ಆ್ಯಪ್ನಗರ

ಆಫ್ರಿಕನ್ ಜ್ವರ: ಭಾರತದಿಂದ ಹಂದಿಗಳ ಆಮದಿಗೆ ತಡೆ ನೀಡಿದ ಚೀನಾ!

ಆಫ್ರಿಕನ್ ಹಂದಿ ಜ್ವರ ಹೆಚ್ಚಾಗಿರುವ ಕಾರಣಕ್ಕೆ ಭಾರತದಿಂದ ಹಂದಿಗಳು ಮತ್ತು ಕಾಡು ಹಂದಿಗಳ ಆಮದನ್ನು ಚೀನಾ ನಿಲ್ಲಿಸಿದೆ. ಭಾರತದಲ್ಲಿ ಆಫ್ರಿಕನ್ ಹಂದಿ ಜ್ವರ ಕ್ಷೀಣಿಸುವವರೆಗೂ ಹಂದಿ ಮತ್ತು ಕಾಡು ಹಂದಿಗಳ ಆಮದಿನ ಮೇಲೆ ತಡೆ ನೀಡಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ.

Vijaya Karnataka Web 29 May 2020, 11:29 am
ಬಿಜಿಂಗ್: ಆಫ್ರಿಕನ್ ಹಂದಿ ಜ್ವರ ಹೆಚ್ಚಾಗಿರುವ ಕಾರಣಕ್ಕೆ ಭಾರತದಿಂದ ಹಂದಿಗಳು ಮತ್ತು ಕಾಡು ಹಂದಿಗಳ ಆಮದನ್ನು ಚೀನಾ ನಿಲ್ಲಿಸಿದೆ. ಈ ಕುರಿತು ಚೀನಾದ ಅಧಿಕೃತ ಮಾಧ್ಯಮ ಮಾಹಿತಿ ನೀಡಿದೆ.
Vijaya Karnataka Web India-China
ಸಂಗ್ರಹ ಚಿತ್ರ


ಭಾರತದ ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಅಧಿಕವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಂದಿಗಳು ಸಾವನ್ನಪ್ಪಿವೆ. ಇದೇ ಕಾರಣಕ್ಕೆ ಭಾರತಿಂದ ಹಂದಿ ಮತ್ತು ಕಾಡು ಹಂದಿಗಳ ಆಮದನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಚೀನಾ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ, ಭಾರತದಲ್ಲಿ ಆಫ್ರಿಕನ್ ಹಂದಿ ಜ್ವರ ಕ್ಷೀಣಿಸುವವರೆಗೂ ಹಂದಿ ಮತ್ತು ಕಾಡು ಹಂದಿಗಳ ಆಮದಿನ ಮೇಲೆ ತಡೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೊರೊನಾ ನಡುವಲ್ಲೇ ಮತ್ತೊಂದು ಕಂಟಕ..! ಅಸ್ಸಾಂ ಹಂದಿಗಳಿಗೆ ಆಫ್ರಿಕನ್‌ ಜ್ವರ

ಆಫ್ರಿಕನ್ ಹಂದಿ ಜ್ವರಕ್ಕೆ ತುತ್ತಾಗಿ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 14 ಸಾವಿರ ಹಂದಿಗಳು ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.

ಭಾರತದೊಂದಿಗಿನ ಗಡಿ ಸಮಸ್ಯೆ ನಡುವೆಯೇ ಭಾರತದಿಂದ ಹಂದಿ ಮತ್ತು ಕಾಡು ಹಂದಿಗಳ ಆಮದನ್ನು ಚೀನಾ ನಿಲ್ಲಿಸಿದ್ದು, ಇದು ತಾತ್ಕಾಲಿಕ ಕ್ರಮ ಎಂದೂ ಸ್ಪಷ್ಟಪಡಿಸಿದೆ. ಚೀನಾ ವಿಶ್ವದ ಅತಿದೊಡ್ಡ ಹಂದಿಮಾಂಸ ಗ್ರಾಹಕ ದೇಶವಾಗಿದೆ ಎಂಬುದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ