ಆ್ಯಪ್ನಗರ

2020 ಮೇ ತಿಂಗಳಲ್ಲಿ ಭಾರತಕ್ಕೆ ನೀರವ್‌ ಮೋದಿ? : ಲಂಡನ್‌ನಿಂದ ಗಡಿಪಾರು ಸಾಧ್ಯತೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 14 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಬ್ರಿಟನ್‌ಗೆ ಪರಾರಿಯಾಗಿ ಸದ್ಯ ಅಲ್ಲಿಯೇ ನ್ಯಾಯಾಂಗ ಬಂಧನದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ, ಮುಂದಿನ ವರ್ಷ ಭಾರತಕ್ಕೆ ಗಡಿಪಾರು ಆಗುವ ಸಾಧ್ಯತೆ ಇದೆ.

Vijaya Karnataka 19 Sep 2019, 8:35 pm
ಲಂಡನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ(ಪಿಎನ್‌ಬಿ) 14 ಸಾವಿರ ಕೋಟಿ ರೂಪಾಯಿ ಸಾಲ ಮರು ಪಾವತಿಸದೆ ಬ್ರಿಟನ್‌ಗೆ ಪರಾರಿಯಾಗಿ ಸದ್ಯ ಅಲ್ಲಿಯೇ ನ್ಯಾಯಾಂಗ ಬಂಧನದಲ್ಲಿರುವ ವಜ್ರೋದ್ಯಮಿ ನೀರವ್‌ ಮೋದಿ ನ್ಯಾಯಾಂಗ ಬಂಧನ ಅವಧಿಯನ್ನು ಅ.17ರವರೆಗೆ ಸ್ಥಳೀಯ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಪ್ರೇಟ್ಸ್‌ ಕೋರ್ಟ್‌ ವಿಸ್ತರಿಸಿದೆ.
Vijaya Karnataka Web nirav modi


ಭಾರತ ಸಲ್ಲಿಸಿರುವ ಗಡಿಪಾರು ಅರ್ಜಿ ಕುರಿತು ಕೂಡ ವಿಚಾರಣೆ ನಡೆಸಲಾಗುತ್ತಿದ್ದು, 2020ರ ಮೇನಲ್ಲಿಆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಕೋರ್ಟ್‌ ಹೇಳಿದೆ. 48 ವರ್ಷದ ಆರೋಪಿ ನೀರವ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ವಿಚಾರಣೆ ಎದುರಿಸಿದರು.

ಗಡಿಪಾರು ವಿರೋಧಿಸಿ ನೀರವ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶ ಡೇವಿಡ್‌ ರಾಬಿನ್‌ಸನ್‌, 'ಸದ್ಯಕ್ಕೆ ಗಡಿಪಾರು ಕುರಿತು ಆದೇಶಕ್ಕೆ ಸಾಕಷ್ಟು ಪುರಾವೆಗಳು ಸಲ್ಲಿಕೆಯಾಗಿಲ್ಲ. ಹಾಗಾಗಿ ಮುಂದಿನ ವರ್ಷ ಮೇ 11 ರಿಂದ 15ರವರೆಗೆ ನಿತ್ಯ ವಿಚಾರಣೆ ನಡೆಸಿ ಗಡಿಪಾರು ಕುರಿತು ತೀರ್ಪು ಪ್ರಕಟಿಸಲಾಗುವುದು' ಎಂದಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಅಧಿಕಾರಿಗಳಿಗೆ ಬೇಕಾಗಿರುವ ನೀರವ್‌, ಸದ್ಯ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ಥ್‌ ಕಾರಾಗೃಹದಲ್ಲಿದ್ದಾರೆ. ಬ್ರಿಟನ್‌ನಲ್ಲಿಅತ್ಯಂತ ಹೆಚ್ಚು ಕೈದಿಗಳಿರುವ ಜೈಲ್‌ ಇದಾಗಿದೆ. ಕಳೆದ ಮಾರ್ಚ್‌ನಲ್ಲಿ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ನೀರವ್‌ರನ್ನು ಬಂಧಿಸಿದ್ದರು.

ನೀರವ್‌ ಮೋದಿ ಸ್ವಿಸ್‌ ಬ್ಯಾಂಕ್ ಖಾತೆ ಮುಟ್ಟು ಗೋಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ