ಆ್ಯಪ್ನಗರ

ಮತ್ತೆ ಪಾಕ್‌ ಪರ ಚೀನಾ ವಕಾಲತ್ತು

ಇದೇ 13-14ರಂದು ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಯಾವುದೇ ರಾಷ್ಟ್ರಗಳ ನಾಯಕರು ಯಾವ ದೇಶವನ್ನೂ ಗುರಿಯಾಗಿಸಿಕೊಂಡು ಮಾತನಾಡುವಂತಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಭಾರತವನ್ನು ಗುರಿಯಾಗಿಸಿಕೊಂಡು ಹೇಳಿದೆ.

PTI 11 Jun 2019, 5:00 am
ಬೀಜಿಂಗ್‌/ಹೊಸದಿಲ್ಲಿ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉಗ್ರ ಪೋಷಕ ಪಾಕಿಸ್ತಾನವನ್ನು ಟಾರ್ಗೆಟ್‌ ಮಾಡಿ, ಅದನ್ನು ಪ್ರಾದೇಶಿಕ ವಲಯದಲ್ಲಿ ಏಕಾಂಗಿಯಾಗಿಸಲು ಪ್ರಯತ್ನಿಸುತ್ತಿರುವ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ.
Vijaya Karnataka Web jinping

ಇದೇ 13-14ರಂದು ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಯಾವುದೇ ರಾಷ್ಟ್ರಗಳ ನಾಯಕರು ಯಾವ ದೇಶವನ್ನೂ ಗುರಿಯಾಗಿಸಿಕೊಂಡು ಮಾತನಾಡುವಂತಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಭಾರತವನ್ನು ಗುರಿಯಾಗಿಸಿಕೊಂಡು ಹೇಳಿದೆ. ಈ ಮೂಲಕ ಉಗ್ರರ ದಮನ ಕಾರ್ಯಾಚರಣೆಯಲ್ಲಿ ನಾಟಕವಾಡುತ್ತಿರುವ ಪಾಕಿಸ್ತಾನದ ಪರ ರಕ್ಷಣಾತ್ಮಕ ಬ್ಯಾಟಿಂಗ್‌ ಮಾಡಿ ತನ್ನ ಚೇಷ್ಟೆ ಮುಂದುವರಿಸಿದೆ.
ಮಾಲ್ಡೀವ್ಸ್‌ ಹಾಗೂ ಶ್ರೀಲಂಕಾ ಭೇಟಿ ವೇಳೆ ಮೋದಿ ಅವರು ಪಾಕಿಸ್ತಾನದಲ್ಲಿ ಉಗ್ರವಾದ ಬೆಳೆಯಲು ಅಲ್ಲಿನ ಕೆಟ್ಟ ಆಡಳಿತ ವ್ಯವಸ್ಥೆಯೇ ಕಾರಣ ಎಂದು ಹರಿಹಾಯ್ದಿದ್ದರು. ಎಸ್‌ಸಿಒ ಶೃಂಗಸಭೆಯಲ್ಲೂ ಮೋದಿ ಇದೇ ವಿಚಾರ ಪ್ರಸ್ತಾಪಿಸುವ ಸಾಧ್ಯತೆಗಳನ್ನು ಅರಿತು ಚೀನಾ, ''ಶೃಂಗಸಭೆಯು ಜಾಗತಿಕ ಭದ್ರತೆ ಹಾಗೂ ವಾಣಿಜ್ಯ ವಹಿವಾಟು ವಿಸ್ತರಣೆ ವಿಷಯಗಳ ಚರ್ಚೆಯ ಮೇಲೆ ಕೇಂದ್ರೀಕೃತವಾಗಲಿದೆಯೇ ಹೊರತು ಈ ವೇದಿಕೆಯು ನಿರ್ದಿಷ್ಟ ದೇಶದ ವಿರುದ್ಧ ಬೊಟ್ಟು ಮಾಡುವುದಕ್ಕೆ ಇರುವುದಲ್ಲ,'' ಎಂದು ಹೇಳಿದೆ. ಈ ಮೂಲಕ ಪರೋಕ್ಷವಾಗಿ ಅದು ಪಾಕಿಸ್ತಾನವನ್ನು ಬೆಂಬಲಿಸಿದೆ.
ಮೋದಿ-ಇಮ್ರಾನ್‌ ಭೇಟಿಯಿಲ್ಲ
ಎಸ್‌ಸಿಒ ಶೃಂಗಸಭೆ ನೇಪಥ್ಯದಲ್ಲಿ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಭೇಟಿಯಾಗುವುದಿಲ್ಲಭಾರತ ಈಗಾಗಲೇ ಸ್ಪಷ್ಟನೆ ನೀಡಿಯಾಗಿದೆ. ಇತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಇಮ್ರಾನ್‌ ಜತೆ ಮಾತುಕತೆ ನಡೆಸಲಿದ್ದು, ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌ ಯೋಜನೆ ಪ್ರಗತಿ ಕುರಿತು ಚರ್ಚಿಸಲಿದ್ದಾರೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಖಾತೆಯ ಉಪ ಸಚಿವ ಝಾಂಗ್‌ ಹನಹುಯಿ ಹೇಳಿದ್ದಾರೆ.

........

ಅಮೆರಿಕ ವ್ಯವಹಾರ ನೀತಿ ಕುರಿತು

ಮೋದಿ-ಕ್ಸಿ ಜಿನ್‌ಪಿಂಗ್‌ ಮಾತುಕತೆ

ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ವಿಜಯದ ಬಳಿಕ ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ ಮೋದಿ ಅವರು ಇದೇ ಮೊದಲ ಬಾರಿಗೆ ಎಸ್‌ಸಿಒ ಶೃಂಗಸಭೆ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಲಿದ್ದಾರೆ. ಭದ್ರತೆ, ವಾಣಿಜ್ಯ ಚಟುವಟಿಕೆ, ಪ್ರಾದೇಶಿಕ ವಲಯದಲ್ಲಿ ಶಾಂತಿ ಸ್ಥಾಪನೆ ಹಾಗೂ ಸುಸ್ಥಿರ ಅಭಿವೃದ್ಧಿ ವಿಚಾರ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಅದೆಲ್ಲಕ್ಕೂ ಮಿಗಿಲಾಗಿ ಕೆಲ ರಾಷ್ಟ್ರಗಳ ಮೇಲೆ ವಿವಿಧ ನಿರ್ಬಂಧಗಳನ್ನು ಹೇರುವ ಮೂಲಕ ಜಗತ್ತಿನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆಯಲು ಹೊರಟಿರುವ ಅಮೆರಿಕದ ವ್ಯವಹಾರ ನೀತಿಯ ಕುರಿತೂ ಮೋದಿ-ಕ್ಸಿಜಿಂಗ್‌ಪಿಂಗ್‌ ಪ್ರಮುಖವಾಗಿ ಚರ್ಚಿಸಲಿದ್ದಾರೆಂದು ಮೂಲಗಳು ಹೇಳಿವೆ. ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಹ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ