ಆ್ಯಪ್ನಗರ

ಹಾಕಾಂಗ್‌ ವಿರುದ್ಧ ವಿವಾದಿತ ಕಾನೂನು ಜಾರಿಗೆ ಮುಂದಾದ ಚೀನಾ

ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಕಾನೂನನ್ನು ಪ್ರಸ್ತಾಪ ಮಾಡಿದ ಬಳಿಕ ಹಾಂಕಾಂಗ್‌ನಲ್ಲಿ ಬೀದಿಗಿಳಿದಿದ್ದ 5 ಲಕ್ಷಕ್ಕೂ ಅಧಿಕ ಪ್ರಜಾಪ್ರಭುತ್ವ ಪರ ಹೋರಾಟಗಾರರು ಭಾರೀ ಪ್ರತಿಭಟನೆ ನಡೆಸಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಚೀನಾ ಇದೀಗ ಕರಡು ಮಸೂದೆಯನ್ನು ಮಂಡಿಸಿದೆ.

Agencies 22 May 2020, 7:56 pm
ಬೀಜಿಂಗ್‌: ಸ್ವಾಯತ್ತ ಸರಕಾರಕ್ಕಾಗಿ ಸುದೀರ್ಘ ಹೋರಾಟ ನಡೆಸುತ್ತಿದ್ದ ಹಾಂಕಾಂಗ್‌ನ ಹೋರಾಟಗಾರರಿಗೆ ಚೀನಾ ಸರಕಾರ ಶುಕ್ರವಾರ ಶಾಕ್‌ ನೀಡಿದೆ. ಪ್ರಾಂತ್ಯಕ್ಕಿರುವ ವಿಶೇಷಾಧಿಕಾರ ಮೊಟಕುಗೊಳಿಸುವ ವಿವಾದಿತ ರಾಷ್ಟ್ರೀಯ ಭದ್ರತಾ ಕಾನೂನು ಕರಡನ್ನು ಚೀನಾ ಸರಕಾರ ಶುಕ್ರವಾರ ಮಂಡನೆ ಮಾಡಿದೆ.
Vijaya Karnataka Web Hong Kong


ಹಾಂಕಾಂಗ್‌ ಹೊಂದಿದ್ದ ‘ಒಂದು ದೇಶ, ಎರಡು ವ್ಯವಸ್ಥೆ’ ಅಧಿಕಾರವನ್ನು ತೆಗೆದು ಹಾಕಿ ‘ಒಂದು ದೇಶ ಒಂದೇ ವ್ಯವಸ್ಥೆ’ ಜಾರಿ ಮಾಡುವುದು ಹೊಸ ಕಾನೂನಿನ ಉದ್ದೇಶವಾಗಿದೆ.

1997ರ ತನಕ ಬ್ರಿಟಿಷ್‌ ಕಾಲೊನಿಯಾಗಿದ್ದ ಹಾಂಕಾಂಗ್‌, 1997ರ ಜುಲೈ 1 ರಂದು ಚೀನಾಕ್ಕೆ ಸೇರ್ಪಡೆಯಾಗಿತ್ತು. ಇದಕ್ಕೂ ಮೊದಲು ನಡೆದ ಒಪ್ಪಂದದ ಪ್ರಕಾರ ಅಲ್ಲಿನ ಆಡಳಿತಕ್ಕೆ ಕೆಲವೊಂದು ವಿಶೇಷಾಧಿಕಾರ ನೀಡಲಾಗಿತ್ತು. ಆ ವಿಶೇಷಾಧಿಕಾರಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತವೆ ಎಂಬ ನೆಪ ಹೇಳಿ ಚೀನಾ ಸರಕಾರ ಹೊಸ ಕಾನೂನು ಜಾರಿಗೆ ಮುಂದಾಗಿದೆ.

ಕಳೆದ ವರ್ಷ ಹೊಸ ಕಾಯಿದೆಯ ಪ್ರಸ್ತಾಪ ಮಾಡಿದ ಬಳಿಕ ಹಾಂಕಾಂಗ್‌ನಲ್ಲಿ ಬೀದಿಗಿಳಿದಿದ್ದ 5 ಲಕ್ಷಕ್ಕೂ ಅಧಿಕ ಪ್ರಜಾಪ್ರಭುತ್ವ ಪರ ಹೋರಾಟಗಾರರು ಭಾರೀ ಪ್ರತಿಭಟನೆ ನಡೆಸಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಚೀನಾ ಇದೀಗ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತರಲು ಹೊರಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ