ಆ್ಯಪ್ನಗರ

ಬ್ರಿಟನ್‌ನಲ್ಲಿ ಮತ್ತೆ ಬೋರಿಸ್‌ ಸರಕಾರ: ಜ.31ರೊಳಗೆ ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣ

ಸಂಸತ್‌ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡ ಕನ್ಸರ್‌ರ್ವೇಟಿವ್‌ ಪಕ್ಷದ ಪ್ರಧಾನಿ ಬೋರಿಸ್‌ ಜಾನ್ಸನ್‌ ಸರಕಾರಕ್ಕೆ ಬ್ರೆಕ್ಸಿಟ್‌ ನಿರ್ಣಯದ ವಿಚಾರದಲ್ಲಿ ಸಂಸತ್ತಿನಲ್ಲಿ ಭರ್ಜರಿ ಜಯ ಸಿಕ್ಕಿದೆ.

Vijaya Karnataka Web 21 Dec 2019, 8:05 am
ಲಂಡನ್‌: ಸಂಸತ್‌ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡ ಕನ್ಸರ್‌ರ್ವೇಟಿವ್‌ ಪಕ್ಷದ ಪ್ರಧಾನಿ ಬೋರಿಸ್‌ ಜಾನ್ಸನ್‌ ಸರಕಾರಕ್ಕೆ ಬ್ರೆಕ್ಸಿಟ್‌ ನಿರ್ಣಯದ ವಿಚಾರದಲ್ಲಿ ಸಂಸತ್ತಿನಲ್ಲಿ ಭರ್ಜರಿ ಜಯ ಸಿಕ್ಕಿದೆ.
Vijaya Karnataka Web Boris Johnson
ಬೋರಿಸ್‌ ಜಾನ್ಸನ್‌


ಬ್ರೆಕ್ಸಿಟ್‌ ಪರ ಎರಡನೇ ಬಾರಿಯ ನಿರ್ಣಯ ಶುಕ್ರವಾರ ಸಂಸತ್‌ನಲ್ಲಿ ಮಂಡನೆಯಾಗಿದ್ದು, ಅದರ ಪರವಾಗಿ 358 ಮತಗಳು ಹಾಗೂ ವಿರುದ್ಧವಾಗಿ 254 ಮತಗಳು ಬಿದ್ದಿವೆ. ಇದರೊಂದಿಗೆ ಜನವರಿ 31ರೊಳಗೆ ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿಇನ್ನಷ್ಟು ಚುರುಕುಗೊಳ್ಳಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ರೆಕ್ಸಿಟ್‌ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಜನವರಿ 31ರೊಳಗಾಗಿ ಬ್ರಿಟನ್‌ಅನ್ನು ಐರೋಪ್ಯ ಒಕ್ಕೂಟದಿಂದ ಹೊರಕ್ಕೆ ತರುವ ಆಶ್ವಾಸನೆಯನ್ನು ಬೋರಿಸ್‌ ಅವರು ಚುನಾವಣಾ ಪ್ರಚಾರದ ವೇಳೆ ನೀಡಿದ್ದರು. ಈ ಭರವಸೆಯಿಂದಲೇ ಸಂಸತ್ತಿನ 650 ಸ್ಥಾನಗಳಲ್ಲಿಅವರ ಪಕ್ಷ ಭರ್ಜರಿ 364 ಸೀಟುಗಳನ್ನು ಗಳಿಸಿ ಅಧಿಕಾರ ಉಳಿಸಿಕೊಂಡಿತು.

ಈ ಗೆಲುವಿನ ಉತ್ಸಾಹದಲ್ಲಿಬೋರಿಸ್‌ ಅವರು ಮಂಡಿಸಿದ ನಿರ್ಣಯಕ್ಕೆ ಜಯ ಸಿಕ್ಕಿದೆ. ಹೊಸ ನಿರ್ಣಯದಲ್ಲಿಹಿಂದೆ ಜಾನ್ಸನ್‌ ಸರಕಾರ ಬ್ರುಸೆಲ್ಸ್‌ ಜತೆ ಮಾಡಿಕೊಂಡ ಅಂತಾರಾಷ್ಟ್ರೀಯ ಒಪ್ಪಂದ ಸಂಬಂಧ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ