ಆ್ಯಪ್ನಗರ

ಇಸ್ಲಾಮಿಕ್‌ ಬರಹಗಳನ್ನು ರೆಸ್ಟೋರೆಂಟ್‌ನಿಂದ ತೆಗೆದುಹಾಕಲು ಚೀನಾ ಅಧಿಕಾರಿಗಳ ಆದೇಶ

ಸ್ಥಳೀಯ ಚೀನಾ ಸಂಸ್ಕೃತಿಗೆ ಒಗ್ಗಿಕೊಂಡು, ಇಲ್ಲಿನ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂಬುದಾಗಿ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ,'' ಎಂದು ರ್ಯೂಟರ್ಸ್‌ ವರದಿ ಮಾಡಿದೆ.

PTI 2 Aug 2019, 5:00 am
ಬೀಜಿಂಗ್‌: ಚೀನಾ ರಾಜಧಾನಿಯಲ್ಲಿನ ಎಲ್ಲ ಹಲಾಲ್‌ ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳಿಂದ ಅರೇಬಿಕ್‌ ಹಾಗೂ ಇಸ್ಲಾಮಿಕ್‌ ಬರಹಗಳನ್ನು ತೆಗೆದುಹಾಕುವಂತೆ ಸ್ಥಳೀಯ ಆಡಳಿತಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ''ಮಳಿಗೆಗಳ ಮೇಲೆ ಹಾಕಲಾಗಿರುವ ಹೋರ್ಡಿಂಗ್‌ಗಳಲ್ಲಿ ಕೂಡ ಅರೇಬಿಕ್‌ ಭಾಷೆ ಬಳಸಬೇಡಿ. ಸ್ಥಳೀಯ ಚೀನಾ ಸಂಸ್ಕೃತಿಗೆ ಒಗ್ಗಿಕೊಂಡು, ಇಲ್ಲಿನ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂಬುದಾಗಿ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ,'' ಎಂದು ರ್ಯೂಟರ್ಸ್‌ ವರದಿ ಮಾಡಿದೆ. ಸದ್ಯ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಆಡಳಿತದಲ್ಲಿ ವಿದೇಶಿ ಸಂಸ್ಕೃತಿಗಳನ್ನು ಹತ್ತಿಕ್ಕಲು ಹಲವು ಆದೇಶಗಳನ್ನು ಹೊರಡಿಸಲಾಗಿದೆ. ಮಸೀದಿಗಳ ಮೇಲಿನ ಡೋಮ್‌ ಮಾದರಿ ಆಕಾರಗಳನ್ನು ತೆಗೆದುಹಾಕುವುದು, ನೆಲಮಾಳಿಗೆಯಿದ್ದಂಥ ಚರ್ಚ್‌ಗಳನ್ನು ಮುಚ್ಚಿಸುವುದಕ್ಕೆ ಕೂಡ ಅಧಿಕಾರಿಗಳು ಮುಂದಾಗಿದ್ದಾರೆ. ಚೀನಾದಲ್ಲಿ ಒಟ್ಟು 2 ಕೋಟಿ ಮುಸ್ಲಿಂ ಸಮುದಾಯದವರು ವಾಸವಾಗಿದ್ದಾರೆ.
Vijaya Karnataka Web china

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ