ಆ್ಯಪ್ನಗರ

ಪ್ರಾಬಲ್ಯ ಕುಗ್ಗುವ ಭಯ: ಶೀತಲ ಸಮರದಲ್ಲಿ ಅಮೆರಿಕ ಪರ ನಿಲ್ಲದಂತೆ ಭಾರತಕ್ಕೆ ಚೀನಾ ಮನವಿ

ಕೊರೊನಾ ವೈರಸ್‌ ವಿಚಾರದಿಂದ ಅಮೆರಿಕದ ಜೊತೆ ಚೀನಾದ ಬಾಂಧವ್ಯ ಮತ್ತಷ್ಟು ಹಳಸಿದೆ. ಈಗ ಅದು ಶೀತಲ ಸಮರಕ್ಕೆ ತಿರುಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಮೆರಿಕದ ಪರ ನಿಲ್ಲದಂತೆ ಚೀನಾ ಭಾರತಕ್ಕೆ ಮನವಿ ಮಾಡಿದ್ದು, ಗಡಿ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದಾಗಿ ಪುನರುಚ್ಚರಿಸಿದೆ.

Agencies 1 Jun 2020, 11:09 pm
ಬೀಜಿಂಗ್‌: ಪೂರ್ವ ಲಡಾಖ್‌ ಗಡಿಯಲ್ಲಿ ಉಲ್ಬಣಗೊಂಡಿರುವ ಗಡಿ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದಾಗಿ ಪುನರುಚ್ಚರಿಸಿರುವ ಚೀನಾ, ಒಂದೊಮ್ಮೆ ಅಮೆರಿಕ ತನ್ನೊಂದಿಗೆ ಶೀತಲ ಸಮರ ಸಾರಿದ್ದೇ ಆದಲ್ಲಿ ಆ ರಾಷ್ಟ್ರದ ಪರ ನಿಲ್ಲದಂತೆ ಚೀನಾವು ಭಾರತಕ್ಕೆ ಮನವಿ ಮಾಡಿದೆ.
Vijaya Karnataka Web TRUMP XI PING
ಡೊನಾಲ್ಡ್‌ ಟ್ರಂಪ್‌, ನರೇಂದ್ರ ಮೋದಿ, ಕ್ಷಿ ಜಿನ್‌ ಪಿಂಗ್‌


ಕೊರೊನಾದಿಂದಾಗಿ ಅಮೆರಿಕ, ಚೀನಾ ಬಾಂಧವ್ಯ ಹಳಸಿದೆ. ಚೀನಾ ಆರಂಭದಲ್ಲಿ ಸೋಂಕಿನ ಕುರಿತು ಮಾಹಿತಿ ಮುಚ್ಚಿಟ್ಟು ಜಾಗತಿಕ ಸಮುದಾಯ­ವನ್ನು ವಂಚಿ­ಸಿದೆ ಎನ್ನು­ವುದು ಅಮೆರಿಕದ ಆರೋಪ. ಕೊರೊನಾ ಸೋಂಕು ಮಾನವ ನಿರ್ಮಿತ ಎಂದು ಆರೋಪಿಸಿದ್ದು ಮಾತ್ರವಲ್ಲದೇ, ಸೋಂಕಿನ ಮೂಲದ ತನಿಖೆ ನಡೆಸು­ವಂತೆಯೂ ಒತ್ತಾಯಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಬೆನ್ನಿಗೆ ನಿಂತಿದೆ ಎಂದು ಆಪಾದಿಸಿ ಸಂಸ್ಥೆ ಜತೆಗಿನ ಬಾಂಧವ್ಯವನ್ನೂ ಕಡಿದುಕೊಂಡಿದೆ. ಕೊರೊ­ನಾದಿಂದ ಅಂತಾ­ರಾಷ್ಟ್ರೀಯ ಸಮುದಾಯದಲ್ಲಿ ವಿಶ್ವಾಸ ಕಳೆದುಕೊಂಡಿರುವ ಚೀನಾ ಎಲ್ಲಿ ಮುಂದಿನ ದಿನಗಳಲ್ಲಿತನ್ನ ಪ್ರಾಬಲ್ಯ ಕುಗ್ಗುವುದೋ ಎಂಬ ಭಯ ಹೊಂದಿದೆ. ಈ ಎಲ್ಲ ಬೆಳವ­ಣಿಗೆಗಳಿಂದ ತನ್ನ ವಿರುದ್ಧ ಅಮೆರಿಕ ಶೀತಲ ಸಮರ ಸಾರಬಹುದು ಎಂದು ಅಂದಾಜಿಸಿದೆ. ಹೀಗಾಗಿ ಅಮೆರಿಕದ ಬೆನ್ನಿಗೆ ನಿಲ್ಲದಂತೆ ಭಾರತಕ್ಕೆ ಮನವಿ ಮಾಡಿದೆ.

ಚೀನಾ ಮೇಲಿನ ಅವಲಂಬನೆ, ಭ್ರಷ್ಟಚಾರವನ್ನು ಬಿಟ್ಟರೆ ಡಬ್ಲ್ಯುಎಚ್‌ಒಗೆ ಮತ್ತೆ ಸೇರ್ಪಡೆ: ಅಮೆರಿಕ

''ಚೀನಾ-ಅಮೆರಿಕದ ನಡುವಿನ ಬಿಕ್ಕಟ್ಟಿ­ನಲ್ಲಿ ಭಾರತವು ಅಮೆರಿಕ ಪರ ನಿಂತರೆ ಅದಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾವನ್ನು ಮಣಿಸಲು ಭಾರತವನ್ನು ದಾಳವಾಗಿ ಬಳಸಿ­ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ಆಸಕ್ತಿ ತೋರಬಾರದು,'' ಎಂದು ಚೀನಾದ ಕಮ್ಯೂನಿಸ್ಟ್‌ ಪಕ್ಷದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಪತ್ರಿಕೆಯಲ್ಲಿ ಸಲಹೆ ನೀಡಲಾಗಿದೆ.

ನೇಪಾಳದಿಂದ ವಿವಾದಿತ ನಕಾಶೆ ಮಸೂದೆ ಮಂಡನೆ; ಚೀನಾ ಕುಮ್ಮಕ್ಕಿನಿಂದ ಭಾರತ ವಿರೋಧಿ ನಡೆ

ಶಾಂತಿ ಮಂತ್ರ ಪಠಣ: ಪೂರ್ವ ಲಡಾಖ್‌ ಗಡಿಯಲ್ಲಿ ಉಲ್ಬಣಗೊಂಡಿರುವ ಗಡಿ ಸಂಘರ್ಷವನ್ನು ಶಾಂತಿಯುತವಾಗಿ ಪರಿ­­ಹರಿಸಿಕೊಳ್ಳುವುದಾಗಿ ಚೀನಾ ಪುನ­ರುಚ್ಚ­ರಿ­ಸಿದೆ. ಉಭಯ ದೇಶಗಳಿಂದ ಸೇನೆ ಮತ್ತು ಶಸ್ತಾಸ್ತ್ರ ಜಮಾವಣೆ ಹೆಚ್ಚಳ­ಗೊಂಡಿರುವ ಮಧ್ಯೆಯೇ ಚೀನಾ ಶಾಂತಿ ಮಂತ್ರ ಪಠಿಸಿದೆ. ''ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದು ನಿಯಂತ್ರಣದಲ್ಲಿದೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು,'' ಎಂದು ವಿದೇ­ಶಾಂಗ ಸಚಿವಾಲಯ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ