಸ್ತಾನದ ವಾಯುವ್ಯ ಪೇಶಾವರ ನಗರದಲ್ಲಿ ನಡೆಯುತ್ತಿದ್ದ ಚುನಾವಣಾ ರ‍್ಯಾಲಿ ವೇಳೆ ತಾಲಿಬಾನ್‌ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಗೆ ಅವಾಮಿ ರಾಷ್ಟ್ರೀಯ ಪಕ್ಷದ ನಾಯಕ ಹರೂನ್‌ ಬಿಲೋರ್‌ ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Vijaya Karnataka 12 Jul 2018, 10:44 am
ಪೇಶಾವರ: ಪಾಕಿಸ್ತಾನದ ವಾಯುವ್ಯ ಪೇಶಾವರ ನಗರದಲ್ಲಿ ನಡೆಯುತ್ತಿದ್ದ ಚುನಾವಣಾ ರ‍್ಯಾಲಿ ವೇಳೆ ತಾಲಿಬಾನ್‌ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಗೆ ಅವಾಮಿ ರಾಷ್ಟ್ರೀಯ ಪಕ್ಷದ ನಾಯಕ ಹರೂನ್‌ ಬಿಲೋರ್‌ ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Vijaya Karnataka Web Bomb


ಜುಲೈ 25ರ ಪಾಕ್‌ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪ್ರಚಾರ ರ‍್ಯಾಲಿಗಳನ್ನೇ ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ಎರಡನೇ ದಾಳಿ ಇದಾಗಿದೆ.

ಪೇಶಾವರ ನಗರದ ಪಿಕೆ-78ನೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎನ್‌ಪಿ ನಾಯಕ ಹರೂನ್‌ ಬಿಲೋರ್‌ ಅವರು ಯಾಕತೂತ್‌ ಪ್ರದೇಶದಲ್ಲಿ ತಮ್ಮ ಪಕ್ಷ ದ ಕಾರ್ಯಕರ್ತರೊಂದಿಗೆ ಮಂಗಳವಾರ ಮಧ್ಯರಾತ್ರಿ ಸಮಾಲೋಚನೆ ನಡುಸುತ್ತಿರುವಾಗ ಅವರ ವಾಹನ ಸಮೀಪದಲ್ಲೇ ಸ್ಫೋಟ ಸಂಭವಿಸಿತು.

ಹರೂನ್‌ ಅವರು ಎಎನ್‌ಪಿ ನಾಯಕ ಬಶೀರ್‌ ಬಿಲೋರ್‌ ಅವರ ಪುತ್ರ. ಬಶೀರ್‌ ಅವರು ಕೂಡ 2012ರಲ್ಲಿ ತಾಲಿಬಾನ್‌ ದಾಳಿಯಲ್ಲಿ ಹತರಾಗಿದ್ದರು. ದಾಳಿಗೆ 8 ಕೆ.ಜಿ. ಟಿಎನ್‌ಟಿ ಸ್ಫೋಟಕವನ್ನು ಬಳಸಲಾಗಿದೆ.

ಎಎನ್‌ಪಿ ಕಾರ್ಯಕರ್ತರು ಆಸ್ಪತ್ರೆ ಹೊರಗೆ ಜಮಾಯಿಸಿದ್ದು, ಸೂಕ್ತ ಭದ್ರತೆ ಒದಗಿಸಲು ವಿಫಲವಾದ ಹಂಗಾಮಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

2013ರ ಚುನಾವಣೆ ಸಮಯದಲ್ಲೂ ಕೂಡ ನೂರಾರು ಎಎನ್‌ಪಿ ನಾಯಕರು ಮತ್ತು ಕಾರ್ಯಕರ್ತರನ್ನು ಉಗ್ರರು ಹತ್ಯೆ ಮಾಡಿದ್ದರು.

ಈ ತಿಂಗಳ ಆರಂಭದಲ್ಲಿ ಪಾಕ್‌ನ ತಖ್ತಿಕೆಲ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ನಡೆದ ಬಾಂಬ್‌ ದಾಳಿಯಲ್ಲಿ ಮುತಾಹಿದಾ ಮಜ್ಲಿಸ್‌-ಇ-ಅಮಲ್‌ ಪಕ್ಷದ ಅಭ್ಯರ್ಥಿ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ