ಆ್ಯಪ್ನಗರ

ಜಲಿಯನ್‌ವಾಲಾ ಬಾಗ್ ನರಮೇಧಕ್ಕೆ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ವಿಷಾದ

ಜಲಿಯನ್‌ವಾಲಾ ಭಾಗ್‌ ಹತ್ಯಾಕಾಂಡಕ್ಕೆ ಏಪ್ರಿಲ್‌ 13ಕ್ಕೆ ನೂರು ವರ್ಷ ಆಗಲಿದೆ. ಸಂಸತ್‌ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಥೆರೆಸಾ ಮೇ ಈ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೇ ಘಟನೆ ಕುರಿತಂತೆ ತೀವ್ರ ವಿಷಾದ ವ್ಯಕ್ತಪಡಿಸಿದರು.

Vijaya Karnataka Web 10 Apr 2019, 8:49 pm
ಲಂಡನ್‌: ಜಲಿಯನ್‌ವಾಲಾ ಭಾಗ್‌ ಹತ್ಯಾಕಾಂಡ ವಿಶ್ವದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಘಟನೆ. ಇದಕ್ಕೆ ಕಾರಣವಾಗಿದ್ದು ಬ್ರಿಟಿಷ್‌ ಆಡಳಿತ.
Vijaya Karnataka Web ಥೆರೆಸಾ ಮೇ
ಥೆರೆಸಾ ಮೇ


ಸ್ವಾತಂತ್ರ್ಯ ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡಕ್ಕೆ ಇಂದಿಗೂ ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ.

ಈಗ ಬ್ರಿಟಿಷ್‌ ಆಡಳಿತ ಕ್ಷಮಾಪಣೆ ಯಾಚಿಸಿದೆ, ಅಲ್ಲದೇ ವಿಷಾದ ವ್ಯಕ್ತಪಡಿಸಿದಿದೆ.

1919ರಲ್ಲಿ ನಡೆದ ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಬ್ರಿಟನ್‌ ಸಂಸತ್ತಿನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಜಲಿಯನ್‌ವಾಲಾ ಭಾಗ್‌ ಹತ್ಯಾಕಾಂಡಕ್ಕೆ ಏಪ್ರಿಲ್‌ 13ಕ್ಕೆ ನೂರು ವರ್ಷ ಆಗಲಿದೆ. ಸಂಸತ್‌ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಥೆರೆಸಾ ಮೇ ಈ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೇ ಘಟನೆ ಕುರಿತಂತೆ ತೀವ್ರ ವಿಷಾದ ವ್ಯಕ್ತಪಡಿಸಿದರು.

ಈ ಭೀಕರ ಹತ್ಯಾಕಾಂಡಕ್ಕೆ ಥೆರೆಸಾ ಮೇ ಕ್ಷಮೆ ಕೋರಲಿಲ್ಲ. ಈ ಕುರಿತು ಕ್ಷಮೆ ಕೋರಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದರು ಪ್ರಧಾನಿ ಸುತರಾಂ ಒಪ್ಪಲಿಲ್ಲ.

ಈ ಹಿಂದಿನ ಘಟನೆ ಏನು ನಡೆಯಿತು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದಷ್ಟೇ ಹೇಳಿದರು.

ಅಮೃತಸರ ಸಮೀಪದ ಜಲಿಯನ್‌ವಾಲಾ ಭಾಗ್‌ಲಲಿ ಏಪ್ರಿಲ್‌ 13, 1919ರಂದು ಸ್ವಾತಂತ್ರ್ಯ ಹೋರಾಟಗಾರರು ಸೇರಿದ್ದ ಸಂದರ್ಭ ಬ್ರಿಟಿಷ್‌ ಯೋಧರು ಗುಂಡು ಹಾರಿಸಿ ಹಲವಾರು ಮಂದಿಯನ್ನು ಬಲಿ ತೆಗೆದುಕೊಂಡು. ಕೆಲವರು ಇಂಗ್ಲಿಷರ ಗುಂಡಿಗೆ ಬಲಿಯಾಗಲು ಇಷ್ಟವಿಲ್ಲದೇ ಅಲ್ಲೇ ಇದ್ದ ದೊಡ್ಡ ಬಾವಿಯೊಳಗೆ ಬಿದ್ದು ಪ್ರಾಣಾರ್ಪಣೆ ಮಾಡಿದ್ದರು.

ಇಡೀ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಘಟನೆಯಾಗಿ ದಾಖಲಾಗಿದೆ.

ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡೇವಿಡ್‌ ಕೆಮರಾನ್ ಕೂಡ ಘಟನೆ ಪ್ರಸ್ತಾಪಿಸಿದ್ದರು. ಇದೊಂದು ಅವಮಾನಕರ ಘಟನೆ ಎಂದಿದ್ದರೇ ಹೊರತು ಕ್ಷಮೆ ಯಾಚಿಸಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ