ಆ್ಯಪ್ನಗರ

ನವಯುಗದ ಚೀನಾ ಸೈಬರ್‌ಕೋರ್ಟ್‌: ಕೃತಕ ಬುದ್ದಿಮತ್ತೆ ನ್ಯಾಯಾಧೀಶರು, ವಿಚಾಟ್‌ನಲ್ಲೇ ತೀರ್ಪು!

ಚೀನಾದಲ್ಲೂನ್ಯಾಯದಾನದ ವಿಳಂಬಗತಿಯ ಸಮಸ್ಯೆ ತೀವ್ರವಾಗಿದೆ. ಇದನ್ನು ತಕ್ಕಮಟ್ಟಿಗೆ ಪರಿಹರಿಸಲು ತಂತ್ರಜ್ಞಾನದ ಬಳಕೆಗೆ ಯತ್ನಿಸಲಾಗುತ್ತಿದೆ. ಮುಖ್ಯವಾಗಿ ಇ-ಕಾಮರ್ಸ್‌, ಇಂಟರ್‌ನೆಟ್‌ ಕುರಿತ ವಿವಾದಗಳ ತ್ವರಿತ ಇತ್ಯರ್ಥಕ್ಕೆ ಇದು ಸಹಕಾರಿಯಾಗುತ್ತಿದೆ. ಹೇಗೆ? ಇಲ್ಲಿದೆ ವಿವರ.

Vijaya Karnataka Web 9 Dec 2019, 7:40 pm
ಏಜನ್ಸೀಸ್‌: ಚೀನಾದಲ್ಲೂನ್ಯಾಯದಾನದ ವಿಳಂಬಗತಿಯ ಸಮಸ್ಯೆ ತೀವ್ರವಾಗಿದೆ. ಇದನ್ನು ತಕ್ಕಮಟ್ಟಿಗೆ ಪರಿಹರಿಸಲು ತಂತ್ರಜ್ಞಾನದ ಬಳಕೆಗೆ ಯತ್ನಿಸಲಾಗುತ್ತಿದೆ. ಮುಖ್ಯವಾಗಿ ಇ-ಕಾಮರ್ಸ್‌, ಇಂಟರ್‌ನೆಟ್‌ ಕುರಿತ ವಿವಾದಗಳ ತ್ವರಿತ ಇತ್ಯರ್ಥಕ್ಕೆ ಇದು ಸಹಕಾರಿಯಾಗುತ್ತಿದೆ. ಮನುಷ್ಯರಿಲ್ಲದೆ, ಕೃತಕ ಬುದ್ಧಿಮತ್ತೆ ಆಧರಿಸಿ ಈ ನ್ಯಾಯಾಲಯ ಹೇಗೆ ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥ ಮಾಡಲಿದೆ ಎಂಬ ವಿವರ ಇಲ್ಲಿದೆ.
Vijaya Karnataka Web China syber court
ಸಾಂದರ್ಭಿಕ ಚಿತ್ರ


ಸೈಬರ್‌ ಕೋರ್ಟ್‌ ಸ್ಥಾಪನೆ:
ಚೀನಾದ ಹಂಗ್‌ಜಾವೊದಲ್ಲಿ2017ರಲ್ಲಿಸೈಬರ್‌ ಕೋರ್ಟ್‌ ಸ್ಥಾಪಿಸಲಾಗಿದೆ. ಡಿಜಿಟಲ್‌ ಆಯಾಮವಿರುವ ವಿವಾದಗಳನ್ನು ಬಗೆಹರಿಸಲಾಗುತ್ತದೆ. ಅಂದರೆ ಆನ್‌ಲೈನ್‌ ಟ್ರೇಡ್‌, ಪಾಪಿರೈಟ್‌, ಇ-ಕಾಮರ್ಸ್‌ ಸೇವೆ, ಪ್ರಾಡಕ್ಟ್$್ಸ ಕುರಿತ ಕೇಸ್‌ಗಳನ್ನು ಸೈಬರ್‌ ಕೋರ್ಟ್‌ ಕೈಗೆತ್ತಿಕೊಳ್ಳುತ್ತದೆ. ಆನ್‌ಲೈನ್‌ನಲ್ಲಿದೂರು ಸಲ್ಲಿಸಬಹುದು. ಕೋರ್ಟ್‌ ಕೇಸ್‌ ಇತ್ಯರ್ಥದ ಪ್ರಕ್ರಿಯೆಯಲ್ಲಿಆರಂಭದಿಂದ ಅಂತ್ಯದವರೆಗೆ ಡಿಜಿಟಲೀಕರಣವನ್ನು ಅಲ್ಲಿನ ಸರಕಾರ ಉತ್ತೇಜಿಸುತ್ತಿದೆ.

ಎಐ, ಬ್ಲಾಕ್‌ಚೈನ್‌ ಬಳಕೆ:
ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ), ಬ್ಲಾಕ್‌ಚೈನ್‌, ಕ್ಲೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನ ಬಳಸಿ ತ್ವರಿತ ನ್ಯಾಯದಾನ ಒದಗಿಸುವುದು ಸೈಬರ್‌ ಕೋರ್ಟ್‌ಗಳ ಉದ್ದೇಶ. ಚಾಟ್‌ ಆ್ಯಪ್‌ಗಳ ಮೂಲಕವೇ ತೀರ್ಪು ಪ್ರಕಟಿಸಲಾಗುತ್ತದೆ. ಆನ್‌ಲೈನ್‌ ಶಾಪಿಂಗ್‌ನಲ್ಲಿವಂಚನೆ, ಇಂಟರ್‌ನೆಟ್‌ ಸವೀರ್‍ಸ್‌ ಪ್ರೊವೈಡರ್‌ ಅಥವಾ ಕಂಟೆಂಟ್‌ ಪ್ರೊವೈಡರ್‌ ಒಪ್ಪಂದ ಉಲ್ಲಂಘನೆ ಕುರಿತ ಕೇಸ್‌ಗಳನ್ನು ಸೈಬರ್‌ ಕೋರ್ಟ್‌ನಲ್ಲಿದಾಖಲಿಸಬಹುದು.

ನೈಜೀರಿಯಾದಲ್ಲಿ ಕಡಲ್ಗಳ್ಳರಿಂದ ಹಡಗು ಹೈಜಾಕ್, 18 ಭಾರತೀಯರ ಕಿಡ್ನಾಪ್ !

ವಿ ಚಾಟ್‌ನಲ್ಲಿಲಕ್ಷಾಂತರ ಕೇಸ್‌ ಇತ್ಯರ್ಥ:
ಚೀನಾದ ಜನಪ್ರಿಯ ಸಾಮಾಜಿಕ ತಾಣ ವಿ ಚಾಟ್‌ ಮೂಲಕ ಕಳೆದ ಮಾರ್ಚ್ನಿಂದ 30 ಲಕ್ಷ ಕೇಸ್‌ಗಳನ್ನು ನಿರ್ವಹಿಸಲಾಗಿದೆ. ಪ್ರತಿವಾದಿಗಳು ಮತ್ತು ಫಿರ್ಯಾದಿಗಳು ನ್ಯಾಯಾಧೀಶರ ಮುಂದೆ ವೈಯಕ್ತಿಕವಾಗಿ ಹಾಜರಾಗಬೇಕಿಲ್ಲ. ವೀಡಿಯೊ ಚಾಟ್‌ ಮೂಲಕಲ ಹಾಜರಾದರೆ ಸಾಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ