ಆ್ಯಪ್ನಗರ

ಸಮಸ್ಯೆ ನಮ್ಮ ನಡುವೆ ಇರುವಾಗ ನೀವೇಕೆ ಬಗೆಹರಿಸುವಿರಿ?: ಟ್ರಂಪ್ ಮಧ್ಯಸ್ಥಿಕೆ ಆಫರ್ ತಿರಸ್ಕರಿಸಿದ ಚೀನಾ!

ಭಾರತ-ಚೀನಾ ಗಡಿ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆಯ ಪಾತ್ರ ನಿರ್ವಹಿಸುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನವನ್ನು ಚೀನಾ ತಿರಸ್ಕರಿಸಿದೆ. ಭಾರತ ಕೂಡ ಈ ಕುರಿತು ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

Vijaya Karnataka Web 29 May 2020, 4:24 pm
ಭಾರತ-ಚೀನಾ ಗಡಿ ಸಮಸ್ಯೆಯಲ್ಲಿ ಉತ್ಸುಕತೆ ತೋರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎರಡೂ ರಾಷ್ಟ್ರಗಳಿಂದ ನಕಾರಾತ್ಮಕ ಪ್ರತಿಕ್ರಿಯೇ ದೊರೆತಿದೆ. ಲಡಾಖ್ ಗಡಿ ಸಮಸ್ಯೆ ಕುರಿತಂತೆ ತಾನು ಅಮೆರಿಕದ ಅಧ್ಯಕ್ಷರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಇದಕ್ಕೆ ಪೂರಕವಾಗಿ ಚೀನಾ ಕೂಡ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಆಹ್ವಾನವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ನಮ್ಮ ನಡುವಿನ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ನಾವಿಬ್ಬರೂ ಶಕ್ತರಾಗಿದ್ದೇವೆ ಎಂದು ಚೀನಾ ಹೇಳಿರುವುದು ಕುತೂಹಲ ಮೂಡಿಸಿದೆ. ಹೀಗೆ ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಟ್ರಂಪ್ ಮಧ್ಯಸ್ಥಿಕೆ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದು, ಗಡಿ ಸಮಸ್ಯೆಯನ್ನು ನಾವಿಬ್ಬರೇ ಪರಿಹರಿಸಿಕೊಳ್ಳುವುದಾಗಿ ಸ್ಪಷ್ಟ ಸಂದೇಶ ರವಾನಿಸಿವೆ. ಗಡಿ ಸಮಸ್ಯೆ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾರ್ಗಗಳನ್ನು ಹುಡುಕುತ್ತಿರುವ ಭಾರತ-ಚೀನಾ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಹಾಗಾದರೆ ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಈವರೆಗೂ ನಡೆದಿರುವ ಬೆಳವಣಿಗೆಗಳನ್ನು ಗಮನಸಿವುದಾದರೆ...
Vijaya Karnataka Web china rejects donald trump mediation offer on border tension with india
ಸಮಸ್ಯೆ ನಮ್ಮ ನಡುವೆ ಇರುವಾಗ ನೀವೇಕೆ ಬಗೆಹರಿಸುವಿರಿ?: ಟ್ರಂಪ್ ಮಧ್ಯಸ್ಥಿಕೆ ಆಫರ್ ತಿರಸ್ಕರಿಸಿದ ಚೀನಾ!


ಏನಿದು ಭಾರತ-ಚೀನಾ ಗಡಿ ಸಮಸ್ಯೆ?

ಸಿಕ್ಕಿಂನಲ್ಲಿ ಭಾರತೀಯ ಸೈನಿಕರೊಂದಿಗೆ ಸಂಘರ್ಷಕ್ಕಿಳಿದ ಚೀನಿ ಸೇನೆ, ಬಳಿಕ ಲಡಾಖ್ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯವನ್ನು ಜಮಾವಣೆಗೊಳಿಸಿ ಹೊಸದೊಂದು ಸಮಸ್ಯೆಗೆ ನಾಂದಿ ಹಾಡಿದೆ. ಗಡಿಯಲ್ಲಿ ಭಾರತೀಯ ಸೈನಿಕರಿಗೆ ನಿರಂತರ ಕಿರುಕುಳ ನೀಡುತ್ತಿರುವ ಚೀನಿ ಸೈನಿಕರ ವರ್ತನೆಯನ್ನು ಇಡೀ ಜಗತ್ತು ನೋಡುತ್ತಿದೆ.

'ಗಡಿ'ಬಿಡಿ ಚೀನಾಗೆ ಬೇಡುವ ಪರಿಸ್ಥಿತಿ ಬರಲಿದೆ: ಮೋದಿ ಸಭೆಯಲ್ಲಿ ಫೈನಲ್ ಸ್ಟ್ಯಾಟರ್ಜಿ!

ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿಯಲ್ಲಿ ಸೈನ್ಯವನ್ನು ಜಮಾವಣೆಗೊಳಿಸಿದ್ದುಮ, ಗಡಿ ಸುರಕ್ಷತೆಗಾಗಿ ಸರ್ವ ಸನ್ನದ್ಧವಾಗಿದೆ. ಈಗಾಗಲೇ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ಸಾರ್ವಭೌಮತೆ ರಕ್ಷಣೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೇನಾ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆಗೆ ಉತ್ಸುಕತೆ ತೋರಿದ ಟ್ರಂಪ್!

ಇನ್ನು ಭಾರತ-ಚೀನಾ ನಡುವಿನ ಗಡಿ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿದ ಅಮೆರಿಕ, ಗಡಿಯಲ್ಲಿ ಶಾಂತಿ ಸ್ಥಾಪನೆಯ ಅಗತ್ಯವನ್ನು ಒತ್ತಿ ಹೇಳಿತು. ಈ ಕುರಿತು ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಹಾಗೂ ಚೀನಾ ಬಯಸುವುದಾದರೆ ತಾವು ಗಡಿ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಘೋಷಿಸಿದರು.

ಒಂಟಿಯಾಗುತ್ತಿದೆ ಚೀನಾ: ಸೈಲೆಂಟಾಗಿಯೇ ಅಮೆರಿಕ ಬೆಂಬಲ ಗಿಟ್ಟಿಸಿಕೊಂಡ ಮೋದಿ!

ತಾವು ಈ ಕುರಿತು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದು, ಗಡಿ ಸಮಸ್ಯೆಯಿಂದ ಚಿಂತೆಗೀಡಾಗಿರುವ ಮೋದಿ ಮಾತನಾಡುವ ಮೂಡ್‌ನಲ್ಲಿ ಇರಲಿಲ್ಲ ಎಂದು ಟ್ರಂಪ್ ಹೇಳಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತ, ಟ್ರಂಪ್ ಹಾಗೂ ಮೋದಿ ಅವರ ನಡುವೆ ಕಳೆದ ಏಪ್ರಿಲ್ 4ರಂದು ಮಾತುಕತೆ ನಡೆದಿತ್ತು ಎಂದು ಹೇಳಿದೆ.

ಮೋದಿ ಮಾತನಾಡೋ ಮೂಡ್‌ನಲ್ಲಿ ಇಲ್ಲ ಎಂದ ಟ್ರಂಪ್‌ಗೆ ಭಾರತ ತಿರುಗೇಟು!

ಹೌದು, ಗಡಿ ಸಮಸ್ಯೆ ಉಲ್ಬಣದಿಂದಾಗಿ ಭಾರತದ ಪ್ರಧಾನಿ ಮೋದಿ ತಮ್ಮೊಂದಿಗೆ ಮಾತನಾಡುವ ಮೂಡ್‌ನಲ್ಲಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಟ್ರಂಪ್ ಹಾಗೂ ಮೋದಿ ನಡುವೆ ಯಾವುದೇ ಮಾತುಕತೆಯೇ ನಡೆದಿಲ್ಲ ಎಂದು ಹೇಳಿತು.

ಮೋದಿ, ಟ್ರಂಪ್ ಕೊನೆಯ ಬಾರಿ ಏಪ್ರಿಲ್‌ನಲ್ಲಿ ಮಾತನಾಡಿದ್ದರು: ಕೇಂದ್ರದ ಸ್ಪಷ್ಟನೆ!

ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ತಲುಪಿದ ಬಳಿಕ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಲು ಕಳೆದ ಏಪ್ರಿಲ್ 4ರಂದು ಟ್ರಂಪ್ ದೂರವಣಿ ಕರೆ ಮಾಡಿದ್ದರು. ಅದಾದ ಬಳಿಕ ಉಭಯ ನಾಯಕರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಅಲ್ಲದೇ ಚೀನಾದೊಂದಿಗಿನ ಗಡಿ ಸಮಸ್ಯೆ ಕುರಿತು ಪ್ರಧಾನಿ ಮೋದಿ ಟ್ರಂಪ್ ಅವರೊಂದಿಗೆ ಚರ್ಚೆಯನ್ನೂ ನಡೆಸಿಲ್ಲ ಎಂದು ಭಾರತ ಖಚಿತಪಡಿಸಿದೆ.

ನಮ್ಮ ನಡುವಿನ ಬಿಕ್ಕಟ್ಟನ್ನು ನಾವು ಬಗೆಹರಿಸಕೊಳ್ಳುತ್ತೇವೆ ಎಂದ ಚೀನಾ!

ಅದರಂತೆ ಚೀನಾ ಕೂಡ ಟ್ರಂಪ್ ಮಧ್ಯಸ್ಥಿಕೆ ಆಹ್ವಾನವನ್ನು ತಿರಸ್ಕರಿಸಿದ್ದು, ಭಾರತ-ಚೀನಾ ನಡುವಿನ ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಯುತವಾಗಿ ಬಗೆಹರಿಸಕೊಳ್ಳಲು ಎರಡೂ ರಾಷ್ಟ್ರಗಳೂ ಶಕ್ತವಾಗಿವೆ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, ಭಾರತ-ಚೀನಾ ನಡುವಿನ ಗಡಿ ತಕರಾರಿನಲ್ಲಿ ಮೂರನೇಯವರ ಹಸ್ತಕ್ಷೇಪವನ್ನು ಎರಡೂ ರಾಷ್ಟ್ರಗಳು ವಿರೋಧಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವಶ್ಯಕತೆಯಿಲ್ಲ: ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾವನೆ ತಿರಸ್ಕರಿಸಿದ ಚೀನಾ ಮಾಧ್ಯಮ!

ಇಂತದ್ದೇ ಅಭಿಪ್ರಾಯ ವ್ಯಕ್ತಪಡಿದ್ದ ಚೀನಾದ ಅಧಿಕೃತ ಮಾಧ್ಯಮ, ಈ ಹಿಂದೆಯೂ ಹಲವು ಬಾರಿ ಉದ್ಭವಿಸಿದ್ದ ಗಡಿ ಸಮಸ್ಯೆಯನ್ನು ಭಾರತ-ಚೀನಾ ರಾಷ್ಟ್ರಗಳು ಯಶಸ್ವಿಯಾಗಿ ಪರಿಹರಿಸಿವೆ ಎಂದು ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ