ಆ್ಯಪ್ನಗರ

FB ವೀರ್ಯ ದಾನಿಯಿಂದ ಗರ್ಭ ಧರಿಸಿದ ಬ್ರಿಟಿಷ್‌ ವ್ಯಕ್ತಿ

ಫೇಸ್‌ಬುಕ್‌ ಮೂಲಕ ಪರಿಚಯವಾದ ವೀರ್ಯ ದಾನಿಯಿಂದ ಗರ್ಭ ಧರಿಸಿರುವ ವ್ಯಕ್ತಿ ಮಗುವಿಗೆ ಜನ್ಮ ನೀಡಲಿರುವ ಮೊದಲ ಬ್ರಿಟಿಷ್‌ ವ್ಯಕ್ತಿಯಾಗಲಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ 9 Jan 2017, 8:20 am
ಲಂಡನ್‌: ಬ್ರಿಟನ್‌ ಮೂಲದ 20ರ ಹರೆಯದ ಯುವಕನೊಬ್ಬ ಫೇಸ್‌ಬುಕ್‌ ನೆರವಿಂದ ವೀರ್ಯದಾನ ಪಡೆಯುವ ಮೂಲಕ ಗರ್ಭಿಣಿಯಾಗಿದ್ದಾನೆ. ಹೀಗೆ ಪುರುಷನೊಬ್ಬ ಮಗುವಿಗೆ ಜನ್ಮ ನೀಡಲಿರುವ ಮೊದಲ ಬ್ರಿಟಿಷ್‌ ಪ್ರಜೆಯಾಗಲಿದ್ದಾನೆ.
Vijaya Karnataka Web british man to give birth to baby
FB ವೀರ್ಯ ದಾನಿಯಿಂದ ಗರ್ಭ ಧರಿಸಿದ ಬ್ರಿಟಿಷ್‌ ವ್ಯಕ್ತಿ


ಹೆಡೆನ್‌ ಕ್ರಾಸ್‌ ಹೆಸರಿನ ಈ ವ್ಯಕ್ತಿ ಪ್ರಸ್ತುತ 4 ತಿಂಗಳ ಗರ್ಭಿಣಿ. ಬಾಲಕಿಯಾಗಿ ಜನ್ಮ ಪಡೆದಿದ್ದ ಹೆಡೆನ್‌ ಕ್ರಾಸ್‌, ಪುರುಷನಾಗಿ ಬದಲಾಗಲು ಹಾರ್ಮೋನ್‌ ಟ್ರೀಟ್‌ಮೆಂಟ್‌ ಪಡೆಯುತ್ತಿದ್ದ.

ಭವಿಷ್ಯದಲ್ಲಿ ಮಗು ಪಡೆಯುವ ಬಯಕೆ ಹೊಂದಿದ್ದ ಕ್ರಾಸ್‌ನ ಅಂಡಾಣುವನ್ನು ಸಂರಕ್ಷಿಸಿಡುವ ಪ್ರಕ್ರಿಯೆಗೆ ಬ್ರಿಟನ್‌ನ ಸರಕಾರಿ ಸ್ವಾಮ್ಯದ ನ್ಯಾಷನಲ್‌ ಹೆಲ್ತ್‌ ಸರ್ವಿಸ್‌ ನಿರಾಕರಿಸಿತ್ತು. ಇದರಿಂದ ಈತನ ಲಿಂಗ ಪರಿವರ್ತನೆ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.

ಈ ಮಧ್ಯೆ, ಫೇಸ್‌ಬುಕ್‌ನಲ್ಲಿ ವೀರ್ಯದಾನಿಗಾಗಿ ಕ್ರಾಸ್‌ ಪ್ರಕಟಣೆ ನೀಡಿದ್ದ. ಅನಾಮಿಕ ವ್ಯಕ್ತಿಯೊಬ್ಬರು ವೀರ್ಯದಾನ ಮಾಡಿದ್ದು, ಅದನ್ನು ಕ್ರಾಸ್‌ ತಾನೇ ದೇಹಕ್ಕೆ ಇಂಜೆಕ್ಟ್ ಮಾಡಿಕೊಳ್ಳುವ ಮೂಲಕ ಗರ್ಭ ಧರಿಸಿದ್ದಾನೆ.

'ಲಿಂಗ ಪರಿವರ್ತನೆ ಮುಗಿಯುವ ಮುನ್ನ ನಾನು ಗರ್ಭಿಣಿಯಾಗಲು ಒತ್ತಡ ಹೆಚ್ಚಿತ್ತು. ಏಕೆಂದರೆ, ಹಾರ್ಮೋನ್‌ ಬದಲಾವಣೆ ನಂತರ ಮುಂದೆ ಇದು ಅಸಾಧ್ಯವಾಗುತ್ತಿತ್ತು,' ಎಂದು ಕ್ರಾಸ್‌ ಪ್ರತಿಕ್ರಿಯಿಸಿದ್ದಾನೆ.

'ಒಂದು ರೀತಿಯ ಮಿಶ್ರ ಅನುಭವವಿದು. ಗರ್ಭ ಧರಿಸುವುದರಿಂದ ಲಿಂಗ ಪರಿವರ್ತನೆ ಪ್ರಕ್ರಿಯೆಗೆ ತೊಡಕಾಗುವುದೆಂದೂ ತಿಳಿದಿದ್ದರೂ, ಈ ಅನುಭವದಿಂದ ಖುಷಿಯಾಗಿದೆ. ನನ್ನ ಮಗು ಚೆನ್ನಾಗಿ ಬೆಳೆಯಬೇಕು. ನಾನು ಒಳ್ಳೆಯ ಅಪ್ಪನಾಗುವೆ,' ಎಂದು ಕ್ರಾಸ್‌ ಹೇಳಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ