ಆ್ಯಪ್ನಗರ

ಡೋಕ್ಲಾಮ್‌ನಲ್ಲಿ ಮತ್ತೆ ಚೀನಾ ಚಟುವಟಿಕೆ: ಅಮೆರಿಕ

ಚೀನಾ ಸದ್ದಿಲ್ಲದೆ ಡೋಕ್ಲಾಮ್‌ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ...

Vijaya Karnataka 26 Jul 2018, 9:50 pm
ಬೀಜಿಂಗ್‌: ಚೀನಾ ಸದ್ದಿಲ್ಲದೆ ಡೋಕ್ಲಾಮ್‌ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ. ಆದರೆ ಭಾರತ ಮತ್ತು ಭೂತಾನ್‌ ಅದನ್ನು ನಿರಾಕರಿಸಲು ಯತ್ನಿಸುತ್ತಿವೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಈ ವರದಿಗಳನ್ನು ಭಾರತ ಅಲ್ಲಗಳೆದಿದೆ.
Vijaya Karnataka Web ಡೋಕ್ಲಾಮ್‌
ಡೋಕ್ಲಾಮ್‌


''ಹಿಮಾಲಯದ ಪ್ರದೇಶಗಳಲ್ಲಿ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲೂ ಚೀನಾದ ಕಾರ್ಯಚಟುವಟಿಕೆಗಳು ಮತ್ತು ತಂತ್ರಗಳು ಹೆಚ್ಚುತ್ತಿದೆ. ಭಾರತ ತನ್ನ ಉತ್ತರದ ಗಡಿಯನ್ನು ಬಲವಾಗಿ ರಕ್ಷಿಸುತ್ತಿದೆ ಮತ್ತು ಇದು ಭಾರತಕ್ಕೆ ಕಾಳಜಿಯ ವಿಷಯವಾಗಿದೆ,'' ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಆಲಿಸ್‌ ಜಿ ವೆಲ್ಸ್‌ ತಿಳಿಸಿದ್ದಾರೆ.

ಭಾರತದ ಗಡಿ ಪ್ರದೇಶಗಳಲ್ಲಿ ಚೀನಾ ರಸ್ತೆಗಳನ್ನು ನಿರ್ಮಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಸಂಸತ್‌ನಲ್ಲಿ ಕೇಳಲಾದ ಪ್ರಶ್ನೆಗೆ ವೆಲ್ಸ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಹಿಮಾಲಯ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಪದೇಪದೆ ಘರ್ಷಣೆ ಏರ್ಪಟ್ಟಿದೆ. ಉಭಯ ದೇಶಗಳ ನಡುವೆ 73 ದಿನಗಳ ನಿರಂತರ ತೀವ್ರ ಘರ್ಷಣೆಗೆ ಕಾರಣವಾಗಿದ್ದ ಡೋಕ್ಲಾಮ್‌ ಗಡಿ ಬಿಕ್ಕಟ್ಟು ಇತ್ತೀಚಿಗಷ್ಟೇ ಅಂತ್ಯವಾಗಿದ್ದು, ಘರ್ಷಣೆಯ ಬಳಿಕ ಗಡಿಯಿಂದ ಎರಡೂ ದೇಶಗಳು ಸೇನೆಯನ್ನು ಹಿಂತೆಗೆದುಕೊಂಡಿವೆ.

ಹೊಸದೇನೂ ಆಗಿಲ್ಲ: ಭಾರತ

ವಿವಾದಿತ ಡೋಕ್ಲಾಮ್‌ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಹೊಸ ಬೆಳವಣಿಗೆಗಳು ಕಂಡುಬಂದಿಲ್ಲ ಮತ್ತು ಆ ಪ್ರದೇಶದ ಸ್ಥಿತಿಗತಿ ಹಾಗೇ ಮುಂದುವರಿಯುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್‌ ವಿ.ಕೆ.ಸಿಂಗ್‌ ತಿಳಿಸಿದ್ದಾರೆ.

ಡೋಕ್ಲಾಮ್‌ ದಕ್ಷಿಣ ಭಾಗದಲ್ಲಿ ಚೀನಾ ಹೊಸ ರಸ್ತೆಗಳನ್ನು ನಿರ್ಮಿಸುತ್ತಿದೆಯೇ ಎಂಬ ಬಗ್ಗೆ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಿಂಗ್‌ ಲಿಖಿತ ಉತ್ತರ ನೀಡಿದ್ದಾರೆ. ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರಬಹುದಾದ ಎಲ್ಲಾ ಕಾರ್ಯಚಟುವಟಿಕೆಗಳ ಮೇಲೆ ಸರಕಾರವು ನಿರಂತರವಾಗಿ ಗಮನ ಹರಿಸುತ್ತದೆ ಮತ್ತು ದೇಶದ ರಕ್ಷಣೆಗೆ ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ