ಆ್ಯಪ್ನಗರ

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದು ಖಚಿತ

ಇದೇ 31ರಂದು ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದು ಖಚಿತ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ನೇತೃತ್ವದ ಸರಕಾರ ಸ್ಪಷ್ಟಪಡಿಸಿದೆ. ರಾಣಿ ಎಲಿಜ­ಬೆತ್‌-2 ಕೂಡ ಐರೋಪ್ಯ ಒಕ್ಕೂಟ­ದಿಂದ ಬೇರ್ಪಡು­ವುದೇ ತಮ್ಮ ಸರಕಾರದ ಆದ್ಯತೆ ಎಂದು ಹೇಳಿದರು.

Vijaya Karnataka Web 15 Oct 2019, 6:57 am
ಲಂಡನ್‌: ಇದೇ 31ರಂದು ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದು ಖಚಿತ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ನೇತೃತ್ವದ ಸರಕಾರ ಸ್ಪಷ್ಟಪಡಿಸಿದೆ.
Vijaya Karnataka Web brexit refers to britains leaving the european union
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದು ಖಚಿತ


ಸೋಮವಾರ ಸಂಸತ್‌ ಅಧಿವೇಶನ ಉದ್ದೇಶಿಸಿ ಮಾತ­ನಾಡಿದ ರಾಣಿ ಎಲಿಜ­ಬೆತ್‌-2 ಅವರು, ಐರೋಪ್ಯ ಒಕ್ಕೂಟ­ದಿಂದ ಬೇರ್ಪಡು­ವುದೇ ತಮ್ಮ ಸರಕಾರದ ಆದ್ಯತೆಯಾಗಿದೆ ಎಂದು ಹೇಳಿದರು.

''ಐರೋಪ್ಯ ಒಕ್ಕೂಟದಿಂದ ಉತ್ತಮ ಡೀಲ್‌ನೊಂದಿಗೆ ಇದೇ ಅ.31ರಂದು ಹೊರಬರುವುದು ಸರಕಾರದ ಆದ್ಯತೆಯಾಗಿದೆ. ಮುಕ್ತ ವ್ಯಾಪಾರ ಮತ್ತು ಸೌಹಾರ್ದ ಸಹಕಾರದ ಆಧಾರದ ಮೇಲೆ ಐರೋಪ್ಯ ಒಕ್ಕೂಟದ ಜತೆಗಿನ ಮುಂದಿನ ಸಂಬಂಧ ಹೇಗಿರಬೇಕು ಎನ್ನುವುದು ನಿರ್ಧಾರ­ವಾಗಲಿದೆ,'' ಎಂದು ರಾಣಿ ತಿಳಿಸಿದರು.

''ಬ್ರೆಕ್ಸಿಟ್‌ಗೆ ಸಂಬಂಧಿಸಿ ಉತ್ತಮ ಒಪ್ಪಂದ ಏರ್ಪಡಲಿದೆ ಮತ್ತು ಅದು ಈ ತಿಂಗಳಲ್ಲಿಯೇ ನಡೆಯಲಿದೆ,'' ಎಂದು ಐರಿಷ್‌ ಉಪ ಪ್ರಧಾನಿ ಸೈಮನ್‌ ಕೊವ್ನಿ ಭಾನುವಾರವಷ್ಟೇ ಹೇಳಿದ್ದರು. ಅದರ ಬೆನ್ನಲ್ಲಿಯೇ ಸರಕಾರದ ನಿಲುವು ಪ್ರಕಟ­ವಾಗಿದೆ. ಬ್ರೆಕ್ಸಿಟ್‌ಗೆ ಸಂಬಂಧಿಸಿದ ಅಂತಿಮ ಮಾತುಕತೆ ಬ್ರುಸೆಲ್ಸ್‌ನಲ್ಲಿಇದೇ ಗುರುವಾರ­ದಿಂದ ಆರಂಭವಾಗಲಿದೆ. ಅಲ್ಲಿ ಬ್ರೆಕ್ಸಿಟ್‌ನ ಷರತ್ತುಗಳು ಹಾಗೂ ಪ್ರಕ್ರಿಯೆ ನಿರ್ಧಾರವಾ­ಗಲಿದೆ.

ಒಂದೊಮ್ಮೆ ಶನಿವಾರದ ಒಳಗಾಗಿ ಬ್ರೆಕ್ಸಿಟ್‌ ಒಪ್ಪಂದ ಕುದುರದೇ ಇದ್ದಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಬ್ರೆಕ್ಸಿಟ್‌ ಪ್ರಕ್ರಿಯೆಯನ್ನು ಮೂರನೇ ಬಾರಿಗೆ ಮುಂದೂಡುವಂತೆ ಐರೋಪ್ಯ ಒಕ್ಕೂಟವನ್ನು ಮನವಿ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ