ಆ್ಯಪ್ನಗರ

ಆರ್ಥಿಕ ಬೆಳವಣಿಗೆಗೆ ಉರುಳಾದ ಜನಸಂಖ್ಯೆ ಸ್ಫೋಟ, ಹಪಹಪಿಸುತ್ತಿರುವ‌ ಚೀನಾ

'ಒಂದು ಕುಟುಂಬ, ಒಂದೇ ಮಗು' ಎನ್ನುವ ವಿವಾದಾತ್ಮಕ ನೀತಿಯನ್ನು ನಾಲ್ಕು ವರ್ಷಗಳ ಹಿಂದೆಯೇ ಕೊನೆಗಾಣಿಸಿದ್ದ ಚೀನಾ ಈಗ ಜನಸಂಖ್ಯೆ ಸ್ಫೋಟಕ್ಕಾಗಿ ಹಪಹಪಿಸತೊಡಗಿದೆ. ದುಡಿಯುವ ಯುವ ಸಮುದಾಯ ಕುಸಿದಿದೆ.

Vijaya Karnataka Web 20 Feb 2021, 2:22 pm
ಬೀಜಿಂಗ್‌: ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಚೀನಾಕ್ಕೆ ಈಗ ಇರುವ ಜನಸಂಖ್ಯೆ ವೃದ್ಧಿ ದರವನ್ನು ಇನ್ನಷ್ಟು ಹೆಚ್ಚಳ ಮಾಡುವ ಹುಚ್ಚು ತಲೆಗೇರಿದೆ. 'ಒಂದು ಕುಟುಂಬ, ಒಂದೇ ಮಗು' ಎನ್ನುವ ವಿವಾದಾತ್ಮಕ ನೀತಿಯನ್ನು ನಾಲ್ಕು ವರ್ಷಗಳ ಹಿಂದೆಯೇ ಕೊನೆಗಾಣಿಸಿದ್ದ ಕಮ್ಯುನಿಸ್ಟ್‌ ಚೀನಾ ಈಗ ಜನಸಂಖ್ಯೆ ಸ್ಫೋಟಕ್ಕಾಗಿ ಹಪಹಪಿಸತೊಡಗಿದೆ.
Vijaya Karnataka Web china birth restriction


ಆರ್ಥಿಕ ಸ್ಥಿತಿ ಅಧ್ವಾನಗೊಳ್ಳಲು ಜನಸಂಖ್ಯಾ ಸ್ಫೋಟವೇ ಕಾರಣವಾಗುತ್ತಿದೆ, ಅದನ್ನು ನಿಯಂತ್ರಿಸದಿದ್ದರೆ ಹಸಿವೆಯಿಂದ ಜನ ಸಾಯುತ್ತಾರೆ ಎನ್ನುವ ಭೀತಿಯಿಂದ ಚೀನಾ, ಕಟ್ಟುನಿಟ್ಟಿನ ಕುಟುಂಬ ಕಲ್ಯಾಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಒಂದು ಕುಟುಂಬವು ಒಂದು ಮಗುವಿಗಿಂತ ಹೆಚ್ಚು ಹೊಂದುವಂತಿಲ್ಲ ಎನ್ನುವ ನೀತಿಯನ್ನು ಅನುಸರಿಸಿತ್ತು. ಅನೇಕ ದಶಕಗಳ ಕಾಲ ಈ ಬಿಗಿ ನಿಯಮ ಜಾರಿ ಇತ್ತು. ಈಗ ಈ ಬಿಗಿ ನಿಯಮವೇ ಆ ದೇಶದ ಆರ್ಥಿಕ ಬೆಳವಣಿಗೆಗೆ ಉರುಳಾಗಿ ಪರಿಣಮಿಸಿದೆ.

''ಜನಸಂಖ್ಯೆ ವೃದ್ಧಿ ದರ ತೀವ್ರಗತಿಯಲ್ಲಿ ನಿಯಂತ್ರಣಕ್ಕೆ ಬಂದಿರುವುದರಿಂದ ದುಡಿಯುವ ಶಕ್ತಿಯುಳ್ಳ ಯುವ ಸಮುದಾಯ ಕುಸಿದಿದೆ. ಇದರಿಂದಾಗಿ ದೇಶದ ಆರ್ಥಿಕ ವೃದ್ಧಿದರ ಕೂಡ ಕುಸಿಯ ತೊಡಗಿದೆ. ತುರ್ತಾಗಿ ಇದನ್ನು ಸರಿಪಡಿಸಿ, ಜನನ ಪ್ರಮಾಣ ಹೆಚ್ಚಳಕ್ಕೆ ಉತ್ತೇಜನ ನೀಡಬೇಕಿದೆ,'' ಎಂದು ಚೀನಾ ಆರೋಗ್ಯ ಆಯೋಗ ಶಿಫಾರಸು ಮಾಡಿದೆ. ''ಈ ದಿಸೆಯಲ್ಲಿ ಶೀಘ್ರವೇ ಉತ್ತೇಜನಾಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು,'' ಎಂದು ಸರಕಾರ ಭರವಸೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ