ಆ್ಯಪ್ನಗರ

ಅಂಗಾರಕನನ್ನೂ ಬಿಡದ ಅಮೆರಿಕ-ಚೀನಾ ಸ್ಪರ್ಧೆ..! ಮಂಗಳಕ್ಕೆ ಡ್ರ್ಯಾಗನ್‌ ರಾಷ್ಟ್ರದಿಂದ ರೋವರ್‌ ಉಡಾವಣೆ

ಅಮೆರಿಕ ಹಾಗೂ ಚೀನಾ ನಡುವೆ ಸೃಷ್ಟಿಯಾಗಿರುವ ಸಮರೋತ್ಸಾಹ ಅಂಗಾರಕನ ಅಂಗಳಕ್ಕೂ ತಲುಪಿದೆ. ಈ ಕಾರಣದಿಂದ ಮಂಗಳ ಗ್ರಹಕ್ಕೆ ಡ್ರ್ಯಾಗನ್‌ ರಾಷ್ಟ್ರ ರೋವರ್‌ ಉಡಾವಣೆ ಮಾಡಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ತವಕದಲ್ಲಿದೆ.

Agencies 23 Jul 2020, 2:09 pm
ವೆನ್‌ಚಾಂಗ್‌ (ಚೀನಾ): ಅಮೆರಿಕ ಮತ್ತು ಚೀನಾ ನಡುವಿನ ಶೀತಲ ಸಮರ ಈಗ ಮಂಗಳನ ಅಂಗಳಕ್ಕೂ ಕಾಲಿಟ್ಟಿದೆ. ಹೌದು, ತಮ್ಮ ನಡುವಿನ ಸ್ಪರ್ಧೆಯನ್ನು ಉಭಯ ದೇಶಗಳು ಬಾಹ್ಯಾಕಾಶಕ್ಕೂ ವಿಸ್ತರಿಸಿದ್ದು, ಪರಿಣಾಮವಾಗಿ ಚೀನಾ ಗುರುವಾರ ಮಂಗಳಕ್ಕೆ ರೋವರ್‌ನ್ನು ಉಡಾವಣೆ ಮಾಡಿದೆ.
Vijaya Karnataka Web china launches rover to mars in space race with us
ಅಂಗಾರಕನನ್ನೂ ಬಿಡದ ಅಮೆರಿಕ-ಚೀನಾ ಸ್ಪರ್ಧೆ..! ಮಂಗಳಕ್ಕೆ ಡ್ರ್ಯಾಗನ್‌ ರಾಷ್ಟ್ರದಿಂದ ರೋವರ್‌ ಉಡಾವಣೆ


ಎರಡು ದೇಶಗಳು ಭೂಮಿ ಮತ್ತು ಮಂಗಳನ ನಡುವಿನ ಅಂತರ ಕಡಿಮೆಯಾಗುವ ಸಮಯ ಸದುಪಯೋಗಪಡಿಸಿಕೊಳ್ಳಲು ಕಾಯುತ್ತಿದ್ದು, ಅಮೆರಿಕ ಕೂಡ ಮಂಗಳಕ್ಕೆ ಜುಲೈ 30ರಂದು ಬಾಹ್ಯಾಕಾಶ ನೌಕೆಯನ್ನು ಕಳಿಸಲಿದೆ. ಈ ಕಾರಣಕ್ಕಾಗಿ ಚೀನಾ ವಾರದ ಮುಂಚಿತವಾಗಿಯೇ ರೋವರ್‌ ಉಡಾವಣೆ ಮಾಡಿದೆ ಎನ್ನಲಾಗುತ್ತಿದೆ.

ಚೀನಾದ ಮಂಗಳಯಾನಕ್ಕೆ ಟಿಯಾನ್‌ವೆನ್‌-1 ಎಂದು ಹೆಸರಿಡಲಾಗಿದೆ. ಚೀನಾದ ಹೈನಾನ್‌ನಲ್ಲಿರುವ ಉಡಾವಣಾ ಕೇಂದ್ರದಿಂದ ರೋವರ್‌ನ್ನು ಹೊತ್ತ ಚೀನಾದ ಅತಿದೊಡ್ಡ ಬಾಹ್ಯಾಕಾಶ ರಾಕೆಟ್‌ ಲಾಂಗ್‌ ಮಾರ್ಚ್‌ 5 ನಭಕ್ಕೆ ಜಿಗಿಯಿತು. ಸೈಟ್ ಕಮಾಂಡರ್ ಜಾಂಗ್ ಕ್ಸುಯೆಯು ಮಿಷನ್‌ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ.

ಐದು ಟನ್‌ ತೂಕ ಹೊಂದಿರುವ ಟಿಯಾನ್‌ವೆನ್‌-1 ಫೆಬ್ರವರಿ 2021ಕ್ಕೆ ಮಂಗಳನ ಅಂಗಳದಲ್ಲಿ ಇಳಿಯಲಿದೆ ಎಂದು ಅಂದಾಜು ಮಾಡಲಾಗಿದೆ. 7 ತಿಂಗಳ ಪ್ರಯಾಣದಲ್ಲಿ 55 ಮಿಲಿಯನ್‌ ಕಿಲೋ ಮೀಟರ್‌ ಅಂತರವನ್ನು ರೋವರ್‌ ಕ್ರಮಿಸಲಿದೆ. ಮಾರ್ಸ್‌ ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ ಅನ್ನು ರಾಕೆಟ್‌ ಒಳಗೊಂಡಿದ್ದು, ಅಲ್ಲಿನ ಮಣ್ಣನ್ನು ಅಧ್ಯಯನ ನಡೆಸುತ್ತವೆ ಎಂದು ಹೇಳಲಾಗಿದೆ.

ಹೂಸ್ಟನ್ ರಾಯಭಾರ ಕಚೇರಿ ಮುಚ್ಚುವಂತೆ ಅಮೆರಿಕ ಆದೇಶ: ದಂಗಾದ ಚೀನಾದಿಂದ ಏನು ಪ್ರತಿಕ್ರಿಯೆ?

"ಚೀನಾಕ್ಕೆ ಇದು ಮೊದಲ ಪ್ರಯತ್ನವಾಗಿದೆ. ಅಮೆರಿಕ ಈಗಾಗಲೇ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಈ ಮಿಷನ್‌ ಮಾಡಬಹುದೆಂದು ನಾನು ನಿರೀಕ್ಷಿಸುವುದಿಲ್ಲ" ಎಂದು ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನ ಖಗೋಳ ಶಾಸ್ತ್ರಜ್ಞ ಜೊನಾಥನ್ ಮೆಕ್ಡೊವೆಲ್ ಹೇಳಿದ್ದಾರೆ.

ಭಾರತಕ್ಕೆ ಬೆಂಬಲ: ಚೀನಿ ಆಕ್ರಮಣ ವಿರುದ್ಧ ಅಮೆರಿಕ ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರ!

ಮಂಗಳನ ಅಧ್ಯಯನಕ್ಕಾಗಿಯೇ ಸೋಮವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕೂಡ ರೋವರ್‌ ಉಡಾವಣೆ ಮಾಡಿದ್ದು, ಅಂಗಾರಕನ ಅಧ್ಯಯನಕ್ಕೆ ಸ್ಪರ್ಧೆ ಹೆಚ್ಚಾಗಿದೆ. ಆದರೆ, ಚೀನಾ ಹಾಗೂ ಅಮೆರಿಕ ನಡುವೆ ಸ್ಪರ್ಧೆ ಇದ್ದು, ಬಾಹ್ಯಾಕಾಶದಲ್ಲಿ ವಾಷಿಂಗ್ಟನ್‌ ಪ್ರಾಬಲ್ಯವನ್ನು ಹಿಂದಿಕ್ಕುವ ಪ್ರಯತ್ನವನ್ನು ಬೀಜಿಂಗ್‌ ಮಾಡುತ್ತಿದೆ.

ಚೀನಾ ಕಮ್ಯೂನಿಸ್ಟ್ ಪಕ್ಷದ ಸದಸ್ಯರ ವೀಸಾ ರದ್ದುಗೊಳಿಸಲು ಟ್ರಂಪ್ ಚಿಂತನೆ: ವರದಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ