ಆ್ಯಪ್ನಗರ

ಸತತ ಎರಡನೇ ದಿನ ಕಾಬೂಲ್‌ನಲ್ಲಿ ಸಿಖ್ಖರ ಮೇಲೆ ದಾಳಿ, ಅಂತ್ಯಕ್ರಿಯೆ ವೇಳೆ ಬಾಂಬ್‌ ಸ್ಫೋಟ

ಅಫ್ಘಾನಿಸ್ತಾನದಲ್ಲಿ ಸಿಖ್ಖ್‌ ಸಮುದಾಯದ ಮೇಲೆ ಸತತ ಎರಡನೇ ದಿನವೂ ದಾಳಿ ನಡೆದಿದ್ದು, ಅಲ್ಲಿನ ಸಿಖ್ಖರು ಆತಂಕಗೊಂಡಿದ್ದಾರೆ. ಐಸಿಸ್‌ ಉಗ್ರನ ಆತ್ಮಾಹುತಿ ದಾಳಿಗೆ ಬುಧವಾರ ಬಲಿಯಾದ ಸಿಖ್ಖರ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದ ಬಳಿ ಗುರುವಾರ ಬಾಂಬ್‌ ಸ್ಫೋಟಿಸಿ ಬಾಲಕನೊಬ್ಬ ಗಾಯ­ಗೊಂಡಿದ್ದಾನೆ.

Agencies 27 Mar 2020, 12:02 am
ಕಾಬೂಲ್‌: ಐಸಿಸ್‌ ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಸಿಖ್ಖರ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದ ಬಳಿ ಗುರುವಾರ ಬಾಂಬ್‌ ಸ್ಫೋಟಿಸಿ ಬಾಲಕನೊಬ್ಬ ಗಾಯ­ಗೊಂಡಿದ್ದಾನೆ. ತಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡು ಸತತ ಎರಡನೇ ದಿನವೂ ನಡೆದ ದಾಳಿಯಿಂದ ಅಫ್ಘಾನಿ­ಸ್ತಾನದಲ್ಲಿರುವ ಸಿಖ್ಖರು ಆತಂಕಕ್ಕೆ ಸಿಲುಕಿದ್ದಾರೆ.
Vijaya Karnataka Web Afghanistan Sikhs Mourn


ಆತ್ಮಾಹುತಿ ದಾಳಿಕೋರ ಬುಧವಾರ ರಾತ್ರಿ ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರದಲ್ಲಿ ಗುಂಡಿನ ದಾಳಿ ನಡೆಸಿ 25 ಜನರನ್ನು ಹತ್ಯೆಗೈದಿದ್ದಾನೆ. ತಾಲಿಬಾನ್‌ ಉಗ್ರರ ಹಿಂಸೆಯಿಂದ ತತ್ತರಿಸಿರುವ ಆಫ್ಘನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ತಾಲಿ­ಬಾನ್‌-ಅಮೆರಿಕ ನಡುವೆ ಮಹತ್ವದ ಶಾಂತಿ ಮಾತುಕತೆ ನಡೆದ ಮರುದಿನವೇ ಈ ಘಟನೆ ಸಂಭವಿಸಿದೆ.

ಆತ್ಮಾಹುತಿ ದಾಳಿಕೋರನಿಗೆ ಬಲಿಯಾದವರ ಸಾಮೂ­ಹಿಕ ಅಂತ್ಯಕ್ರಿಯೆಯನ್ನು ಸಮುದಾಯದ ಚಿತಾಗಾರದಲ್ಲಿಗುರುವಾರ ನಡೆಸಲಾ­ಯಿತು. ನೂರಾರು ಜನ ಸೇರಿದ್ದ ಸಂದರ್ಭ­ದಲ್ಲಿ ದುಷ್ಕರ್ಮಿಗಳು ಜನರತ್ತ ಬಾಂಬ್‌ ಎಸೆದಿದ್ದಾರೆ. ಅದು ಜನರ ಗುಂಪಿನಿಂದ ತುಸು ದೂರದಲ್ಲಿ ಸ್ಫೋಟಗೊಂಡಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ.

ಕಾಬೂಲ್‌ನಲ್ಲಿ 27 ಸಿಖ್ಖರ ಹತ್ಯೆ: ಘನಿ ಅಫ್ಘನ್ ಅಧ್ಯಕ್ಷರಾಗಿದ್ದಕ್ಕೆ ಐಎಸ್‌ಐ ಪ್ರತೀಕಾರ..!

ಐಸಿಸ್‌ ಕೃತ್ಯ
ಬುಧವಾರದ ದಾಳಿ ಹೊಣೆಯನ್ನು ಉಗ್ರ ಸಂಘಟನೆಯಾದ ಐಸಿಸ್‌ ಹೊತ್ತುಕೊಂಡಿದೆ. ಘಟನೆ ನಡೆದ ವೇಳೆ ಗುರುದ್ವಾರದಲ್ಲಿ ಸುಮಾರು 150 ಜನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿಖ್‌ ಸಮುದಾಯದ ಮೇಲೆ ನಡೆದ ಘೋರ ದಾಳಿ ಇದಾಗಿದೆ. ದಾಳಿ ಕೋರ ಗುಂಡು ಹಾರಿಸುತ್ತಿದ್ದಂತೆಯೇ ಧರ್ಮಗುರು ಸಿಖ್‌ ಸಂಸದ ನರೇಂದ್ರ ಸಿಂಗ್‌ ಖಾಲ್ಸಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ 25 ಜನರ ಹತ್ಯೆ ನಡೆದುಹೋಗಿತ್ತು. ಬಳಿಕ ದಾಳಿಕೋರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾಬುಲ್‌ನ ಗುರುದ್ವಾರ ಸಾಹಿಬ್‌ನಲ್ಲಿ ಉಗ್ರರ ದಾಳಿ: 11 ಜನ ಸಾವು!

ಇದೇ ಮೊದಲಲ್ಲ
ಆಫ್ಘನ್‌ನಲ್ಲಿ ಸಿಖ್ಖರನ್ನು ಗುರಿಯಾಗಿಸಿ­ಕೊಂಡು ಜನಾಂಗೀಯ ದಾಳಿ ನಡೆಸುವುದು ಇದೇ ಮೊದಲಲ್ಲ. ಎರಡು ವರ್ಷದ ಹಿಂದೆ, 2018ರ ಜುಲೈನಲ್ಲಿಯೂ ಜಲಾಲಾಬಾದ್‌ನಲ್ಲಿ ಹಿಂದೂಗಳು ಮತ್ತು ಸಿಖ್ಖರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬಾಂಬ್‌ ದಾಳಿ ನಡೆಸಲಾಗಿತ್ತು. ಸಿಖ್‌ ರಾಜಕಾರಣಿ ಅವತಾರ್‌ ಸಿಂಗ್‌ ಖಾಲ್ಸಾ ಸೇರಿದಂತೆ 19 ಜನ ಮೃತಪಟ್ಟಿದ್ದರೆ, 20 ಮಂದಿ ಗಂಭೀರ­ವಾಗಿ ಗಾಯಗೊಂಡಿದ್ದರು.

ಶಾಂತಿ ಒಪ್ಪಂದವಾಗಿ ನಾಲ್ಕೇ ದಿನದಲ್ಲಿ ತಾಲಿಬಾನ್‌ ಮೇಲೆ ಅಮೆರಿಕ ಸೇನೆ ಏರ್‌ಸ್ಟ್ರೈಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ