ಆ್ಯಪ್ನಗರ

ಡೋಕ್ಲಾಂ ನಮ್ಮದೇ: ಹಠ ಮುಂದುವರಿಸಿದ ಚೀನಾ

ಭಾರತ ಹಾಗೂ ಚೀನಾದ ಗಡಿ ಭಾಗ ಡೋಕ್ಲಾಂ ಬಗ್ಗೆ ಇರುವ ಗೊಂದಲ ಬಗೆ ಹರಿಯುವಂತೆ ಕಾಣಿಸುತ್ತಿಲ್ಲ. ಉಭಯ ದೇಶಗಳ ಮಾತುಕತೆ ಮೇರೆಗೆ, ಈ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ವಾಪಸು ಕರೆಯಿಸಿಕೊಂಡಿತ್ತು.

Vijaya Karnataka Web 1 Dec 2017, 11:03 am
ಬೀಜಿಂಗ್: ಭಾರತ ಹಾಗೂ ಚೀನಾದ ಗಡಿ ಭಾಗ ಡೋಕ್ಲಾಂ ಬಗ್ಗೆ ಇರುವ ಗೊಂದಲ ಬಗೆ ಹರಿಯುವಂತೆ ಕಾಣಿಸುತ್ತಿಲ್ಲ. ಉಭಯ ದೇಶಗಳ ಮಾತುಕತೆ ಮೇರೆಗೆ, ಈ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ವಾಪಸು ಕರೆಯಿಸಿಕೊಂಡಿತ್ತು. ಆದರೆ, ಇದೀಗ ದೊಡ್ಡ ಪ್ರಮಾಣದ ಸೇನೆಯನ್ನು ಚೀನಾ ಚಳಿಗಾದಲ್ಲಿ ನಿಯೋಜಿಸುತ್ತಿದ್ದು, ತನ್ನ ಹಠವನ್ನು ಮುಂದುವರಿಸುತ್ತಿದೆ.
Vijaya Karnataka Web china hints at maintaining sizeable presence of troops near doklam in winter
ಡೋಕ್ಲಾಂ ನಮ್ಮದೇ: ಹಠ ಮುಂದುವರಿಸಿದ ಚೀನಾ


ಈ ಗಡಿ ಭಾಗದ ವಿಷಯವಾಗಿ ಭಾರತ ಹಾಗೂ ಚೀನಾ ನಡುವೆ ಯುದ್ಧ ಭೀತಿಯೇ ಸೃಷ್ಟಿಯಾಗಿತ್ತು. ಸುಮಾರು 73 ದಿನಗಳು ಹಗ್ಗ ಜಗ್ಗಾಟ ನಡೆದು, ನಂತರ ಈಶಾನ್ಯ ಭಾಗದೊಂದಿಗೆ ಭಾರತವನ್ನು ಸೇರಿಸುವ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ಆಗಸ್ಟ್ 28ರಂದು ಹಿಂಪಡೆದಿತ್ತು. ಈ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು.

ಆದರೀಗ ಚೀನಾ ಮತ್ತೆ ಈ ಗಡಿ ಪ್ರದೇಶ ಚೀನಾಗೆ ಸೇರಿದ್ದೆಂದು ಹೇಳಿ ಕೊಳ್ಳುತ್ತಿದೆ. ಈ ಪ್ರದೇಶದಲ್ಲಿ ಮತ್ತೆ ದೊಡ್ಡ ಪ್ರಮಾಣದ ಸೇನೆ ನಿಯೋಜನೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಕ.ವೂ. ಖಿಯಾನ್, 'ಡೋಕ್ಲಾಂ ಚೀನಾದ್ದು. ಈ ಕಾರಣದಿಂದ ಇಲ್ಲಿ ಸೇನೆಯನ್ನು ನಿಯೋಜಿಸಿದ್ದೇವೆ,' ಎಂದು ಹೇಳಿದ್ದು, ಭಾರತಕ್ಕೆ ಮತ್ತೆ ತಲೆ ನೋವಾಗಿದೆ.

ಆದರೆ, ನ.17ರಂದು ಭಾರತ ಹಾಗೂ ಚೀನಾ ನಡುವೆ ನಡೆದ 10ನೇ ಸುತ್ತಿನ ಭಾರತ-ಚೀನಾ ಗಡಿ ವ್ಯವಹಾರ ಸಮಾಲೋಚನೆ ಮತ್ತು ಸಮನ್ವಯ ಕಾರ್ಯವಿಧಾನದ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪವಾದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ವಿಶ್ವಾಸಕ್ಕೆ ತೆಗೆದುಕೊಂಡು, ಕಾರ್ಯನಿರ್ವಹಿಸಲು ನಿರ್ಧರಿಸಿದೆ ಎನ್ನಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ