Please enable javascript.China Olympics,ಒಲಿಂಪಿಕ್ಸ್‌ ಮುಗಿವ ತನಕ ಉಕ್ರೇನ್‌ ಮೇಲಿನ ಆಕ್ರಮಣ ನಿಲ್ಲಸಲು ಕೋರಿಲ್ಲವೆಂದ ಚೀನಾ - china denies asking russia to delay invasion until after olympics - Vijay Karnataka

ಒಲಿಂಪಿಕ್ಸ್‌ ಮುಗಿವ ತನಕ ಉಕ್ರೇನ್‌ ಮೇಲಿನ ಆಕ್ರಮಣ ನಿಲ್ಲಸಲು ಕೋರಿಲ್ಲವೆಂದ ಚೀನಾ

Vijaya Karnataka Web 3 Mar 2022, 10:26 pm
Subscribe

ಚಳಿಗಾಲದ ಒಲಿಂಪಿಕ್ಸ್‌ ಮುಗಿಯುವ ತನಕ ಉಕ್ರೇನ್‌ ಮೇಲಿನ ಆಕ್ರಮಣವನ್ನು ಸ್ಥಗಿತಗೊಳಿಸುವಂತೆ ರಷ್ಯಾ ಎದುರು ಯಾವುದೇ ಮನವಿ ಅಥವಾ ಆಗ್ರಹವನ್ನು ಇರಿಸಲಾಗಿಲ್ಲ. ಇದೊಂದು ವದಂತಿ ಎಂದು ಚೀನಾ ಸ್ಪಷ್ಟಪಡಿಸಿದೆ.

APTOPIX Russia Ukraine War
A building burns after shelling in Kyiv, Ukraine, Thursday, March 3, 2022. Russia has launched a wide-ranging attack on Ukraine, hitting cities and bases with airstrikes or shelling. (AP Photo/Efrem Lukatsky)
ಬೀಜಿಂಗ್‌: ಚಳಿಗಾಲದ ಒಲಿಂಪಿಕ್ಸ್‌ ಮುಗಿಯುವ ತನಕ ಉಕ್ರೇನ್‌ ಮೇಲಿನ ಆಕ್ರಮಣವನ್ನು ಸ್ಥಗಿತಗೊಳಿಸುವಂತೆ ರಷ್ಯಾ ಎದುರು ಯಾವುದೇ ಮನವಿ ಅಥವಾ ಆಗ್ರಹವನ್ನು ಇರಿಸಲಾಗಿಲ್ಲ. ಇದೊಂದು ವದಂತಿ ಎಂದು ಚೀನಾ ಸ್ಪಷ್ಟಪಡಿಸಿದೆ.

''ಉಕ್ರೇನ್‌ಗೆ ನೇರವಾಗಿ ನ್ಯಾಟೋ ಸದಸ್ಯತ್ವವನ್ನು ತಿರಸ್ಕರಿಸಿದ್ದರೆ, ಸದ್ಯ ನಡೆಯುತ್ತಿರುವ ಉಕ್ರೇನ್‌ನಲ್ಲಿನ ಮಾರಣಹೋಮವನ್ನು ಅಮೆರಿಕವು ತಡೆಯಬಹುದಿತ್ತು. ಆದರೆ, ನ್ಯಾಟೋ ಸದಸ್ಯತ್ವದ ಬಗ್ಗೆ ವಿಳಂಬ ಧೋರಣೆ ಮತ್ತು ರಷ್ಯಾವನ್ನು ಸುಖಾಸುಮ್ಮನೆ ಕೆಣಕಿದ ಕಾರಣ ಸದ್ಯ ಉಕ್ರೇನ್‌ ಆಕ್ರಮಣದ ಮೂಲಕ ದೊಡ್ಡ ಮಟ್ಟದ ಅಶಾಂತಿ ನಿರ್ಮಾಣವಾಗಿದೆ.

ಇದಕ್ಕೆಲ್ಲಅಮೆರಿಕದ ದೂರದೃಷ್ಟಿಯ ಕೊರತೆಯೇ ಪ್ರಮುಖ ಕಾರಣ,'' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಅವರು ಆರೋಪಿಸಿದ್ದಾರೆ. ಫೆ.4ರಂದು ಬೀಜಿಂಗ್‌ ಒಲಿಪಿಂಕ್ಸ್‌ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಚೀನಾ ಆಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಉಕ್ರೇನ್‌ ಆಕ್ರಮಣದ ಬಗ್ಗೆ ಪುಟಿನ್‌ ಕಡೆಯಿಂದ ಜಿನ್‌ಪಿಂಗ್‌ಗೆ ಸುಳಿವು ಸಿಕ್ಕಿತ್ತು ಎಂದು ಪತ್ರಿಕೆಯು ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಯ ವರದಿಯೊಂದನ್ನು ಉಲ್ಲೇಖಿಸಿದೆ.

ಉಕ್ರೇನ್‌ ವಿರುದ್ಧ ಹೋರಾಟ ಮುಂದುವರಿಸುವ ಪ್ರತಿಜ್ಞೆ ಮಾಡಿದ ಪುಟಿನ್‌!

2008ರ ಬೀಜಿಂಗ್‌ ಸಮ್ಮರ್‌ ಒಲಿಂಪಿಕ್ಸ್‌ ವೇಳೆ ರಷ್ಯಾ ಸೇನೆಯಿಂದ ಜಾರ್ಜಿಯಾ ಮೇಲೆ ದಾಳಿ ಆರಂಭವಾಗಿತ್ತು. ಇದರಿಂದ ಚೀನಾ ರಾಜಕೀಯ ನೇತರಾರರು ಮತ್ತು ಸಾರ್ವಜನಿಕರು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಚೀನಾದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ (Diplomatic ban on the Beijing Winter Olympics) ಹೇರಲು ಭಾರತ ನಿರ್ಧರಿಸಿದೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು(China PLA) ದಾಳಿ ನಡೆಸಿ, ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಅಂದಿನಿಂದಲೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ಈಗಲೂ ಗಡಿಯಲ್ಲಿ ತಂಟೆ ಮಾಡುತ್ತಲೇ ಇದೆ.

Russia Ukraine crisis: ಪ್ಯಾರಿಸ್ ಮ್ಯೂಸಿಯಂನಿಂದ ಪುಟಿನ್ ಮೇಣದ ಪ್ರತಿಮೆ ಕಿಕ್ ಔಟ್..!

ಫೆ.4ರಿಂದ ಬೀಜಿಂಗ್ನಲ್ಲಿ ಚಳಿಗಾಲದ ಒಲಿಂಪಿಕ್ಸ್ ಆರಂಭವಾಗಿದೆ. ಆದರೆ, ಚೀನಾ ಒಲಿಂಪಿಕ್ಸ್ನಲ್ಲಿ ಕ್ರೀಡಾಜ್ಯೋತಿ ಹೊತ್ತೊಯ್ಯಲು (Torch Relay) ಗಲ್ವಾನ್ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ದಾಳಿ ಮಾಡಿದವರಲ್ಲಿ ಒಬ್ಬನಾದ ಕಮಾಂಡರ್ ಚಿ ಫ್ಯಾಬಾವೋ ಎಂಬಾತನನ್ನು ನಿಯೋಜಿಸಲಾಗಿತ್ತು. ಗಲ್ವಾನ್ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದವನೇ ಕ್ರೀಡಾ ಜ್ಯೋತಿ ಹೊತ್ತೊಯ್ಯುತ್ತಾನೆ ಎಂದಾದ ಮೇಲೆ ನಾವು ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟ ನಿಲುವು ತಾಳಿತ್ತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ