ಆ್ಯಪ್ನಗರ

ಮಸೀದಿ ಜಾಗದಲ್ಲಿ ಶೌಚಾಲಯ ನಿರ್ಮಿಸಿದ ಚೀನಾ..! ಮುಸ್ಲಿಂರ ಮೇಲಿನ ದೌರ್ಜನ್ಯಕ್ಕೆ ತುಟಿ ಬಿಚ್ಚದ ಪಾಕ್‌

ಮುಸ್ಲಿಂ ರಾಷ್ಟ್ರ ಪಾಕಿಸ್ತಾನಕ್ಕೆ ಆಪ್ತವಾದ ಚೀನಾ, ಮುಸ್ಲಿಂ ಸಮುದಾಯಕ್ಕೆ ಶತ್ರು ಆದಂತೆ ಕಾಣುತ್ತಿದೆ. ಹೌದು, ಚೀನಾದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಪಾಕಿಸ್ತಾನ ಮಾತ್ರ ಬಾಲ ಸುಟ್ಟ ಬೆಕ್ಕಿನಂತೆ ಪ್ರತಿರೋಧ ತೋರದೆ ಸುಮ್ಮನೆ ಕುಳಿತಿದೆ.

Agencies 19 Aug 2020, 12:15 pm
ಬೀಜಿಂಗ್‌: ಚೀನಾದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಮೂಲಕ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಚೀನಾದ ಕಮ್ಯುನಿಸ್ಟ್‌ ಸರಕಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಾಕಿಸ್ತಾನ ಮಾತ್ರ ತನಗೇನೂ ಗೊತ್ತಿಲ್ಲ ಎಂಬಂತೆ ನಟಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web china builds public toilet at demolished mosque site in xinjiang
ಮಸೀದಿ ಜಾಗದಲ್ಲಿ ಶೌಚಾಲಯ ನಿರ್ಮಿಸಿದ ಚೀನಾ..! ಮುಸ್ಲಿಂರ ಮೇಲಿನ ದೌರ್ಜನ್ಯಕ್ಕೆ ತುಟಿ ಬಿಚ್ಚದ ಪಾಕ್‌


ಹೌದು, ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಪ್ರಾಂತ್ಯದ ಅತುಶ್ ಎಂಬ ನಗರದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಚೀನಾದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಪಾಕಿಸ್ತಾನ ಕಣ್ಮುಚ್ಚಿ ಕುಳಿತಿರುವುದು ಪಾಕ್‌ನ ಅಸಹಾಯಕತೆಯನ್ನು ತೋರಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಮೌನವನ್ನು ಖಂಡಿಸಿರುವ ಅಧಿಕಾರಿಯೊಬ್ಬರು, ಪಾಕಿಸ್ತಾನ ತನ್ನ ವಿದೇಶಾಂಗ ನೀತಿಯಲ್ಲಿ ವಿರೋಧಾಭಾಸವನ್ನು ಹೊಂದಿದೆ. ತನ್ನನ್ನು ಜಾಗತಿಕ ಇಸ್ಲಾಂ ಧರ್ಮದ ರಕ್ಷಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಚೀನಾದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಕುರಿತು ತುಟಿಕ್‌-ಪಿಟಿಕ್‌ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯವಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಏಕೆಂದರೆ ಅಲ್ಲಿನ ಹೆಚ್ಚಿನ ಜನ ತಮ್ಮ ಮನೆಗಳಲ್ಲಿಯೇ ಶೌಚಾಲಯಗಳನ್ನು ಹೊಂದಿದ್ದಾರೆ. ಇನ್ನು ಪ್ರವಾಸಿಗರು ಕೂಡ ಈ ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ನೆಲಸಮವಾದ ಮಸೀದಿಯ ಅವಶೇಷಗಳನ್ನು ಮುಚ್ಚಿಡಲು ಶೌಚಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ಪಾಪಿ ಪಾಕಿಸ್ತಾನಕ್ಕೆ ನಾಲ್ಕು ಘಾತಕ ಡ್ರೋನ್‌ ನೀಡಲಿದೆ ಕಪಟಿ ಚೀನಾ: ಎಲ್ಲಿ ನಿಯೋಜನೆ?

ಇನ್ನು, ಮಸೀದಿಯ ಸ್ಥಳದಲ್ಲಿ ಮನರಂಜನಾ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಶೌಚಾಲಯದ ಕಾಮಗಾರಿ ಪೂರ್ಣಗೊಂಡಿದ್ದರು, ಸಾರ್ವಜನಿಕರ ಬಳಕೆಗೆ ಮಾತ್ರ ಅವಕಾಶ ನೀಡಿಲ್ಲದಿರುವುದು ಮುಸ್ಲಿಂರ ಭಾವನೆಗೆ ಧಕ್ಕೆ ತರುವ ಪ್ರಯತ್ನದ ಭಾಗವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪಾಕಿಸ್ತಾನ, ಚೀನಾ ವಿರುದ್ಧ ಸಿಡಿದೆದ್ದ ಪಾಕ್‌ ಆಕ್ರಮಿತ ಕಾಶ್ಮೀರದ ಜನರು, ಪ್ರತಿಭಟನೆ!

ಚೀನಾದಲ್ಲಿ ಸುಮಾರು 11 ಮಿಲಿಯನ್ ಉಯಿಘರ್‌ಗಳು ಸೇರಿ 22 ದಶಲಕ್ಷಕ್ಕೂ ಹೆಚ್ಚು ಮುಸ್ಲಿಮರು ನೆಲೆಸಿದ್ದಾರೆ. ಚೀನಾದ 1966-76ರ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿನ ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳು ಹಾನಿಗೊಳಗಾಗಿದ್ದವು. ಇನ್ನು, 2016ರಲ್ಲಿ ಆರಂಭವಾದ ಮಸೀದಿ ತಿದ್ದುಪಡಿ ಅಭಿಯಾನದ ಭಾಗವಾಗಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳನ್ನು ಸಾಮೂಹಿಕವಾಗಿ ನಾಶಮಾಡುವ ನಿರ್ದೇಶನ ಹೊರಡಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಸಿಪಿಇಸಿ ಕಾರ್ಮಿಕರಿಗೆ ಭದ್ರತೆ ಕೊರತೆ: ಪಾಕ್ ಮೇಲೆ ಸಿಟ್ಟಾದ ಚೀನಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ