ಆ್ಯಪ್ನಗರ

ರಾಮಾಯಣದ ಸಂಜೀವಿನಿ ಪರ್ವತ ವೃತ್ತಾಂತ ಉಲ್ಲೇಖಿಸಿ ಭಾರತದಿಂದ ಮಾತ್ರೆ ಬೇಡಿದ ಬ್ರೆಜಿಲ್!

ಅಮೆರಿಕಕ್ಕೆ ರವಾನಿಸಿರುವಂತೆ ತಮಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವಂತೆ ಭಾರತಕ್ಕೆ ಮನವಿ ಮಾಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ, ಇದಕ್ಕಾಗಿ ರಾಮಾಯಣದ ಸಂಜೀವಿನ ಪರ್ವತದ ವೃತ್ತಾಂತದ ಕತೆಯನ್ನು ಉಲ್ಲೇಖಿಸಿರುವುದು ವಿಶೇಷ.

Vijaya Karnataka Web 8 Apr 2020, 4:34 pm
ಬ್ರಾಜಿಲಿಯಾ: ಅಗತ್ಯ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯೂ ಸೇರಿಸಿ ಒಟ್ಟು 254 ಮಾತ್ರೆಗಳನ್ನು ರಫ್ತು ಮಾಡುವುದಾಗಿ ಭಾರತ ಘೋಷಿಸಿದ ಬೆನ್ನಲ್ಲೇ, ಈ ಮಾತ್ರೆಗಳಿಗಾಗಿ ವಿಶಗವದ ವಿವಿಧ ರಾಷ್ಟ್ರಗಳು ಭಾರತದ ದುಂಬಾಲು ಬಿದ್ದಿವೆ.
Vijaya Karnataka Web India Brazil
ಸಂಗ್ರಹ ಚಿತ್ರ


ಅದರಂತೆ ಬ್ರೆಜಿಲ್ ಕೂಡ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವಂತ ಭಾರತಕ್ಕೆ ಮನವಿ ಮಾಡಿದ್ದು, ಇದಕ್ಕಾಗಿ ರಾಮಾಯಣದ ಸಂಜೀವಿನಿ ಪರ್ವತದ ವೃತ್ತಾಂತವನ್ನು ಉಲ್ಲೇಖಿಸಿರುವುದು ವಿಶೇಷವಾಗಿದೆ.

ಹೌದು, ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವಂತೆ ಭಾರತಕ್ಕೆ ಮನವಿ ಮಾಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ, ರಾಮಾಯಣದ ಸಂಜೀವಿನಿ ಪರ್ವತದ ವೃತ್ತಾಂತವನ್ನು ಉಲ್ಲೇಖಿಸಿ ಮನವಿ ಮಾಡಿದ್ದಾರೆ.

ಅಗತ್ಯ ದೇಶಗಳಿಗೆ ಸಹಾಯ: ಮಲೇರಿಯಾ ಮೆಡಿಸಿನ್ ರಫ್ತಿಗೆ ಭಾರತದ ಹಸಿರು ನಿಶಾನೆ!

ರಾಮಾಯಣದಲ್ಲಿ ಹನುಮಂತ ಪ್ರಭು ಶ್ರೀರಾಮನ ಸಹೋದರ ಲಕ್ಷ್ಮಣನಿಗಾಗಿ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತಂದಂತೆ, ಸಂಕಷ್ಟದಲ್ಲಿರುವ ಬ್ರೆಜಿಲ್ ನಾಗರಿಕರಿಗೆ ಭಾರತ ವೈದ್ಯಕೀಯ ನೆರವು ನೀಡಬೇಕು ಎಂದು ಜೈರ್ ಬೋಲ್ಸನಾರೋ ಮನವಿ ಮಾಡಿದ್ದಾರೆ.


ಅಲ್ಲದೇ ಪ್ರಭು ಏಸು ಕ್ರಿಸ್ತ ಬಾರ್ಟಿಮಿಯು ಪ್ರದೇಶದ ಜನರ ಅನಾರೋಗ್ಯವನ್ನು ಹೋಗಲಾಡಿಸಿದಂತೆಯೇ ಬ್ರೆಜಿಲ್ ಹಾಗೂ ಭಾರತ ಜಂಟಿಯಾಗಿ ಈ ಮಹಾಮಾರಿಯನ್ನು ಹೋಗಲಾಡಿಸಲಿದೆ ಎಂದು ಜೈರ್ ಬೋಲ್ಸನಾರೋ ಭರವಸೆ ವ್ಯಕ್ತಪಡಿಸಿದ್ದಾರೆ.

'ಮೋದಿ ಈಸ್ ಗ್ರೇಟ್': ಮಾತ್ರೆ ಬರುತ್ತೆ ಅಂತ ಗೊತ್ತಾದ ಮೇಲೆ ಟ್ರಂಪ್ ಅವರಿಂದ ಹೊಗಳಿಕೆಯ ಮಾತು!

ಒಟ್ಟಿನಲ್ಲಿ ಇಡೀ ವಿಶ್ವ ಸಮುದಾಯ ಭಾರತದ ವೈದ್ಯಕೀಯ ನೆರವು ಬೇಡುತ್ತಿದ್ದು, ಭಾರತ ಸ್ವಂತ ರಕ್ಷಣೆಯ ಜೊತೆಗೆ ವಿಶ್ವದ ರಕ್ಷಣೆಗೂ ಟೊಂಕ ಕಟ್ಟಿ ನಿಂತಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ