ಆ್ಯಪ್ನಗರ

ಲಡಾಖ್‌ನಲ್ಲಿ ಥರ್ಡ್ ಪಾರ್ಟಿಗೇನು ಕೆಲಸ?: ಪಾಂಪಿಯೋ ಭಾರತ ಭೇಟಿಗೆ ಚೀನಾ ಕಂಗಾಲು!

ಲಡಾಖ್ ಗಡಿ ಘರ್ಷಣೆ ಭಾರತ ಹಾಗೂ ಚೀನಾ ನಡುವಿನ ದ್ವಿಪಕ್ಷೀಯ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ಮೂರನೇ ಶಕ್ತಿ ಮಧ್ಯಪ್ರವೇಶಿಸುವುದನ್ನು ಒಪ್ಪುವುದಿಲ್ಲ ಎಂದು ಚೀನಾ ಹೇಳಿದೆ. ಲಡಾಖ್ ಗಡಿ ಘರ್ಷಣೆಯಲ್ಲಿ ಭಾರತಕ್ಕೆ ಅಮೆರಿಕ ಬೆಂಬಲ ನೀಡಿದ ಬಳಿಕ ಚೀನಾ ಈ ಹೇಳಿಕೆ ನೀಡಿದೆ.

Vijaya Karnataka Web 28 Oct 2020, 3:54 pm
ಬೀಜಿಂಗ್‌: ಲಡಾಖ್ ಗಡಿ ಘರ್ಷಣೆ ಭಾರತ ಹಾಗೂ ಚೀನಾ ನಡುವಿನ ದ್ವಿಪಕ್ಷೀಯ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ಮೂರನೇ ಶಕ್ತಿ ಮಧ್ಯಪ್ರವೇಶಿಸುವುದನ್ನು ಒಪ್ಪುವುದಿಲ್ಲ ಎಂದು ಚೀನಾ ಹೇಳಿದೆ.
Vijaya Karnataka Web 2+2 Talks
ಭಾರತ-ಅಮೆರಿಕ 2+2 ಮಾತುಕತೆ


ಭಾರತ-ಅಮೆರಿಕ ನಡುವಿನ 2+2 ಸಚಿವರ ಮಾತುಕತೆ ಬಳಿಕ, ಉಭಯ ದೇಶಗಳ ನಡುವಿನ ಸಂಬಂಧ ಗಟ್ಟಿಯಾಗಿರುವುದನ್ನು ಕಂಡು ಚೀನಾ ಬೆದರಿರುವುದು ಸ್ಪಷ್ಟ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಭಾರತ ಭೇಟಿಯಿಂದ ಚಿಂತೆಗೀಡಾಗಿರುವ ಚೀನಾ, ಲಡಾಖ್ ಗಡಿಯಲ್ಲಿ ಮೂರನೇ ಶಕ್ತಿಯ ಹಸ್ತಕ್ಷೇಪವನ್ನು ತಾನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದೆ.

ಅಪನಂಬಿಕೆ ಬಿತ್ತುವುದನ್ನು ನಿಲ್ಲಿಸಿ: ಮೈಕ್ ಪಾಂಪಿಯೋ ಭಾರತ ಭೇಟಿಯನ್ನು ಟೀಕಿಸಿದ ಚೀನಾ!

ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಲಡಾಖ್ ಗಡಿ ಸಮಸ್ಯೆಯನ್ನು ಭಾರತ-ಚೀನಾ ರಾಜತಾಂತ್ರಿಕ ಮಾತುಕತೆಗಳಿಂದ ಬಗೆಹರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಲಡಾಖ್ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕವೂ ಸೇರಿದಂತೆ ಯಾವುದೇ ಮೂರನೇ ರಾಷ್ಟ್ರದ ಹಸ್ತಕ್ಷೇಪವನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ವಾಂಗ್ ವೆನ್‌ಬಿನ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ಕಮ್ಯೂನಿಸ್ಟ್ ಚೀನಾ ವಿರುದ್ಧ ಭಾರತ-ಅಮೆರಿಕ ಒಂದಾಗಿವೆ: ಪಾಂಪಿಯೋ!

2+2 ಸಚಿವರ ಮಾತುಕತೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಲಡಾಖ್ ಗಡಿ ವಿಷಯದಲ್ಲಿ ಅಮೆರಿಕ ಭಾರತದೊಂದಿಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ