ಆ್ಯಪ್ನಗರ

‘ಹಲ್‌್ಕ’ ಜತೆ ಬ್ರೆಕ್ಸಿಟ್‌ ಹೋರಾಟ ಹೋಲಿಸಿದ ಬ್ರಿಟನ್‌ ಪ್ರಧಾನಿ

ಎಷ್ಟೇ ಗಟ್ಟಿಯಾಗಿ ಬಂಧಿಸಿದರೂ ಮುಂದೊಂದು ದಿನ ಬ್ರಿಟನ್‌ ಐರೊಪ್ಯ ಒಕ್ಕೂಟದಿಂದ ಬಿಡಿಸಿಕೊಂಡು ಹೊರಬರಲಿದೆ ಎಂದು ಅವರು ಹೇಳಿದ್ದಾರೆ. ಬ್ರಿಟನ್‌ನ ಬ್ರೆಕ್ಸಿಟ್‌ ಹೋರಾಟದ ಗೆಲುವನ್ನು ಕಾಮಿಕ್‌ಬುಕ್‌ನ ಹೀರೊ 'ಹಲ್‌್ಕ'ಗೆ ಬೋರಿಸ್‌ ಹೋಲಿಸಿದ್ದಾರೆ.

PTI 16 Sep 2019, 5:00 am
Vijaya Karnataka Web boris
ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ನಿರ್ಗಮನ ಉದ್ದೇಶದ 'ಬ್ರೆಕ್ಸಿಟ್‌' ಪ್ರಕ್ರಿಯೆಯಲ್ಲಿಭಾರಿ ಪ್ರಗತಿಯಾಗಿದೆ ಎಂದಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಈ ವಿಚಾರದಲ್ಲಿಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಷ್ಟೇ ಗಟ್ಟಿಯಾಗಿ ಬಂಧಿಸಿದರೂ ಮುಂದೊಂದು ದಿನ ಬ್ರಿಟನ್‌ ಐರೊಪ್ಯ ಒಕ್ಕೂಟದಿಂದ ಬಿಡಿಸಿಕೊಂಡು ಹೊರಬರಲಿದೆ ಎಂದು ಅವರು ಹೇಳಿದ್ದಾರೆ. ಬ್ರಿಟನ್‌ನ ಬ್ರೆಕ್ಸಿಟ್‌ ಹೋರಾಟದ ಗೆಲುವನ್ನು ಕಾಮಿಕ್‌ಬುಕ್‌ನ ಹೀರೊ 'ಹಲ್‌್ಕ'ಗೆ ಬೋರಿಸ್‌ ಹೋಲಿಸಿದ್ದಾರೆ. ''ಹಲ್‌್ಕಗೆ ತಲೆ ಕೆಡಿಸಿದಷ್ಟೂ ಅವನು ಬಲಿಷ್ಠನಾಗುತ್ತಾನೆ, ಎಷ್ಟೇ ಗಟ್ಟಿಯಾಗಿ ಕಟ್ಟಿಹಾಕಿದರೂ ಅವನು ಸದಾ ಪಾರಾಗುವಲ್ಲಿಯಶಸ್ವಿಯಾಗುತ್ತಾನೆ. ಐರೋಪ್ಯ ಒಕ್ಕೂಟದಿಂದ ಬಿಡಿಸಿಕೊಳ್ಳುವ ವಿಚಾರದಲ್ಲಿಬ್ರಿಟನ್‌ ಕೂಡಾ ಅಷ್ಟೇ,'' ಎಂದು ಜಾನ್ಸನ್‌ ಬಣ್ಣಿಸಿದ್ದಾರೆ.

ಲಂಡನ್‌ನ ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿಅವರು, ''ಅಕ್ಟೋಬರ್‌ 31ರಂದು ಬ್ರೆಕ್ಸಿಟ್‌ಗಾಗಿ ಅ.17ರಂದು ನಡೆಯಲಿರುವ ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲಿ'ವಿಚ್ಛೇದನ' ಪಡೆಯುವಲ್ಲಿಬ್ರಿಟನ್‌ ಯಶಸ್ವಿಯಾಗಲಿದೆ,''ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಂಧಾನ ವಿಫಲವಾದರೆ, ಯಾವುದೇ ಒಪ್ಪಂದವಿಲ್ಲದೆಯೇ ಐರೋಪ್ಯ ಒಕ್ಕೂಟ ತೊರೆಯುವುದಾಗಿ ಜಾನ್ಸನ್‌ ಘೋಷಿಸಿದ್ದು, ಈ ಪ್ರಸ್ತಾಪದ ಬಗ್ಗೆ ಅವರಿಗೆ ಸಂಸತ್ತಿನಲ್ಲಿವಿರೋಧ ವ್ಯಕ್ತವಾಗಿದೆ. ಬ್ರೆಕ್ಸಿಟ್‌ ವೈಫಲ್ಯದ ಹೊಣೆ ಹೊತ್ತು ಥೆರೇಸಾ ಮೇ ರಾಜೀನಾಮೆ ಬಳಿಕ ಕಳೆದ ಜುಲೈನಲ್ಲಿಬೋರಿಸ್‌ ಜಾನ್ಸನ್‌ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಥೆರೇಸಾ ಮೇ ಅವರು ರೂಪಿಸಿದ್ದ ಬ್ರೆಕ್ಸಿಟ್‌ ನಿಯಮಗಳ ವಿಚಾರವಾಗಿ ಐರೋಪ್ಯ ಒಕ್ಕೂಟಗಳ ಜತೆ ಮರು ಸಂಧಾನಕ್ಕೆ ಜಾನ್ಸನ್‌ ಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಐರೋಪ್ಯ ಒಕ್ಕೂಟ ಒಪ್ಪುತ್ತಿಲ್ಲ. 2016ರಲ್ಲಿನಡೆಸಿದಂತೆ ಬ್ರೆಕ್ಸಿಟ್‌ ಪರ-ವಿರೋಧವಾಗಿ ಮತ್ತೊಮ್ಮೆ ಜನಮತ ಸಂಗ್ರಹ ಮಾಡುವಂತೆ ಪ್ರತಿಪಕ್ಷ ಡೆಮಾಕ್ರಾಟರು ಆಗ್ರಹಿಸುತ್ತಿದ್ದಾರೆ.

ಬ್ರಿಟನ್‌ ಐರೋಪ್ಯ ಒಕ್ಕೂಟದಲ್ಲೇ ಉಳಿಯಬೇಕೆಂದು ಆಂದೋಲನ ನಡೆಸುತ್ತಿರುವ ಪ್ರಧಾನಿ ಡೇವಿಡ್‌ ಕೆಮರಾನ್‌ ಅವರು, ಬ್ರೆಕ್ಸಿಟ್‌ ಕುರಿತಾಗಿ ಹಾಲಿ ಪ್ರಧಾನಿ ಜಾನ್ಸನ್‌ ಮಾಡುತ್ತಿರುವ ಪ್ರಯತ್ನಗಳ ಹಿಂದೆ ರಾಜಕೀಯ ಸ್ವಾರ್ಥದ ಉದ್ದೇಶವಿದೆ ಎಂದು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ